ನವದೆಹಲಿ: ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳಲ್ಲಿರುವ ಮಹಾಪುರುಷರೆಲ್ಲರೂ ಹೆದರಬೇಡಿ, ಹೆದರಿಸಿಬೇಡಿ ಎನ್ನುವ ಮೂಲಕ ಅಹಿಂಸೆ ಮತ್ತು ಭಯವನ್ನು ಮುಗಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮನ್ನು ತಾವು ಹಿಂದೂ (Hindu) ಎಂದು ಕರೆದುಕೊಳ್ಳುವ ಬಿಜೆಪಿ ನಾಯಕರು ಹಿಂಸೆ, ದ್ವೇಷ ಹರಡುತ್ತಿದ್ದಾರೆ. ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಆಕ್ರೋಶ ಹೊರ ಹಾಕಿದ್ದಾರೆ.
Advertisement
ರಾಷ್ಟ್ರಪತಿಗಳ (President Of India) ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಧಾರ್ಮಿಕ ಗುರುಗಳ ಫೋಟೋ ಪ್ರದರ್ಶಿಸಿ ಅವರ ತತ್ವಗಳನ್ನು ಪ್ರಸ್ತಾಪಿಸಿದರು. ನರೇಂದ್ರ ಮೋದಿ (Narendra Modi) ಪೂರ್ಣ ಹಿಂದೂ ಸಮಾಜ ಅಲ್ಲ, ಆರ್‌ಎಸ್‌ಎಸ್, ಬಿಜೆಪಿ ದೇಶದ ಸಂಪೂರ್ಣ ಹಿಂದೂಗಳ ಪ್ರತಿನಿಧಿಯಲ್ಲ ಎಂದು ಗುಡುಗಿದರಿ. ಈ ವೇಳೆ ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ವಿಪಕ್ಷ ನಾಯಕರಾಗಿ ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ನಿಯಮಗಳನ್ನು ಮೀರಿ ಮಾತನಾಡುವಂತಿಲ್ಲ ಎಂದು ಅಮಿತ್ ಶಾ (Amit Shah) ಆಕ್ಷೇಪ ವ್ಯಕ್ತಪಡಿಸಿದರು. ಧಾರ್ಮಿಕ ವಿಚಾರಗಳನ್ನು ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಈ ನಡುವೆ ದೊಡ್ಡ ಮಟ್ಟದಲ್ಲಿ ಗದ್ದಲ ಏರ್ಪಟ್ಟಿತು.
Advertisement
Advertisement
ಇದಕ್ಕೂ ಮುನ್ನ ಮಾತನಾಡಿದ ರಾಹುಲ್ ಗಾಂಧಿ, ನಾವು ನೀಟ್ ಕುರಿತು ಒಂದು ದಿನದ ಚರ್ಚೆಯನ್ನು ಬಯಸಿದ್ದೇವೆ. ಇದು ಪ್ರಮುಖ ವಿಷಯವಾಗಿದೆ ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. 7 ವರ್ಷದಲ್ಲಿ 70 ಬಾರಿ ಪೇಪರ್ ಸೋರಿಕೆಯಾಗಿದೆ. ನೀವು ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಾವು ಸಂತೋಷಪಡುತ್ತೇವೆ ಎಂದು ಮನವಿ ಮಾಡಿದರು.
Advertisement
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ನಿರಾಕರಿಸಿದರು. ಸಂಸತ್ ಸದಸ್ಯನಾಗಿ ದಶಕಗಳ ಕಾಲ ನನ್ನ ಅಧಿಕಾರಾವಧಿಯಲ್ಲಿ, ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಸಂದರ್ಭದಲ್ಲಿ ಬೇರೆ ಯಾವುದೇ ವಿಷಯವನ್ನು ಎಂದಿಗೂ ಚರ್ಚೆಗೆ ತೆಗೆದುಕೊಂಡಿಲ್ಲ. ಧನ್ಯವಾದ ನಿರ್ಣಯವನ್ನು ಅಂಗೀಕರಿಸಿದ ನಂತರ ಇತರ ವಿಷಯಗಳನ್ನು ಪ್ರಸ್ತಾಪಿಸಬಹುದು ಹೇಳಿದರು. ಸ್ಪೀಕರ್ ಓಂ ಬಿರ್ಲಾ ಅವರು ಸಿಂಗ್ ಅವರು ನಿಲುವನ್ನು ಬೆಂಬಲಿಸಿದರು ಮತ್ತು ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದರು.
ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, ನಾನು ಅಯೋಧ್ಯೆ ಬಗ್ಗೆ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ ಎಂದು ಆರೋಪಿಸಿದರು. ಭಗವಾನ್ ರಾಮ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ಸೋಲಿಸುವ ಮೂಲಕ ಈ ಎಚ್ಚರಿಕೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ಬಿಜೆಪಿ ಹೇಗೆ ಸೋತಿತು ಎಂದು ಕೇಳಿದೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದಾರೆ, ಆದರೆ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಸಣ್ಣ ಪುಟ್ಟ ಅಂಗಡಿ, ಮನೆಗಳನ್ನ ಧ್ವಂಸ ಮಾಡಿದೆ, ಪರಿಹಾರ ನೀಡಿಲ್ಲ, ಅಯೋಧ್ಯೆ ದೇವಸ್ಥಾನದ ಉದ್ಘಾಟನೆಗೆ ಅಂಬಾನಿ-ಅದಾನಿ ಕರೆಯಲಾಯಿತು ಸ್ಥಳೀಯರನ್ನು ಕೈಬಿಡಲಾಯಿತು. ಅಯೋಧ್ಯೆ ಉದ್ಘಾಟನೆ ಸಂದರ್ಭದಲ್ಲಿ ಅಲ್ಲಿನ ಜನರು ದುಃಖದಲ್ಲಿದ್ದರು ಎಂದು ಹೇಳಿದರು.
ನರೇಂದ್ರ ಮೋದಿ ಅವರು ಅಯೋಧ್ಯೆಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು, ಸರ್ವೆ ಮಾಡುವ ಏಜೆನ್ಸಿಗಳು ಬೇಡ ಎಂದು ಸಲಹೆ ನೀಡಿದವು ಹೀಗಾಗೀ ಸ್ಪರ್ಧಿಸಲಿಲ್ಲ. ವಾರಣಾಸಿಯಿಂದ ಸ್ಪರ್ಧಿಸಿ, ಸ್ವಲ್ವದರಲ್ಲೇ ಉಳಿದುಕೊಂಡರು ಎಂದು ವ್ಯಂಗ್ಯವಾಡಿದರು. ರೈತರನ್ನು ಭಯೋತ್ಪಾದಕರು ಎಂದು ಬಿಜೆಪಿಯವರು ಕರೆದಿದ್ದಾರೆ, ಅವರನ್ನು ಬೆದರಿಸಲು ಮೂರು ಕೃಷಿ ಕಾನೂನು ಜಾರಿ ಮಾಡಲಾಯಿತು. ಅಂಬಾನಿ, ಅದಾನಿಗೆ ಅನುಕೂಲವಾಗುವ ಕಾನೂನು ಜಾರಿ ಮಾಡಲಾಯಿತು ರೈತರ ಪ್ರತಿಭಟನೆ ನಡೆಸಿದರು, ಪ್ರತಿಭಟನೆ ನಡೆಸಿದ ರೈತರನ್ನು ಭಯೋತ್ಪಾದಕರು ಎನ್ನಲಾಯಿತು ಎಂದು ಹೇಳಿದರು.
ರಾಹುಲ್ ಗಾಂಧಿ ಮಾತಿಗೆ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು. ಮೊದಲ ವಿಪಕ್ಷ ನಾಯಕನಾಗಿ ಮಾತನಾಡುತ್ತಿದ್ದಾರೆ ಎಂದು ಹೆಚ್ಚು ಹೆಚ್ಚು ರಿಯಾಯಿತಿ ನೀಡಲಾಗುತ್ತಿದೆ ಅವರು ಎಲ್ಲ ನಿಯಮ ಉಲ್ಲಂಘಿಸಿ ಮಾತನಾಡುತ್ತಿದ್ದಾರೆ ನಾವು ರೈತರನ್ನು ಯಾವಗ ಭಯೋತ್ಪಾದಕರು ಎಂದು ಹೇಳಿದ್ದೇವೆ? ಸದನಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ತಮ್ಮ ಅಸಬ್ಬಂದ್ಧ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.