– ಚುನಾವಣಾ ಆಯೋಗದ ಆಯುಕ್ತರಿಗೆ ರಾಗಾ ಬಿಗ್ ವಾರ್ನಿಂಗ್
ನವದೆಹಲಿ: ನಾವು ಸತ್ಯದ ಬೆನ್ನಿಗೆ ನಿಂತು ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್ (RSS) ಸರ್ಕಾರವನ್ನ ದೇಶದಿಂದ ಖಾಲಿ ಮಾಡಿಸುತ್ತೇವೆ, ಇದು ನನ್ನ ಗ್ಯಾರಂಟಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅಬ್ಬರಿಸಿದರು.
ʻವೋಟ್ ಚೋರಿʼ ವಿರೋಧಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ (Ramleela Maidan) ನಡೆದ ಬೃಹತ್ ಸಮಾವೇಶ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಆರ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರಿಯಾಗಿ ಚುನಾವಣೆ ನಡೆದರೆ ಬಿಜೆಪಿ ಒಂದು ಸ್ಥಾನ ಗೆಲುವುದಿಲ್ಲ: ಪ್ರಿಯಾಂಕಾ ಗಾಂಧಿ
LIVE: VOTE CHOR GADDI CHHOD! Mega Rally | Ramleela Maidan, New Delhi https://t.co/S2gdwL3hap
— Congress (@INCIndia) December 14, 2025
ಆರ್‌ಎಸ್‌ಎಸ್‌ಗೆ ಸತ್ಯಕ್ಕಿಂತ ಅಧಿಕಾರ ಮುಖ್ಯ
ಸತ್ಯ ಅತ್ಯಂತ ಅವಶ್ಯಕ ಎಂದು ಗಾಂಧಿ ಹೇಳುತ್ತಿದ್ದರು. ನಮ್ಮ ಧರ್ಮದಲ್ಲಿ ಸತ್ಯವನ್ನ ಅತ್ಯಂತ ಮುಖ್ಯ ಎಂದು ಭಾವಿಸಲಾಗಿದೆ. ಅದಕ್ಕಾಗಿ ಧರ್ಮದಲ್ಲಿ ʻಸತ್ಯಂ, ಶಿವಂ ಸುಂದರಂʼ ಎಂದು ಉಲ್ಲೇಖಿಸಿದೆ. ಆದರೆ ವಿಶ್ವ ಸತ್ಯ ಅಲ್ಲ ಶಕ್ತಿಯನ್ನು ನೋಡುತ್ತದೆ. ಯಾರ ಬಳಿಕ ಶಕ್ತಿ ಇದೆ ಅವರನ್ನು ಒಪ್ಪಿಕೊಳ್ಳುತ್ತೆ. ಈ ವಿಚಾರಧಾರೆ ಆರ್‌ಎಸ್‌ಎಸ್ ಸಿದ್ಧಾಂತ. ಅವರಿಗೆ ಸತ್ಯ ಅಲ್ಲ ಅಧಿಕಾರ ಮುಖ್ಯ. ಈಗ ಅಸತ್ಯ – ಸತ್ಯದ ನಡುವೆ ಹೋರಾಟ ನಡೆಯತ್ತಿದೆ. ನಾವು ಸತ್ಯದ ಹಿಂದೆ ನಿಂತು ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್ ಸರ್ಕಾರವನ್ನ ದೇಶದಿಂದ ಖಾಲಿ ಮಾಡಿಸುತ್ತೇವೆ. ಇದು ನನ್ನ ಗ್ಯಾರಂಟಿ ಎಂದು ಗುಡುಗಿದರು.
गांधी जी कहते थे- सत्य सबसे जरूरी चीज है।
हमारे धर्म में ‘सत्यम शिवम् सुन्दरम्’ और ‘सत्यमेव जयते’ के बारे में भी बात कही गई है, लेकिन मोहन भागवत कहते हैं- विश्व सत्य को नहीं शक्ति को देखता है, जिसके पास शक्ति है, उसे माना जाता है।
ये RSS और मोहन भागवत की सोच है।
जहां एक तरफ… pic.twitter.com/McLq8aHY9b
— Congress (@INCIndia) December 14, 2025
ಚುನಾವಣಾ ಆಯುಕ್ತರಿಗೆ ರಾಗಾ ಬಿಗ್ ವಾರ್ನಿಂಗ್
ಮುಂದುವರಿದು… ಚುನಾವಣೆ ವೇಳೆ ಹತ್ತು ಸಾವಿರ ನೀಡುತ್ತಾರೆ. ಆದರೆ ಆಯೋಗ ಯಾವುದೇ ಆಕ್ಷೇಪಣೆ ಮಾಡುವುದಿಲ್ಲ. ಚುನಾವಣಾ ಆಯೋಗ ಬಿಜೆಪಿ ಸರ್ಕಾರದ ಜೊತೆಗೆ ನಿಂತು ಕೆಲಸ ಮಾಡುತ್ತಿದೆ. ಆಯೋಗಕ್ಕಾಗಿ ಈ ಸರ್ಕಾರ ಹೊಸ ಕಾನೂನು ಜಾರಿ ಮಾಡಿತು. ಹಾಗಾಗಿ ಆಯುಕ್ತರು ಏನೇ ಮಾಡಿದರು ಅವರ ವಿರುದ್ಧ ಕ್ರಮ ಇಲ್ಲ. ಆಯೋಗದ ಆಯುಕ್ತರಿಗೆ ಹೇಳುತ್ತೇನೆ ಮೋದಿ ಚುನಾವಣಾ ಆಯುಕ್ತರಲ್ಲ, ಮುಂದೆ ಅಸತ್ಯದ ಜೊತೆಗೆ ನಿಂತಿರುವ ಅಧಿಕಾರಿಗಳನ್ನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಕಹಳೆ – ಸಿದ್ದರಾಮಯ್ಯ, ಡಿಕೆಶಿ, ಸಚಿವರು, ಶಾಸಕರು ಭಾಗಿ
नरेंद्र मोदी का चेहरा देखिए, आपको पता चल जाएगा कि उनका कॉन्फिडेंस ख़त्म हो गया है।
वे जानते हैं कि उनकी ‘वोट चोरी’ पकड़ी गई है।
: नेता विपक्ष श्री @RahulGandhi
📍रामलीला मैदान, दिल्ली pic.twitter.com/jGLM0nUGOL
— Congress (@INCIndia) December 14, 2025
ಬ್ರೆಜಿಲ್ ಮಹಿಳೆ 22 ಬಾರಿ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ತಾತಾರೆ. ಎರಡೆರಡು ಕಡೆ ಮತದ ಹಕ್ಕು ಹೊಂದಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಆಯೋಗ ಈವರೆಗೂ ಉತ್ತರ ಕೊಟ್ಟಿಲ್ಲ. ನನ್ನ ಆರೋಪಗಳ ಮೇಲೆ ಸಂಸತ್‌ನಲ್ಲಿ ಚರ್ಚೆ ಮಾಡಲು ಬಿಜೆಪಿ ತಯಾರಿಲ್ಲ. ಇಂದು ಅವರ ಬಳಿಕ ಅಧಿಕಾರ ಇರಬಹುದು. ಇವರ ಕೈಯಿಂದ ಅಧಿಕಾರ ಹೊಗ್ತಿದ್ದಂತೆ ಅವರ ಧೈರ್ಯ ಏನಾಗುತ್ತೆ ನೋಡಿ ಎಂದು ಹೇಳಿದರು. ಇದನ್ನೂ ಓದಿ: ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್ – ಗ್ರಾಪಂ, ಬ್ಲಾಕ್, ಪುರಸಭೆಯಲ್ಲಿ ಯುಡಿಎಫ್ ಮೈತ್ರಿಕೂಟಕ್ಕೆ ದೊಡ್ಡ ಜಯ
ಸತ್ಯ, ಅಹಿಂಸೆಯಿಂದ ಸೋಲಿಸುತ್ತೇವೆ
ಮೋದಿ ಸರ್ಕಾರ ಇಬ್ಬರು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ಸತ್ಯದ ಗೆಲುವುವಾಗಲಿದೆ. ಮೋದಿ, ಅಮಿತ್ ಶಾ ಏನ್ ಭಾಷಣ ಮಾಡಬೇಕು ಮಾಡಲಿ. ಆದ್ರೆ ನಾವು ದ್ವೇಷ, ಹಿಂಸೆಯಿಂದಲ್ಲ, ಸತ್ಯ ಮತ್ತು ಅಹಿಂಸೆಯಿಂದ ಅವರನ್ನ ಸೋಲಿಸುತ್ತೇವೆ. ಮೋದಿ ಅವರ ಮುಖ ನೋಡಿ ಜವರ ವಿಶ್ವಾಸ ಕುಗ್ಗಿ ಹೋಗಿದೆ ಎಂದು ಕುಟುಕಿದರು.

