ರಾಹುಲ್ ಗಾಂಧಿ ಚೈಲ್ಡಿಶ್ ಹೇಳಿಕೆ ಕೊಡೋದು ಬಿಡಬೇಕು: ಪ್ರಹ್ಲಾದ್ ಜೋಶಿ

Public TV
3 Min Read
PRALHAD JOSHI

ಬೆಂಗಳೂರು: ಸಂಸತ್ (Parliament) ಮೇಲಿನ ದಾಳಿಗೆ ನಿರುದ್ಯೋಗ ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ಚೈಲ್ಡಿಶ್ ಹೇಳಿಕೆ ಅಂತ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೇಳಿಕೆ ಚೈಲ್ಡಿಶ್ ಹೇಳಿಕೆ. ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚೆ ಆಗಲಿ ಬೇಡ ಅನ್ನೊಲ್ಲ. ನಿರುದ್ಯೋಗ ಇದೆ ಅಂತ ಹೇಳಿ ಕೊಲೆ ಮಾಡ್ತೀನಿ, ಎಂಪಿಯನ್ನ, ಕೊಲೆ ಮಾಡ್ತೀನಿ ಅಂದ್ರೆ. ಕರ್ನಾಟಕದಲ್ಲಿ ನಿರುದ್ಯೋಗ ಇಲ್ಲವಾ? ಛತ್ತೀಸ್ಗಢದಲ್ಲಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಇತ್ತು ಅಲ್ಲಿ ನಿರುದ್ಯೋಗ ಇಲ್ಲವಾ. ನಿರುದ್ಯೋಗ ಇದೆ ಅಂತ ದೇಶದ ವಿರೋಧಿ, ದೇಶದ್ರೋಹಿ, ಟೆರರಿಸ್ಟ್ ಜೊತೆ ಲಿಂಕ್ ಇಟ್ಟುಕೊಳ್ಳುವ ಸಂಘಟನೆ ಜೊತೆ ಹೀಗೆ ಮಾಡೋಕೆ ನಿಮ್ಮ ಬೆಂಬಲ ಇದೆಯಾ ರಾಹುಲ್ ಗಾಂಧಿ ಅಂತ ಪ್ರಶ್ನೆ ಮಾಡಿದ್ರು.

rahul gandhi 1

ಮರ್ಡರ್ ಮಾಡಿದವನಿಗೂ ಅವನದ್ದೇ ಲಾಜಿಕ್ ಇರತ್ತೆ. ಆದರೆ ಇದನ್ನ ಸಮಾಜ ಒಪ್ಪುತ್ತಾ? ರಾಹುಲ್ ಗಾಂಧಿ ಎಷ್ಟು ಚೈಲ್ಡಿಶ್ ಆಗಿ ಮಾತಾಡ್ತಾ ಇದ್ದೀರಾ. ಮೋದಿ ವಿರೋಧ ಮಾಡೋ ಭರದಲ್ಲಿ ರಾಷ್ಟ್ರದ್ರೋಹಿಗಳನ್ನ ಸಮರ್ಥನೆ ಮಾಡಿಕೊಳ್ತೀರಾ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಡಬೇಕು. ರಾಹುಲ್ ಹೇಳಿಕೆ ಇನ್ ಮೆಚ್ಯೂರ್ಡ್ ಹೇಳಿಕೆ. ನಿರುದ್ಯೋಗದ ಬಗ್ಗೆ ಪ್ರತ್ಯೇಕ ಚರ್ಚೆ ಮಾಡಲಿ. ಅದಕ್ಕೆ ಉತ್ತರ ಕೊಡೋಕೆ ನಾವು ತಯಾರು ಇದ್ದೇವೆ. ಜಗತ್ತಿನಲ್ಲಿ ವೇಗವಾಗಿ ಬೇಳೆಯುತ್ತಿರೋ ಆರ್ಥಿಕ ನಮ್ಮದು. ಉದ್ಯೋಗ ಸಿಗದೇ ಆರ್ಥಿಕತೆ ಬೆಳೆಯುತ್ತದೆಯಾ? ಯಾರಾದ್ರು ನಾಳೆ ಮರ್ಡರ್ ಮಾಡಿದ್ರು, ರೇಪ್ ಮಾಡಿದ್ರು ಆಗ ಅವನಿಗೆ ಕೆಲಸ ಸಿಗಲಿಲ್ಲ. ಅದಕ್ಕೆ ಮಾಡಿದ ಅಂತ ಹೇಳಿದ್ರೆ ಅದಕ್ಕೆ ಸಮರ್ಥನೆ ಇದೆಯಾ? ಸಮಾಜವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗೋಕೆ ಮಾಡ್ತಿದ್ದೀರಾ? ಈ ರೀತಿ ಸಮರ್ಥನೆ ಮಾಡೋದು ದೇಶಕ್ಕೆ ಮಾಡೋ ಅನ್ಯಾಯ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಂಸತ್‌ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

ಮೋದಿ (Narendra Modi) ಜನಪ್ರಿಯತೆ ಏನು, ಕಾಂಗ್ರೆಸ್ ಜನಪ್ರಿಯತೆ ಏನು ಅಂತ ಜನ ನೋಡಿದ್ದಾರೆ. ಕಾಂಗ್ರೆಸ್ ಸುದೈದಿಂದ ತೆಲಂಗಾಣದಲ್ಲಿ ರಾಹುಲ್ ಗಾಂಧಿ ಜಾಸ್ತಿ ಪ್ರಚಾರ ಮಾಡಲಿಲ್ಲ. ಅದೇ ನಮಗೆ ಬೇಜಾರ್ ಆಗಿದ್ದು. ರಾಹುಲ್ ಗಾಂಧಿ ತೆಲಂಗಾಣದಲ್ಲಿ ಓಡಾಡಿದ್ರೆ ಕಾಂಗ್ರೆಸ್ ಸೋಲುತ್ತಿತ್ತು. ರಾಹುಲ್ ಪ್ರಚಾರ ಮಾಡಿದ್ರೆ ಈಗ ಬಂದಿದ್ದ ಹೆಚ್ಚು ಸ್ಥಾನದಲ್ಲಿ 10-12 ಸ್ಥಾನದಲ್ಲಿ ಸೋಲ್ತಿದ್ದರು. ಮೋದಿ ಜನಪ್ರಿಯತೆ ಕಾರಣ ನಾವು ಎಲ್ಲಾ ಕಡೆ ಗೆದ್ದಿದ್ದೇವೆ. ಲೋಕಸಭೆಯಲ್ಲಿ ಎಲ್ಲಾ ಸರ್ವೆಗಳು 330 ಸ್ಥಾನಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಅಂತ ಹೇಳ್ತಿವೆ. ರಾಹುಲ್ ಗಾಂಧಿಗೆ ಇನ್ ಮೆಚ್ಯೂರಿಟಿ. ಅವರನ್ನು ನೋಡಿ ಉಳಿದವರು ಏನೇನೋ ಹೇಳ್ತಾರೆ ಅಂತ ರಾಹುಲ್ (Rahul Gandhi) ವಿರುದ್ಧ ಜೋಶಿ ಕಿಡಿಕಾರಿದರು.

congress flag

ಸಂಸತ್ ಘಟನೆ ವಿಚಾರದಲ್ಲಿ ವಿಪಕ್ಷಗಳು ಸಂಸತ್ ಘಟನೆಯಲ್ಲಿ ರಾಜಕೀಯ ಮಾಡೋದು ಬೇಡ. ದೇಶದ ಎಲ್ಲಾ ವಿಪಕ್ಷಗಳಿಗೆ ಮನವಿ ಮಾಡ್ತೀನಿ. ರಾಜಕೀಯ ಮಾಡುವ ಬದಲಿಗೆ ಏನಾದ್ರು ಸಲಹೆಗಳನ್ನ ಕೊಡಲಿ. ಈಗಾಗಲೇ ಸ್ಪೀಕರ್ ಅವರು ಹೈ ಲೆವೆಲ್ ತನಿಖೆ ನಡೆಯುತ್ತಿದೆ. ಸುರಕ್ಷತೆ ಕ್ರಮ ಏನು ಆಗಬೇಕು ಅಂತ ಸ್ಪೀಕರ್ ಕ್ರಮ ತೆಗೆದುಕೊಳ್ತಿದ್ದಾರೆ. ಸ್ವತಃ ಸ್ಪೀಕರ್ ಇದನ್ನ ಮಾನಿಟರ್ ಮಾಡುತ್ತಿದ್ದಾರೆ. ಅವರು ಕೊಟ್ಟ ಸಲಹೆಗಳನ್ನ ಭದ್ರತೆ ವಿಚಾರದಲ್ಲಿ ಜಾರಿ ಮಾಡೋ ಕೆಲಸ ಆಗುತ್ತದೆ ಎಂದರು. ಟೆಕ್ನಾಲಜಿ ಬಳಕೆ ಮಾಡಿ ಸುರಕ್ಷತೆ ಹೆಚ್ಚಳ ಮಾಡೋ ಕೆಲಸ ಮಾಡ್ತಿದ್ದೇವೆ. ಈ ಹಿಂದೆಯೂ ಸಂಸತ್ ನಲ್ಲಿ ಅನೇಕ ಘಟನೆಗಳು ನಡೆದಿವೆ. ಸಂಸತ್ ನಲ್ಲಿ ವೆಪನ್ ತಂದಿರುವ ಉದಾಹರಣೆ ಇದೆ. ಆಗ ಅಂದಿನ ಸ್ಪೀಕರ್ ಕ್ರಮ ತೆಗೆದುಕೊಂಡಿದ್ದರು. ಅದರಂತೆ ಇಂದಿನ ಸ್ಪೀಕರ್ ಕ್ರಮ ತೆಗೆದುಕೊಳ್ತಿದ್ದಾರೆ. ಅವರು ಕೊಟ್ಟ ಮತ್ತಷ್ಟು ಸಲಹೆಗಳನ್ನು ಪರಿಗಣಿಸುತ್ತೇವೆ. ಹೀಗಾಗಿ ವಿಪಕ್ಷಗಳು ಸಂಸತ್ ಕಲಾಪ ನಡೆಸೋಕೆ ಸಹಕಾರ ನೀಡಿ ಎಂದರು.

ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮಕ್ಕೆ ವಿಪಕ್ಷಗಳ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರು ಕ್ರಮ ತೆಗೆದುಕೊಳ್ತಾರೆ, ತನಿಖೆ ಆಗ್ತಿದೆ. ವರದಿ ಬಂದ ಮೇಲೆ ಸ್ಪೀಕರ್ ಕ್ರಮತೆಗೆದು ಕೊಳ್ತಾರೆ ಎಂದರು.

Share This Article