ಬೀದರ್: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು 15 ನಿಮಿಷ ಯಾವುದೇ ನೋಟ್ಸ್ ಸಹಾಯವಿಲ್ಲದೇ ಮಾತನಾಡುವಂತೆ ಸವಾಲು ಎಸೆದಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆ ಗಳನ್ನು ಕೇಳುವ ಮೂಲಕ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.
Advertisement
ಜಿಲ್ಲೆಯ ಔರಾದದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಕಳಾಜಿ ಇಲ್ಲ. ಸುಳ್ಳು ಹೇಳುವ ಮೂಲಕ ಜನರನ್ನು ಹೆದರಿಸುವ ಕಾರ್ಯಮಾಡುತ್ತಿದ್ದಾರೆ. ನಾನು ಮೋದಿ ಅವರನ್ನು ಎಂದು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಆದ್ರೆ ಮೋದಿ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಇವರಿಗೆ ತಾನು 3 ಪ್ರಶ್ನೆಗಳನ್ನು ಕೇಳುತ್ತೇನೆ ಉತ್ತರಿಸಲಿ ಎಂದು ಸವಾಲು ಎಸೆದರು.
Advertisement
ಪ್ರಧಾನಿ ಮೋದಿಯವರು ಲೋಕಸಭೆ ಚುನಾವಣಾ ಸಮಯದಲ್ಲಿ ಬಹಳ ದೊಡ್ಡ ವಾಗ್ದಾನಗಳನ್ನು ನೀಡಿದ್ದರು, ಕಪ್ಪು ಹಣ ವಾಪಸ್ ತರ್ತೀನಿ, ಎಲ್ಲರ ಅಕೌಂಟ್‍ಗೆ 15 ಲಕ್ಷ ಹಾಕುತ್ತೇನೆ, 2 ಕೋಟಿ ಉದ್ಯೋಗ ಸೃಷ್ಠಿಸುತ್ತೇನೆ ಎಂದೆಲ್ಲಾ ಹೇಳಿದ್ದರು, ಮೋದಿಯವರೇ, ಬಸವಣ್ಣನವರು ಹೇಳಿದಂತೆ, ನುಡಿದಂತೆ ನಡೆಯಿರಿ. : @RahulGandhi #INC4Karnataka
— Karnataka Congress (@INCKarnataka) May 3, 2018
Advertisement
ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ಅವರು ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ ಅವರು ನೀರವ್ ಮೋದಿಯನ್ನು ದೇಶ ಬಿಟ್ಟು ಹೋಗಲು ಅವಕಾಶ ನೀಡಿದ್ದು ಯಾಕೆ? ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ ಯರಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಿದ್ದು ಯಾಕೆ? ಭ್ರಷ್ಟಾಚಾರ ಆರೋಪ ಹೊಂದಿರುವ ಅಮಿತ್ ಶಾ ಪುತ್ರನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಈ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಹೇಳಿದರು.
Advertisement
ಬಿಜೆಪಿ ನಾಯಕರು ಆರ್ ಎಸ್‍ಎಸ್ ಸಿದ್ಧಾಂತವನ್ನು ದೇಶದಲ್ಲಿ ಜಾರಿಗೆ ತರಲು ಮುಂದಾಗಿದ್ದಾರೆ. ಬಸವಣ್ಣನವರ ಬಗ್ಗೆ ಮೋದಿ ಅವರು ಮಾತನಾಡುತ್ತಾರೆ. ಆದರೆ ಬಸವಣ್ಣನವರ ನುಡಿದಂತೆ ನಡೆಯಬೇಕು ಎಂಬ ತತ್ವವನ್ನು ಅನುಸರಿಸುವುದಿಲ್ಲ. ಭ್ರಷ್ಟಾಚಾರ ನಡೆಸಿ ಜೈಲು ಸೇರಿದ್ದ ಜನಾರ್ದನ ರೆಡ್ಡಿರನ್ನು ಮತ್ತೆ ವಿಧಾನಸೌದಕ್ಕೆ ತರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು.