ಅಣ್ಣ ತಂಗಿಯರ ಅನುಬಂಧಕ್ಕೆ ತಾಜಾ ಉದಾಹರಣೆಯಾದ್ರು ರಾಹುಲ್-ಪ್ರಿಯಾಂಕ ಗಾಂಧಿ

Public TV
1 Min Read
Rahul Gandhi

ಲಕ್ನೋ: ಅಣ್ಣ ತಂಗಿಯರ ಅನುಬಂಧಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ತಾಜಾ ಉದಾಹರಣೆಯಾಗಿದ್ದಾರೆ. ಚುನಾವಾಣಾ ಪ್ರಚಾರದ ಅಬ್ಬರದಲ್ಲಿಯೂ ಪ್ರೀತಿ ಮೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಉತ್ತರ ಪ್ರದೇಶದ ಕಾನ್ಪುರ್ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಭೇಟಿಯಾದರು. ಈ ವೇಳೆ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಸಂಭ್ರಮಿಸಿದರು.

Rahul Gandhi A

ನಾನು ಸುಧೀರ್ಘ ಪ್ರಯಾಣ ಮಾಡುತ್ತಿದ್ದೇನೆ. ಆದರೆ ನನ್ನದು ಚಿಕ್ಕ ವಿಮಾನ. ನನ್ನ ತಂಗಿ ಸಮೀದ ಕ್ಷೇತ್ರಗಳ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಆದರೂ ಅವಳಿಗೆ ದೊಡ್ಡ ವಿಮಾನ ಎಂದು ರಾಹುಲ್ ಗಾಂಧಿ ಅವರು, ಪ್ರಿಯಾಂಕ್ ಗಾಂಧಿ ಅವರನ್ನು ರೇಗಿಸಿದರು. ಈ ವೇಳೆ ಅಲ್ಲಿ ನಿಂತಿದ್ದ ಪೈಲಟ್ ಹಾಗೂ ಸಿಬ್ಬಂದಿ ನಕ್ಕಿದ್ದಾರೆ.

ವಿಮಾನ ಏರುವುದಕ್ಕೂ ಮುನ್ನ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪೈಲಟ್‍ಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡರು. ರಾಹುಲ್ ಗಾಂಧಿ ಅವರು ಈ ಸವಿ ನೆನಪನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ‘ಚುನಾವಣೆಯ ಓಡಾಟದ ನಡುವೆ ಇದೊಂದು ಮಧುರ ಕ್ಷಣ ಎಂದು ತಿಳಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಪೋಸ್ಟ್ ಆದ 7 ಗಂಟೆಯಲ್ಲಿ 11 ಸಾವಿರ ಜನರು ಕಮೆಂಟ್ ಮಾಡಿದ್ದು, 1.3 ಲಕ್ಷ ಅಧಿಕ ಬಾರಿ ವ್ಯೂವ್ ಪಡೆದಿದೆ. ಅಷ್ಟೇ ಅಲ್ಲದೆ 13,742 ಜನರು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅಣ್ಣ-ತಂಗಿ ಭಾಂದವ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ಭಾರೀ ಸದ್ದು ಮಾಡಿತ್ತು. ಆದರೆ ಅವರ ಬದಲಾಗಿ ಅಜಯ್ ರಾಯ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಇತ್ತ ರಾಹುಲ್ ಗಾಂಧಿ ಅವರು ಅಮೇಥಿ ಹಾಗೂ ವಯನಾಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *