ಭೋಪಾಲ್: ಮಧ್ಯಪ್ರದೇಶದ ಮೊವ್‍ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Congress MP Rahul Gandhi) ಅವರು ಮೋಟಾರ್ ಬೈಕ್ (Motorbike) (ರಾಯಲ್ ಎನ್‍ಫೀಲ್ಡ್ ಬುಲೆಟ್) (Royal Enfield Bullet) ಚಲಾಯಿಸುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಆಕರ್ಷಿಸಿದ್ದಾರೆ.
Advertisement
ಈ ವೀಡಿಯೋವನ್ನು ಕಾಂಗ್ರೆಸ್ (Congress) ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಾಹುಲ್ ಗಾಂಧಿ ಬೈಕ್ ಮೇಲೆ ಬರುತ್ತಿದ್ದರೆ, ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ಅವರನ್ನು ಹುರಿದುಂಬಿಸುತ್ತಿರುವುದನ್ನು ಹಾಗೂ ಹೋಗಲು ದಾರಿ ಮಾಡಿಕೊಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬಿಜೆಪಿಯ ಕಲ್ಲು ತೂರಾಟದಿಂದ ಬಾಲಕನಿಗೆ ಗಾಯ – ಎಎಪಿ ಗುಜರಾತ್ ಮುಖ್ಯಸ್ಥನಿಂದ ಆರೋಪ
Advertisement
#WATCH | Congress MP Rahul Gandhi rides a motorbike during the ‘Bharat Jodo Yatra’ in Mhow, Madhya Pradesh. pic.twitter.com/TNG1yvwKbo
— ANI (@ANI) November 27, 2022
Advertisement
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶನಿವಾರ ಮಧ್ಯಪ್ರದೇಶದ ಮೊರ್ಟಕ್ಕ ಗ್ರಾಮದಿಂದ ಪುನಾರಂಭವಾಯಿತು. ಗುರುವಾರ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪತಿ ರಾಬರ್ಟ್ ವಾದ್ರಾ ಅವರು ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ : ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್ ಸಿಂಗ್
Advertisement
ಮಧ್ಯಪ್ರದೇಶದ ಭಾರತ್ ಜೋಡೋ ಪಾದಯಾತ್ರೆ ನಡುವೆ ಶನಿವಾರ ಚಹಾ ವಿರಾಮಕ್ಕೆಂದು ರಸ್ತೆಬದಿಯ ರೆಸ್ಟೋರೆಂಟ್‍ಗೆ ಚಲಿಸುತ್ತಿದ್ದಾಗ ದಿಗ್ವಿಜಯ್ ಸಿಂಗ್ ಅವರು ಕೆಳಗೆ ಬಿದ್ದು, ಗಾಯಗೊಂಡಿದ್ದಾರೆ. ಈ ವೇಳೆ ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು ದಿಗ್ವಿಜಯ್ ಸಿಂಗ್ ಅವರ ಕೈ ಹಿಡಿದು ಮೇಲಕ್ಕೆತ್ತಿ ಸಹಾಯ ಮಾಡಿದ್ದರು.