ನವದೆಹಲಿ: ಜೈಷ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ನನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ಅಜರ್ ಮಸೂದ್ ಜೀ” ಎಂದು ಸಂಬೋಧಿಸಿ ಟೀಕೆಗೆ ಗುರಿಯಾಗಿದ್ದಾರೆ.
ಸೋಮವಾರ ರಾಹುಲ್ ಗಾಂಧಿ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಟೀಕಿಸುವ ಭರದಲ್ಲಿ ಮಸೂದ್ ಜೀ ಎಂದು ಕರೆದು ಎಡವಟ್ಟು ಮಾಡಿಕೊಂಡಿದ್ದಾರೆ.
Advertisement
ಈ ಹಿಂದಿನ ಎನ್‍ಡಿಎ ಸರ್ಕಾರ ಇದ್ದಾಗ ಈಗಿನ ಎನ್‍ಎಸ್‍ಜಿ ಅಜಿತ್ ದೋವಲ್ ಅವರು ಮಸೂದ್ ಅಜರ್ ಜೀ ಜೊತೆ ವಿಮಾನದಲ್ಲಿ ಅಫ್ಘಾನಿಸ್ತಾನದ ರಾಜಧಾನಿ ಕಂದಹಾರಿಗೆ ತೆರಳಿ ಆತನನ್ನು ಬಿಟ್ಟು ಬಂದರು ಎಂದು ಹೇಳಿದ್ದಾರೆ.
Advertisement
Masood Azhar of Jaish-e-Mohammad was responsible for the Pulwama terror attack. The truth is, it was BJP govt that handed over Masood Azhar to Pakistan and current NSA Ajit Doval was involved in it: Congress President @RahulGandhi #DelhiMaangeCongress pic.twitter.com/s0jScjaIRC
— Congress (@INCIndia) March 11, 2019
Advertisement
ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸಲಿರುವ ಸ್ಮೃತಿ ಇರಾನಿ, ಪಾಕಿಸ್ತಾನಕ್ಕೂ ಮತ್ತು ರಾಹುಲ್ ಗಾಂಧಿ ಅವರಿಗೆ ಇರುವ ವ್ಯತ್ಯಾಸ ಏನು ಎಂದು ಪ್ರಶ್ನಿಸಿ ಇಬ್ಬರು ಭಯೋತ್ಪಾದಕರನ್ನು ಪ್ರೀತಿಸುತ್ತಾರೆ ಎಂದು #RahulLovesTerrorists ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
ಈ ಹಿಂದೆ ಮಧ್ಯಪ್ರದೇಶ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮತ್ತು ಹಫೀಜ್ ಸಯೀದ್‌ನನ್ನು ‘ಒಸಾಮಾಜೀ’ ಮತ್ತು ‘ಸಾಹೇಬ್’ ಎಂದು ಸಂಬೋಧಿಸಿ ವಿವಾದಕ್ಕೆ ಈಡಾಗಿದ್ದರು.
What is common between Rahul Gandhi and Pakistan?
Their love for terrorists.
Please note Rahul ji’s reverence for terrorist Masood Azhar – a testimony to #RahulLovesTerrorists pic.twitter.com/CyqoZ7b9CF
— Smriti Z Irani (@smritiirani) March 11, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv