ನವದೆಹಲಿ: ಕೋವಿಡ್-19 ಮಾರಕ ರೋಗವಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಇಂದು ಸುದ್ದಿಗೋಷ್ಠಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ನಡೆಸಿ ಕೊರೊನಾ ವೈರಸ್ ಬಗ್ಗೆ ಜನರಿಗೆ ಸಂಬಂಧಿಸಿದ ವಿವಿಧ ವಿಷಯಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಜೊತೆಗೆ ಪ್ರಮುಖ ಅರ್ಥಶಾಸ್ತ್ರಜ್ಞರಾದ ರಘುರಾಮ್ ರಾಜನ್ ಮತ್ತು ಪ್ರೊಫೆಸರ್ ಅಭಿಜೀತ್ ಬ್ಯಾನರ್ಜಿ ಅವರೊಂದಿಗೆ ಅನೌಪಚಾರಿಕ ಚಾಟ್ ನಡೆಸಿ, ಕೋವಿಡ್ -19 ನಂತರದ ದಿನಗಳಲ್ಲಿ ಮುಂದಿನ ದಾರಿ ಕುರಿತು ಚರ್ಚಿಸಿದ್ದಾರೆ.
Advertisement
Advertisement
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು 3 ಪ್ರಮುಖ ವಿಷಯಗಳಿಗೆ ಒತ್ತು ನೀಡಿದ್ದಾರೆ. ಲಾಕ್ಡೌನ್ ವಿಸ್ತರಣೆ, ಕೈಬಿಡುವ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ವಿಕೇಂದ್ರೀಕರಿಸುವುದು ಅವಶ್ಯವಾಗಿದೆ. ಕೋವಿಡ್-19 ಬಗ್ಗೆ ಜನರಲ್ಲಿ ಇರುವ ಭಯವನ್ನು ಅಳಿಸಿಹಾಕಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಅದು ಮಾರಕ ರೋಗವಲ್ಲ ಎಂದು ತಿಳಿಸಬೇಕು. ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರು, ಕಷ್ಟದಲ್ಲಿರುವ ಜನರಿಗೆ ವಿಳಂಬ ಮಾಡದೇ ನೇರ ನಗದು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಕೋವಿಡ್-19 ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಸಾಮಾನ್ಯ ಸ್ಥಿತಿಯನ್ನು ತರಲು ಸಮಯದ ಅವಶ್ಯಕತೆಯಿದೆ. ವಯಸ್ಸಾದವರು, ಮಧುಮೇಹಿಗಳು ಮತ್ತು ಉಸಿರಾಟದ ವೈದ್ಯಕೀಯ ಪರಿಸ್ಥಿತಿ ಇರುವವರಿಗೆ ಮಾತ್ರ ಕೊರೊನಾ ಅಪಾಯಕಾರಿಯಾಗಿದೆ. ಹೀಗಾಗಿ ದುಡಿಯುವ ವರ್ಗಗಳ ಮಾನಸಿಕ ಬದಲಾವಣೆಯ ಅವಶ್ಯಕತೆಯಿದೆ. ಜನರಲ್ಲಿರುವ ಕೊರೊನಾ ಭಯವನ್ನು ಕಡಿಮೆ ಮಾಡಬೇಕಿದೆ ಎಂದು ರಾಹುಲ್ ಗಾಂಧಿ, ಕೇಂದ್ರ ಸಕಾರ್ರಕ್ಕೆ ಸಲಹೆ ನೀಡಿದರು.
Advertisement
ಲಾಕ್ಡೌನ್ಗೂ ಮುನ್ನ ಕೋವಿಡ್-19 ಮಾರಣಾಂತಿಕ ಕಾಯಿಲೆಯಾಗಿರಲಿಲ್ಲ. ಕೊರೊನಾ ವೈರಸ್ ಸೋಂಕಿತರಲ್ಲಿ ಶೇ.1ರಷ್ಟು ಜನರಿಗೆ ಮಾತ್ರ ಪರಿಣಾಮ ಬೀರುತ್ತದೆ. ಇದು ಎಲ್ಲರಿಗೂ ಮಾರಕ ರೋಗವಲ್ಲ ಎಂಬ ಅರಿವನ್ನು ಸರ್ಕಾರ ಮೂಡಿಸಬೇಕಿದೆ ಎಂದು ಹೇಳಿದರು.
ಔರಂಗಾಬಾದ್ ರೈಲು ದುರಂತದಲ್ಲಿ 15 ವಲಸಿಗರು ಸಾವನ್ನಪ್ಪಿದ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮನೆಗಳಿಗೆ ಮರಳುತ್ತಿರುವ ಕೂಲಿ ಕಾರ್ಮಿಕರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಬಂಧಿಸಲಾಗುತ್ತಿದೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾತುಕತೆ ನಡೆಸಿ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ಕಳಿಸಿಕೊಡುವ ಭರವಸೆ ನೀಡಬೇಕಿದೆ ಎಂದರು. ಇದನ್ನೂ ಓದಿ: 36 ಕಿ.ಮೀ ನಡೆದು ದಣಿವಾಗಿ ಮಲಗಿದ್ರು- ನಿದ್ದೆಯಲ್ಲೇ ಛಿದ್ರಛಿದ್ರವಾಯ್ತು 15 ಮಂದಿಯ ದೇಹ