ನವದೆಹಲಿ: ಮೊದಲು ಚೀನಾ ದೇಶಕ್ಕೆ ಭಾರತದ ಭೂಮಿಯನ್ನು ಬಿಟ್ಟುಕೊಡಲಾಗಿತ್ತು. ಈಗ ದೇಶದ ನೆರೆಹೊರೆಯವರಿಗೂ ಚೀನಾದಿಂದ ಅಪಾಯವಾಗುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Advertisement
ನಿಮಗಾಗಿ ನೀವು ನಿಲ್ಲದಿದ್ದರೆ, ನಿಮ್ಮ ಸ್ನೇಹಿತರಿಗೆ ಹೇಗೆ ನಿಲ್ಲುತ್ತೀರಾ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಚೀನಾ ಇದೀಗ ಭೂತಾನ್‍ನಲ್ಲಿ ಅಕ್ರಮವಾಗಿ ಗ್ರಾಮಗಳನ್ನು ನಿರ್ಮಿಸುತ್ತಿದೆ. ಮೋದಿ ಸರ್ಕಾರ ಮೊದಲಿಗೆ ನಮ್ಮ ಭೂಮಿಯನ್ನು ಚೀನಾಗೆ ಬಿಟ್ಟುಕೊಟ್ಟಿತು. ಇದೀಗ ಚೀನಾ ದೇಶವನ್ನು ನಿಯಂತ್ರಿಸಲಾಗದೇ ನಮ್ಮ ನೆರೆಹೊರೆಯವರು ಸಹ ಅಪಾಯಕ್ಕೆ ಸಿಲುಕಿದ್ದಾರೆ. ನೀವು ನಮ್ಮ ಪರವಾಗಿ ನಿಲ್ಲದಿದ್ದರೆ, ಸ್ನೇಹಿತರ ಪರವಾಗಿ ಹೇಗೆ ನಿಲ್ಲುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ
Advertisement
Advertisement
ಗಡಿಯಲ್ಲಿ ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ನಿಭಾಯಿಸುತ್ತಿರುವುದನ್ನು ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ. 2017 ರಲ್ಲಿ ದೋಕ್ಲಾಂ ಬಳಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‍ಎ) ಜೊತೆಗೆ 70 ದಿನಗಳ ಕಾಲ ಸಂಘರ್ಷ ನಡೆದಿತ್ತು. ಈಗ ದೋಕ್ಲಾಂ ಪ್ರಸ್ಥಭೂಮಿಯಿಂದ 30 ಕಿಮೀ ದೂರದಲ್ಲಿರುವ ಭೂತಾನ್‍ನಲ್ಲಿ ಚೀನಾ ವಿವಾದಿತ ಪ್ರದೇಶದಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ ಎಫೆಕ್ಟ್ – 25 ಪೊಲೀಸರಿಗೆ ಕೊರೊನಾ