ರಾಯ್ಪುರ: ಶ್ರೀಮಂತರಿಗಾಗಿ, ಬಡವರಿಗಾಗಿ ಭಾರತವನ್ನು 2 ವಿಭಾಗವಾಗಿ ವಿಭಜಿಸಲಾಗಿದೆ. ಕೇಂದ್ರ ಸರ್ಕಾರ ಬಡವರಿಂದ ಹಣವನ್ನು ಪಡೆದು ಶ್ರೀಮಂತರಿಗೆ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ಧಾರೆ.
ರಾಯ್ಪುರದ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾನು ನಿನ್ನೆ ಲೋಕಸಭೆಯಲ್ಲಿ ಭಾಷಣ ಮಾಡಿದ್ದು, ಅದರಲ್ಲಿ ದೇಶ ಎದುರಿಸುತ್ತಿರುವ ಎರಡು-ಮೂರು ಸವಾಲುಗಳ ಬಗ್ಗೆ ಮಾತನಾಡಿದ್ದೆ. ಬಿಜೆಪಿ ಮತ್ತು ಅದರ ಸಿದ್ಧಾಂತಗಳು ನಮ್ಮ ದೇಶವನ್ನು ಅಪಾಯದತ್ತ ಕೊಂಡೊಯ್ಯುತ್ತಿವೆ. ಮೊದಲ ಗಂಭೀರ ಅಪಾಯವೆಂದರೆ ಬಿಜೆಪಿ ದೇಶವನ್ನು ಎರಡು ದೇಶಗಳಾಗಿ ವಿಭಜಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಓವೈಸಿಗೆ ಝಡ್ ಮಾದರಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ
Advertisement
Advertisement
ಭಾರತವು ಪುಷ್ಪಗುಚ್ಛವಾಗಿದ್ದು, ಯಾವುದೇ ನಿರ್ದಿಷ್ಟ ಸಿದ್ಧಾಂತವನ್ನು ಇತರರ ಮೇಲೆ ಹೇರುವುದು ಸರಿಯಲ್ಲ. ಭಾರತವು ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಸೇರಿಲ್ಲ. ಆದರೆ ವಿವಿಧ ರಾಜ್ಯಗಳಿಂದ ಬಂದ ನಂಬಿಕೆಗಳಿಗೆ ಸೇರಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ತಮ್ಮ ಸಿದ್ಧಾಂತವನ್ನು ಎಲ್ಲಾ ರಾಜ್ಯಗಳ ಮೇಲೆ ಹೇರಲು ಬಯಸುತ್ತವೆ. ಬಿಜೆಪಿ ದೇಶಾದ್ಯಂತ ದ್ವೇಷ ಹರಡಿದೆ. ದೇಶಭಕ್ತಿ ಎಂದರೆ ದೇಶವನ್ನು ಬಲಪಡಿಸುವುದು ಮತ್ತು ಒಗ್ಗೂಡಿಸುವುದು ಎಂದಿದ್ದಾರೆ.
Advertisement
Advertisement
ಶೇ.40 ರಷ್ಟು ಜನರು ಹಸಿವು ಮತ್ತು ಬಡತನದಿಂದ ಹೋರಾಡುತ್ತಿರುವಾಗ, ಪ್ರಧಾನ ಮಂತ್ರಿಯ 5-10 ಬಂಡವಾಳಶಾಹಿ ಸ್ನೇಹಿತರು ಎಲ್ಲಾ ಸಂಪತ್ತನ್ನು ಸಂಗ್ರಹಿಸುತ್ತಾರೆ, ನಮಗೆ ಅಂತಹ ದೇಶ ಬೇಡ. ದೇಶವು ಹಾಗೆ ಆಗಲು ನಾವು ಬಿಡುವುದಿಲ್ಲ ಎಂದು ವಾಗ್ಧಾಳಿ ಮಾಡಿದ್ದಾರೆ.