ಚಾಮರಾಜನಗರ: ರಾಜ್ಯವನ್ನು ಆಳುತ್ತಿರುವವರು ದೇಶ ಭಕ್ತರೂ ಅಲ್ಲ, ಧರ್ಮ ರಕ್ಷಕರೂ ಅಲ್ಲ. 40% ಕಳ್ಳರು. ರಾಷ್ಟ್ರದಲ್ಲಿ ಅತಿ ಭ್ರಷ್ಟ ಸರ್ಕಾರ ಕರ್ನಾಟಕ ಸರ್ಕಾರ ಎಂದು ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಿಂದ (Chamarajanagar) ಮೈಸೂರಿನ (Mysuru) ನಂಜನಗೂಡಿನ ತಾಂಡವಪುರದ ಬಳಿ 2ನೇ ದಿನದ ಪಾದಯಾತ್ರೆ ಅಂತ್ಯಗೊಳಿಸಿದ ರಾಹುಲ್, ಬಿಜೆಪಿ ವಿರುದ್ಧ ಹರಿಹಾಯ್ದರು. ಕರ್ನಾಟಕ, ಹಿಂದೂಸ್ಥಾನದಲ್ಲಿ ಅಣ್ಣ-ತಮ್ಮಂದಿರಲ್ಲಿ ದ್ವೇಷ. ಹಿಂಸೆ ಹರಡಲಾಗುತ್ತಿದೆ ಅಂತ ದೂರಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಷ್ಟ್ರದ್ರೋಹಿ ಮುಸ್ಲಿಮರ ವೋಟು ಬೇಡ ಎಂದು ಹೇಳಲಿ – ಈಶ್ವರಪ್ಪ
Advertisement
Advertisement
ರಾಹುಲ್ ಭಾಷಣವನ್ನು ಯತೀಂದ್ರ ಅನುವಾದ ಮಾಡಿದ್ದಕ್ಕೆ ರಾಹುಲ್ ಶೇಕ್ ಹ್ಯಾಂಡ್ ಮಾಡಿದರೆ, ಡಿಕೆಶಿ ಬೆನ್ನು ತಟ್ಟಿದ್ದರು. ಚಾಮರಾಜನಗರ ತೊಂಡವಾಡದಿಂದ ಬೆಳಗ್ಗೆ ಪಾದಯಾತ್ರೆ ಆರಂಭಿಸಿದ್ದ ರಾಹುಲ್‍ಗೆ ಸಿದ್ದರಾಮಯ್ಯ (Siddaramaiah), ಡಿ.ಕೆ. ಶಿವಕುಮಾರ್ (D.K.Shivakumar) ಸೇರಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು.
Advertisement
Advertisement
ನಂಜನಗೂಡು (Nanjanagudu) ತಾಲೂಕಿನ ಎಲಚಗೆರೆ ಬೋರೆ ಮಾರ್ಗ ಮಧ್ಯೆ ರಸ್ತೆಬದಿಯ ಮನೆಯೊಂದರಲ್ಲಿ ರಾಹುಲ್ ಟೀ ಸೇವಿಸಿದರು. ನಂಜನಗೂಡಿನ ಕಳಲೆಯ ಹೊರಭಾಗದಲ್ಲಿ ಊಟ ಮಾಡಿದರು. ನಾಳೆ ನಂಜನಗೂಡಿನ ತಾಂಡವಪುರದಿಂದ ಬಸನವಾಳು, ನಂಜನಗೂಡು ದೇಗುಲಕ್ಕೆ ಭೇಟಿ ಕೊಡಲಿದ್ದಾರೆ. 1927ರ ಗಾಂಧೀಜಿ ಬದನವಾಳುಗೆ ಭೇಟಿ ಕೊಟ್ಟಿದ್ದರು. ಇದನ್ನೂ ಓದಿ: ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್ ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ
ಶುಕ್ರವಾರ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪೇ ಸಿಎಂ (Pay cm) ಟೀ-ಶರ್ಟ್ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಆಗಿದೆ. ಇದನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಖಂಡಿಸಿದ್ದು, ನಾಳೆ ನಾವೂ `ಪೇ ಸಿಎಂ’ ಟೀ-ಶರ್ಟ್ ಧರಿಸುತ್ತೇವೆ. ನಮ್ಮನ್ನೂ ಅರೆಸ್ಟ್ ಮಾಡಿ ಅಂತ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.