ನವದೆಹಲಿ: ಕೊರೊನಾದಿಂದ 4 ಕೋಟಿಗೂ ಅಧಿಕ ಜನರನ್ನು ಪ್ರಧಾನಿ ನರೇಂದ್ರ ಮೋದಿ ಬಡತನಕ್ಕೆ ತಳ್ಳಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, 4 ಸಾವಿರಕ್ಕೂ ಅಧಿಕ ಜನರು 2020ರ ನಂತರ ಕೊರೊನಾದಿಂದಾಗಿ ಭಾರತೀಯರು ಬಡವರಾಗಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ಮಾತ್ರ ಕೊರೊನಾದಿಂದ ಶ್ರೀಮಂತರಾಗಿದ್ದಾರೆ ಆಗಿದ್ದಾರೆ ಎಂದ ಅವರು ಡಾಟಾವನ್ನು ಉಲ್ಲೇಖಿಸಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?: ನಮ್ಮ 4 ಕೋಟಿ ಸಹೋದರರು ಮತ್ತು ಸಹೋದರಿಯರು ಬಡತನಕ್ಕೆ ತಳ್ಳಿದ್ದಾರೆ. ಈ 4 ಕೋಟಿ ಇದು ಕೇವಲ ಸಂಖ್ಯೆಯಲ್ಲ. ನಿಜವಾದ ಬಡವರು. ಈ 4 ಕೋಟಿ ಜನರು ಉತ್ತಮ ಅರ್ಹತೆಯನ್ನು ಹೊಂದಿದವರಾಗಿದ್ದಾರೆ. 4 ಕೋಟಿ ಜನರು ಭಾರತೀಯರು.
Advertisement
‘Vikas overflow’ only for ‘Humare Do’!
While our 4,00,00,000 brothers & sisters are pushed into poverty.
Each of these 4,00,00,000 is a real person, not just a number.
Each of these 4,00,00,000 deserved better.
Each of these 4,00,00,000 is India!#BJPfailsIndia pic.twitter.com/QQCbYliXZ3
— Rahul Gandhi (@RahulGandhi) January 23, 2022
Advertisement
ಈ ಹಿಂದೆ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ, ಸಾರ್ವಜನಿಕ ಹಕ್ಕುಗಳನ್ನು ಮೊದಲಿನಿಂದಲೂ ನಾಶ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕುಗಳು ಇಲ್ಲವೆಂದು ಆರೋಪಿಸಿದ್ದರು. ಪಾರದರ್ಶಕತೆ ಎಂಬುದು ಪ್ರಜಾಪ್ರಭುತ್ವದ ಇನ್ನೊಂದು ಹೆಸರು ಮತ್ತು ಅದನ್ನು ಪ್ರಶ್ನಿಸುವ ಹಕ್ಕು ಜನರಿಗೆ ಇದೆ ಎಂದು ಹೇಳಿದ್ದರು. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ
ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಯುವಜನರನ್ನು ಅವಕಾಶಗಳಿಂದ ವಂಚಿತಗೊಳಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಪ್ರತಿ 24 ಗಂಟೆಗಳಿಗೊಮ್ಮೆ ಸುಮಾರು 880 ಯುವಕರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಕಳೆದ 5 ವರ್ಷಗಳಲ್ಲಿ 16 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: NDRF ಟ್ವಿಟ್ಟರ್ ಖಾತೆ ಹ್ಯಾಕ್