ನವದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಡದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಪ್ರಣಬ್ ಮುಖರ್ಜಿ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷ ವಕ್ತಾರರಾದ ರಣ್‍ದೀಪ್ ಸಿಂಗ್ ಸೂರಜ್‍ವಾಲಾ ಅವರು, ಪ್ರಣಬ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು. ತಮ್ಮ ಆಹ್ವಾನವನ್ನು ಮನ್ನಿಸಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
Guests share a light hearted moment with Former Presidents Pranab Mukherjee & Pratibha Patil at the #iftar hosted by Congress President @RahulGandhi pic.twitter.com/lZXsLjW3RP
— Congress (@INCIndia) June 13, 2018
Advertisement
ಈ ಹಿಂದೆ ಕಾಂಗ್ರೆಸ್ 2015 ರಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟವನ್ನು ಏರ್ಪಡಿಸಿತ್ತು. ಆದರೆ ಇದಾದ ಬಳಿಕ ಎರಡು ವರ್ಷ ಕಾರ್ಯಕ್ರಮವನ್ನು ಏರ್ಪಡಿಸಿರಲಿಲ್ಲ. ರಾಹುಲ್ ಗಾಂಧಿ ಅವರು ಎಐಸಿಸಿ ಅಧಕ್ಷರಾದ ಬಳಿಕ ಮೊದಲ ಬಾರಿಗೆ ಇಫ್ತಾರ ಕೂಟವನ್ನು ಏರ್ಪಡಿಸಲಾಗಿದೆ.
Advertisement
ಈ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಹಾಗೂ ನಾಯಕರು ಭಾಗವಹಿಸಿದ್ದರು.
Advertisement
ಕಳೆದ ಕೆಲ ದಿನಗಳ ಹಿಂದೆ ನಾಗ್ಪುರದಲ್ಲಿ ನಡೆದ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸುವ ಕುರಿತು ಹಲವು ಕಾಂಗ್ರೆಸ್ ನಾಯಕರು ಅಸಮಾಧಾನವನ್ನು ಹೊರಹಾಕಿದ್ದರು. ಸ್ವತಃ ಪ್ರಣಬ್ ಅವರ ಪುತ್ರಿ ಸಹ ಈ ಕುರಿತು ಟ್ವೀಟ್ ಮಾಡಿ ಆರ್ ಎಸ್‍ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.
Distinguished guests share a meal at the #Iftar organised by Congress President @RahulGandhi pic.twitter.com/AclyX3q0mw
— Congress (@INCIndia) June 13, 2018
Guests share a moment with Congress President @RahulGandhi at the #Iftar organised by him pic.twitter.com/Xg1eZZkaPF
— Congress (@INCIndia) June 13, 2018
1/2
Multiple media houses have raised questions on Iftaar invite to @CitiznMukherjee on behalf of Congress President.
Congress President has extended an invite to Sh. Pranab Mukherjee & he has graciously accepted. Hope this will set to rest unwarranted speculation.
— Randeep Singh Surjewala (@rssurjewala) June 11, 2018
2/2
To set the record straight, May I point out that Pranab Dada had attended the last Iftar get together organised by then Congress President, Smt. Sonia Gandhi too.
Bereft of unwarranted issues, let compassion & friendship for all guide us in the holy month of Ramadan.
— Randeep Singh Surjewala (@rssurjewala) June 11, 2018