ನವದೆಹಲಿ: ವರ್ಷಾಂತ್ಯಕ್ಕೆ ಎಲ್ಲರಿಗೂ ಪೂರ್ಣ ಪ್ರಮಾಣದ ಲಸಿಕೆ ಪೂರೈಸುವ ಬಗ್ಗೆ ಕೇಂದ್ರ ಸರ್ಕಾರ ನೀಡುವುದಾಗಿ ಹೇಳಿತ್ತು. ಆದರೆ ಈ ಭರವಸೆಯನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: 2021ರ ಅಂತ್ಯಕ್ಕೆ ಅರ್ಹ ಎಲ್ಲರಿಗೂ ಎರಡು ಡೋಸ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಇಂದು ವರ್ಷದ ಕೊನೆಯ ದಿನ. ರಾಷ್ಟ್ರದಲ್ಲಿ ಲಸಿಕೆಯ ಅಭಾವ ಎದುರಿಸುತ್ತಿದೆ. ಇದು ಮತ್ತೊಂದು ಭಾಷಣಕಲೆಯ ವೈಫಲ್ಯ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬುರ್ಖಾ ಧರಿಸಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿದ ಸಾಯಿ ಪಲ್ಲವಿ
Advertisement
केंद्र सरकार का वादा था कि #2021 के अंत तक सबको दोनों डोज़ वैक्सीन लगाएँगे।
आज साल का अंत है-
देश अब भी वैक्सीन से दूर,
एक और जुमला चकनाचूर!#VaccinateIndia pic.twitter.com/9uL0NwIwQc
— Rahul Gandhi (@RahulGandhi) December 31, 2021
Advertisement
ರಾಷ್ಟ್ರದಾದ್ಯಂತ ಶುಕ್ರವಾರ ಮಧ್ಯಾಹ್ನದ ವೇಳೆಗೆ ಸುಮಾರು 114.67 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 84.51 ಕೋಟಿಗೂ ಹೆಚ್ಚು ಮಂದಿ ಮೊದಲ ಡೋಸ್ ಪಡೆದಿದ್ದಾರೆ. 60.15 ಕೋಟಿಗೂ ಹೆಚ್ಚು ಮಂದಿಗೆ ಎರಡನೇ ಡೋಸ್ ಸಿಕ್ಕಿದೆ. 18 ವರ್ಷಕ್ಕಿಂತ ಮೇಲ್ಪಟ್ಟ, ಅರ್ಹ ಮಂದಿ 94 ಕೋಟಿಗೂ ಹೆಚ್ಚಿದ್ದಾರೆ. ಕೊರೊನಾ, ಓಮಿಕ್ರಾನ್ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಮಾಲ್, ಸಿನಿಮಾ ಥಿಯೇಟರ್, ಹೋಟೆಲ್‍ಗಳು ಸೇರಿದಂತೆ ಸಾರ್ವಜನಿಕರು ಸೇರುವ ಪ್ರದೇಶಗಳಿಗೆ ಬರುವರಿಗೆ ಲಸಿಕೆ ಪಡೆದಿರುವುದನ್ನು ಕಡ್ಡಾಯ ಮಾಡಲಾಗಿದೆ. ಇದನ್ನೂ ಓದಿ: ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡು- ರೆಸಾರ್ಟ್‍ಗಳೆಲ್ಲ ಹೌಸ್ ಫುಲ್
Advertisement
Advertisement
2021ರ ಅಂತ್ಯಕ್ಕೆ ಕೋವಿಡ್-19 ಸೋಂಕಿನ ವಿರುದ್ಧ ಅರ್ಹ ಎಲ್ಲರಿಗೂ ಎರಡು ಡೋಸ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಜೂನ್ ತಿಂಗಳಲ್ಲಿ ಸುಪ್ರೀಂ ಕೋರ್ಟ್‍ಗೆ ತಿಳಿಸಿತ್ತು.