ನವದೆಹಲಿ: ದೇಶದಲ್ಲಿರುವ ನಿರುದ್ಯೋಗ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ನಿರುದ್ಯೋಗದಿಂದ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
बेरोज़गारी के कारण आत्महत्या बढ़ीं
और बेरोज़गारी किसके कारण बढ़ी?
केंद्र सरकार इस बेरोज़गारी आपातकाल के लिए ज़िम्मेदार है।#KiskeAccheDin pic.twitter.com/Zxr2MwD6K7
— Rahul Gandhi (@RahulGandhi) February 12, 2022
ರಾಹುಲ್ ಗಾಂಧಿ ಟ್ವೀಟ್‍ನಲ್ಲಿ ಏನಿದೆ?: ನಿರುದ್ಯೋಗದಿಂದ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿರುದ್ಯೋಗ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಹೊಣೆ. ಸಾಲ ಹಾಗೂ ನಿರುದ್ಯೋಗದಿಂದ 2018 ಮತ್ತು 2020ರ ನಡುವೆ ಸುಮಾರು 25 ಸಾವಿರ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮವೊಂದರ ವರದಿಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ. ಕೈಸೆ ಅಚ್ಚೆ ದಿನ್ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
24% increase in suicides due to unemployment.
84% families saw a decline in income.
Yet, Modi and his ministers call these difficult times as ‘Amrit Kaal’.
This is India’s ‘Andh Kaal’ with an ‘Andha Raja’ as PM.
— Mallikarjun Kharge (@kharge) February 12, 2022
ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್‍ನಲ್ಲಿ ಏನಿದೆ?: ನಿರುದ್ಯೋಗದಿಂದ ಶೇಕಡಾ 24 ರಷ್ಟು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಶೇಕಡಾ 84 ರಷ್ಟು ಕುಟುಂಬಗಳಲ್ಲಿ ಆದಾಯ ಕುಸಿತವಾಗಿದೆ. ಆದಾಗ್ಯೂ ಮೋದಿ ಮತ್ತು ಅವರ ಸಚಿವರು ಇಂತಹ ಕಷ್ಟದ ಕಾಲವನ್ನು ಅಮೃತ ಕಾಲ ಎಂದು ಹೇಳುತ್ತಾರೆ. ಇದು ಅಂಧ ರಾಜನೊಂದಿಗೆ ಅಂಧಕಾಲದ ಭಾರತ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ. ನಿರುದ್ಯೋಗ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.