ಚಿತ್ರದುರ್ಗ: ಇಷ್ಟಲಿಂಗ ಪೂಜೆ ಬಗ್ಗೆ ಹೇಳಿಕೊಡಲು ದೆಹಲಿಗೆ ಬರಲು ಹೇಳಿದ್ದಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.
Advertisement
ರಾಹುಲ್ ಗಾಂಧಿ ಅವರಿಗೆ ಲಿಂಗ ಧಾರಣೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಭೇಟಿ, ಇದೊಂದು ಸೌಜನ್ಯದ ಭೇಟಿಯಾಗಿದೆ. ನಮ್ಮೊಂದಿಗೆ ಸಂವಾದ ವೇಳೆ ರಾಹುಲ್ ಕೆಲ ಪ್ರಶ್ನೆ ಕೇಳಿದರು. ನೀವು ಯಾವ ಸಿದ್ಧಾಂತ ಪ್ರಚಾರ ಮಾಡುತ್ತೀರಿ ಎಂದು ಕೇಳಿದರು. ನಾವು ಬಸವ ತತ್ವ ಪ್ರಚಾರ ಮಾಡುತ್ತೇವೆ ಎಂದೆವು. ಬಸವಣ್ಣ ಅವರು ಜಗತ್ತಿಗೆ ಏನು ಬೋಧನೆ ಮಾಡಿದ್ದಾರೆಂದು ಕೇಳಿದರು. ಕಾಯಕ, ದಾಸೋಹ, ಸಾಮಾಜಿಕ ಸಮಾನತೆ ಎಂದೆವು. ಯಾವ ರೀತಿಯ ಪೂಜೆ, ಪ್ರಾರ್ಥನೆ ಮಾಡುತ್ತೀರಾ ಎಂದು ಕೇಳಿದರು. ಇಷ್ಟಲಿಂಗ ಪೂಜೆ ಬಗ್ಗೆ ನಾವು ಹೇಳಿದೆವು. ಆಗ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಲು ಮನವಿ ಮಾಡಿದರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ
Advertisement
Advertisement
Advertisement
ನಾವು ಇಪ್ಪತ್ತು ನಿಮಿಷಕಾಲ ಇಷ್ಟ ಲಿಂಗದ ಪ್ರಾತ್ಯಕ್ಷಿಕೆ ಮಾಡಿದೆವು. ಬಳಿಕ ಇಷ್ಟ ಲಿಂಗ ಧರಿಸುವಿರಾ ಎಂದು ನಾವು ಕೇಳಿದೆವು. ಆಗ ಸಂತೋಷದಿಂದ ರಾಹುಲ್ ಗಾಂಧಿ ಇಷ್ಟಲಿಂಗ ಧಾರಣೆ ಮಾಡಿಕೊಂಡರು. ರಾಹುಲ್‍ಗೆ ಇಷ್ಟಲಿಂಗ ಧಾರಣೆ, ಧಿಕ್ಷೆ ನೀಡಿ ಹಣೆಗೆ ವಿಭೂತಿ ಹಚ್ಚಿದೆವು. ಈಗ ನೀವು ಬಸವ ಭಕ್ತರಾದಿರಿ ಎಂದು ಹೇಳಿದಾಗ ಖುಷಿ ಪಟ್ಟರು. ಇದೊಂದು ನೆನಪಿನಲ್ಲಿ ಉಳಿಯುವಂಥ ಸಂದರ್ಭವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಷ್ಟಲಿಂಗ ಪೂಜೆ ಬಗ್ಗೆ ಹೇಳಿಕೊಡಲು ದೆಹಲಿಗೆ ಬರಲು ಹೇಳಿದ್ದಾರೆ. ಯಾರಾದರೂ ಸ್ವಾಮಿಗಳನ್ನು ಕಳಿಸುತ್ತೇವೆ ಅಥವಾ ನಮ್ಮಿಂದಾದರೆ ನಾವೇ ಹೋಗುತ್ತೇವೆ. ಈ ಬಗ್ಗೆ ಚರ್ಚೆ ಮಾಡಿ, ಪ್ರಾತ್ಯಕ್ಷಿಕೆ ನೋಡಿದ ಬಳಿಕ ಲಿಂಗಧಾರಣೆ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು
ಕೋಟೆನಾಡು ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿ, ವಿಭೂತಿ ಹಚ್ಚಿದ ಮುರುಘಾಶ್ರೀಗಳು ತತ್ವದ ಉಪದೇಶ ಮಾಡಿದರು. ಈ ವೇಳೆ ರಾಹುಲ್ ಗಾಂಧಿ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲಾ, ವೇಣುಗೋಪಾಲ, ಕೆಪಿಪಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸಾಥ್ ನೀಡಿದರು.