– ಬೆಲೆ ಹೆಚ್ಚಿಸುವ ಬದಲು ತೆರಿಗೆ ಇಳಿಸಬೇಕಿತ್ತು
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‍ಗೆ 80 ಪೈಸೆ ಏರಿಕೆಯಾಗಿದ್ದು, ಗೃಹಬಳಕೆಯ ಅಡುಗೆ ಅನಿಲದ ಬೆಲೆ ಸಿಲಿಂಡರ್‍ಗೆ 50 ಏರಿಕೆಯಾಗಿದೆ. ದಿನಬಳಕೆ ವಸ್ತು ಮತ್ತು ಇಂಧಣಗಳ ಬೆಲೆ ಏರಿಕೆ ಮಾಡುತ್ತಿರುವ ಕುರಿತಾಗಿ ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಜಯಾ ಬಚ್ಚನ್ ಅಲ್ಲದೆ ರಾಹುಲ್ ಗಾಂಧಿ ಹೀಗೆ ಅನೇಕ ನಾಯಕರು ಸೋಶಿಯಲ್ ಮೀಡಿಯಾ ಮೂಲಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳ ಮೇಲೆ ವಿಧಿಸಲಾದ ಲಾಕ್‍ಡೌನ್‍ನನ್ನು ತೆಗೆದುಹಾಕಲಾಗಿದೆ. ಈಗ ಸರ್ಕಾರವು ನಿರಂತರವಾಗಿ ಬೆಲೆಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
Advertisement
गैस, डीज़ल और पेट्रोल के दामों पर लगा ‘Lockdown’ हट गया है।
अब सरकार लगातार क़ीमतों का ‘Vikas’ करेगी।
महंगाई की महामारी के बारे में प्रधानमंत्री जी से पूछिए, तो वो कहेंगे #ThaliBajao
— Rahul Gandhi (@RahulGandhi) March 22, 2022
Advertisement
ಅಖಿಲೇಶ್ ಯಾದವ್ ಪದೇ ಪದೇ ಹೇಳುತ್ತಿರುತ್ತಾರೆ. ಜನರೇ ಎಚ್ಚರವಾಗಿರಿ, ಚುನಾವಣೆ ನಂತರ ಬೆಲೆ ಹೆಚ್ಚಾಗಲಿದೆ. ಬಿಜೆಪಿಯನ್ನು ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲ ಎಂದು ಹೇಳುವ ಮೂಲಕವಾಗಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ಇಂಧನ ಬೆಲೆಗಳ ಏರಿಕೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
Advertisement
जनता को दिया भाजपा सरकार ने महंगाई का एक और उपहार… लखनऊ में रसोई गैस सिलेंडर हुआ हज़ार के पास और पटना में हज़ार के पार!
चुनाव ख़त्म, महंगाई शुरू… pic.twitter.com/JUROJtgwTr
— Akhilesh Yadav (@yadavakhilesh) March 22, 2022
ಸರ್ಕಾರಕ್ಕೆ ನಿಜವಾಗಿಯೂ ಭಾರತದ ಜನಸಾಮಾನ್ಯರ ನೋವು ನಿವಾರಣೆ ಆಗಬೇಕಾದರೆ ಬೆಲೆ ಹೆಚ್ಚಿಸುವ ಬದಲು ತೆರಿಗೆ ಇಳಿಸಬೇಕಿತ್ತು. ಇದು ನ್ಯಾಯಸಮ್ಮತವಲ್ಲ ಏಕೆಂದರೆ ಪೆಟ್ರೋಲ್ ಪಂಪ್‍ಗಳು ಮತ್ತು ಗ್ಯಾಸ್ ಸಿಲಿಂಡರ್‍ಗಳಲ್ಲಿ ನಾವು ಪಾವತಿಸುವ ಹೆಚ್ಚಿನ ಭಾಗವು ತೆರಿಗೆ ಹೋಗುತ್ತದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Govt has interfered with market pricing to avoid hurting the voters before elections & soon after that they allow prices to go up again. This is unjustified because the largest portion of what we pay at petrol pumps & gas cylinders is in terms of taxes: Congress’ Shahi Tharoor pic.twitter.com/pQ3GBKys5P
— ANI (@ANI) March 22, 2022
137 ದಿನಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದೆ. ಮಾರ್ಚ್ 22ರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ. ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‍ಗೆ 101.42 ಮತ್ತು ಡೀಸೆಸ್‍ಗೆ 85.80 ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.21, ಪ್ರತಿ ಲೀಟರ್ ಡೀಸೆಲ್‍ಗೆ 87.47, ಮುಂಬೈನಲ್ಲಿ ಲೀಟರ್ ಪೆಟ್ರೋಲ್ 110.78, ಡೀಸೆಲ್ 94.94, ಕೋಲ್ಕತ್ತಾದಲ್ಲಿ ಪೆಟ್ರೋಲ್ 102.16 ಮತ್ತು ಡೀಸೆಲ್ 90.62, ಚೆನ್ನೈನಲ್ಲಿ ಪೆಟ್ರೋಲ್ ದರ 102.16, ಡೀಸೆಲ್ ದರ 92.19 ರೂಪಾಯಿಗೆ ಏರಿಕೆಯಾಗಿದೆ.
ನವೆಂಬರ್ 2ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ. ಪಂಚ ರಾಜ್ಯಗಳ ಚುನಾವಣೆ ಬಳಿಕ ದರ ಏರಿಕೆಯ ನಿರೀಕ್ಷೆ ಇತ್ತು. ಕಳೆದ ವರ್ಷ ನವೆಂಬರ್‍ನಿಂದ ಈವರೆಗೂ ಕಚ್ಚಾ ತೈಲ ದರದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ರಷ್ಯಾ, ಉಕ್ರೇನ್ ನಡುವಿನ ಸಂಘರ್ಷದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಬಾರಿ ಏರಿಕೆ ಕಂಡಿದ್ದು ಈಗ ಭಾರತದ ಮೇಲೂ ಪರಿಣಾಮ ಬಿದ್ದಿದೆ.