ನವದೆಹಲಿ: ಸದಾ ರಾಜಕೀಯ ಬ್ಯುಸಿಯಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಅಮ್ಮನ ಪ್ರೀತಿಯ ಬಗ್ಗೆ ಇನ್‌ಸ್ಟಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಕ್ಯಾಂಡೀಡ್ ಫೋಟೋವನ್ನು ಹಂಚಿಕೊಂಡಿದ್ದು, ಅಮ್ಮನ ಪ್ರೀತಿ ನನಗೂ ಇಲ್ಲ, ಪ್ರಿಯಾಂಕಾಗೂ ಇಲ್ಲ, ನಮ್ಮ ಮನೆಯ ನಾಯಿ ನೂರಿಗೆ ಅಂತ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಕಳೆದ 24 ಗಂಟೆಗಳಲ್ಲಿ 7,81,596 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ 5,400ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ತ್ರಿಪುರಾದಲ್ಲಿ ಪ್ರವಾಹ; ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಸಾವು
ʻನೂರಿʼ ಎಂಬ ನಾಯಿ ಮರಿಯನ್ನು ಎತ್ತು ಮುದ್ದಾಡುತ್ತಿರುವ ಫೋಟೋವನ್ನು ರಾಹುಲ್ ಗಾಂಧಿ ಹಂಚಿಕೊಂಡ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಚೆನ್ನೈಗೆ ಯುಎಸ್ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಜೆನ್ನಿಫರ್ ಆರ್. ಲಿಟಲ್‌ಜಾನ್ ಭೇಟಿ
ಕಳೆದ ವರ್ಷ ಆಗಸ್ಟ್‌ನಲ್ಲಿ ಗೋವಾದಲ್ಲಿ ಖರೀದಿಸಿದ್ದ ಪ್ರೀತಿಯ ನಾಯಿಮರಿ ʻನೂರಿʼಯನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ(Sonia Gandhi) ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಪ್ರಾಣಿಗಳು ನಮಗೆ ನಿಶ್ಕಲ್ಮಷ ಪ್ರೀತಿ ಎಂದರೇನು ಎಂಬುದನ್ನು ತಿಳಿಸಿಕೊಡುತ್ತವೆ. ಹಾಗೆಯೇ ನೂರಿ ನಮ್ಮ ಜೊತೆಗೆ ಜೀವಿಸುತ್ತಿದ್ದಾಳೆ ಅಂತಲೂ ಹೇಳಿದ್ದರು. ಇದೀಗ ಪ್ರೀತಿಯ ನೂರಿಯ ವೀಡಿಯೋವನ್ನು ಹಂಚಿಕೊಂಡಿದ್ದು, ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಪ್ರಿನ್ಸಿಪಾಲ್ ಸೇರಿ 7 ಮಂದಿ ಅರೆಸ್ಟ್
ಗಾಂಧಿ ಕುಟುಂಬ ಮೊದಲಿನಿಂದಲೂ ಪ್ರಾಣಿಪ್ರಿಯ ಕುಟುಂಬ. ಕೆಲ ರ‍್ಷಗಳಿಂದ ಅನೇಕ ನಾಯಿಗಳನ್ನು ಅವರು ಸಾಕುತ್ತಿದ್ದಾರೆ. ʻಪಿಡಿʼ ಅನ್ನುವ ಇನ್ನೊಂದು ನಾಯಿ ಕೂಡ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ರಾಗಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಲ್ವಡಿ ಕೃಷ್ಣರಾಜ ಒಡೆಯರದ್ದು ಮರೆಯಲಾಗದ ಸೇವೆ : ಯದುವೀರ್