ನವದೆಹಲಿ: ಪೆಟ್ರೋಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಈಗ ದೀಪಾವಳಿ ಹಬ್ಬ ಬಂದಿದೆ. ಬೆಲೆ ಏರಿಕೆ ಉತ್ತುಂಗದಲ್ಲಿದೆ. ಇದು ತಮಾಷೆಯ ವಿಚಾರವಲ್ಲ. ಸಾಮಾನ್ಯ ಜನರ ಪರಿಸ್ಥಿತಿ ಬಗ್ಗೆ ನರೇಂದ್ರ ಮೋದಿ ಸರ್ಕಾರ ಸ್ವಲ್ಪವಾದರೂ ಸಂವೇದನೆ ತೋರಬೇಕು ಎಂಬುದು ನನ್ನ ಆಶಯ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು: ಬೊಮ್ಮಾಯಿ
दिवाली है।
महंगाई चरम पर है।
व्यंग्य की बात नहीं है।
काश मोदी सरकार के पास जनता के लिए एक संवेदनशील दिल होता।
— Rahul Gandhi (@RahulGandhi) November 3, 2021
ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ಬೆಲೆಯಷ್ಟೇ ಅಲ್ಲದೆ, ಬಹುತೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದೆ. ಅಡುಗೆ ಎಣ್ಣೆ, ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಅದರಲ್ಲೂ ಇಂಧನ ದರವಂತೂ ಐತಿಹಾಸಿಕ ಹೆಚ್ಚಳಕಂಡಿದ್ದು, ಸಾಮಾನ್ಯ ಜನರಿಗೆ ಬಹುದೊಡ್ಡ ಹೊರೆಯಾಗಿದೆ. ಎಲ್‍ಪಿಜಿ ಸಿಲಿಂಡರ್ ಬೆಲೆ 266ರೂ.ಏರಿಕೆಯಾಗಿದ್ದು, ದೆಹಲಿಯಲ್ಲಿ 2000 ರೂ.ಗಡಿ ದಾಟಿದೆ. ಇದನ್ನೂ ಓದಿ: ಕಡಿಮೆ ಲಸಿಕೆ ವಿತರಣೆ – 40ಕ್ಕೂ ಹೆಚ್ಚು ಡಿಸಿಗಳ ಜೊತೆ ಮೋದಿ ಸಭೆ