ತಿರುವನಂತಪುರಂ: ದಕ್ಷಿಣ ಭಾರತದ ಜನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜ್ಞಾನವಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
Advertisement
ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ಜನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜ್ಞಾನವಿದೆ. ತಮ್ಮ ಕಲ್ಪನೆಯನ್ನೇ ದೇಶದ ಕಲ್ಪನೆಯೆಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬಿಸಿಯೂಟ ಯೋಜನೆಗೆ ‘ಪಿಎಂ ಪೋಷಣ್’ ಮರುನಾಮಕರಣ ಮಾಡಿದ ಕೇಂದ್ರ
Advertisement
हम सब भारत हैं।
और भारत नफ़रत से जीत कर रहेगा।#NoHate pic.twitter.com/cjDivnblWv
— Rahul Gandhi (@RahulGandhi) September 29, 2021
Advertisement
ಕಾಂಗ್ರೆಸ್ ಪಕ್ಷವು ಭಾರತದ ಜನತೆ, ಭಾರತದ ಕಲ್ಪನೆ v/s ವ್ಯಕ್ತಿಯೋರ್ವರ ಕಲ್ಪನೆಯ ನಡುವೆ ಹೋರಾಟವನ್ನು ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವತಿಯ ಕನಸು ನನಸು-ದೇವಸ್ಥಾನಕ್ಕೆ ಶ್ರೀಕೃಷ್ಣನ ಚಿತ್ರ ಉಡುಗೊರೆ
Advertisement
ರಾಜಕೀಯದಲ್ಲಿ ಕೇಳಲಾಗುವ ಪ್ರಶ್ನೆ ಎಂದರೆ ಭಾರತ ಎಂದರೇನು? ಭಾರತವು ಒಂದು ಪ್ರದೇಶ ಎಂದು ಅವರು ಹೇಳುತ್ತಾರೆ. ಭಾರತವು ಜನರು ಎಂದು ನಾವು ಹೇಳುತ್ತೇವೆ, ಸಂಬಂಧಗಳು ಅಲ್ಲಿವೆ. ಭಾರತವು ಹಿಂದೂ ಮತ್ತು ಮುಸ್ಲಿಂ, ಹಿಂದೂ, ಮುಸ್ಲಿಂ ಮತ್ತು ಸಿಖ್, ತಮಿಳು, ಹಿಂದಿ, ಉರ್ದು, ಬಂಗಾಳಿಗಳ ನಡುವಿನ ಸಂಬಂಧ ಎಂದು ರಾಹುಲ್ ಗಾಂಧಿ ಹೇಳಿದರು. ಪ್ರಧಾನಿಯೊಂದಿಗಿನ ನನ್ನ ಸಮಸ್ಯೆ ಎಂದರೆ ಅವರು ಈ ಸಂಬಂಧಗಳನ್ನು ಮುರಿಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.