ಭಾರತದ ಗಡಿಯೊಳಗೆ ಚೀನಾ ಪ್ರವೇಶ ಮಾಡಿರುವುದೇ ʻಮೇಕ್ ಇನ್ ಇಂಡಿಯಾʼ ವೈಫಲ್ಯಕ್ಕೆ ಕಾರಣ: ರಾಗಾ ವಾಗ್ದಾಳಿ

Public TV
3 Min Read
Rahul Gandhi

– ದೇಶದಲ್ಲಿ ಉತ್ಪಾದನಾ ವಲಯ ಕಡೆಗಣಿಸಲಾಗಿದೆ
– ಉತ್ಪಾದನಾ ವಲಯದಲ್ಲಿ ಒಬಿಸಿ, ದಲಿತರನ್ನೂ ಒಳಗೊಳ್ಳಬೇಕು
– ಇನ್ನೂ ನಿರುದ್ಯೋಗ ಸಮಸ್ಯೆಗೆ ಉತ್ತರ ಕಂಡುಕೊಳ್ಳಲಾಗಿಲ್ಲ ಎಂದ ರಾಗಾ

ನವದೆಹಲಿ: ಚೀನಾ-ಭಾರತದ ಗಡಿ (China-India Border) ಒತ್ತುವರಿ ಮಾಡಿಕೊಂಡಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪುವುದಿಲ್ಲ. ಆದ್ರೆ ಭಾರತದ ಗಡಿಯೊಳಗೆ ಚೀನಾ ಸೇನೆ ಇರುವುದನ್ನು ಭಾರತದ ಸೇನಾ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಚೀನಾ – ಭಾರತದ ಗಡಿಯೊಳಗೆ ಪ್ರವೇಶ ಮಾಡಿರುವುದೇ ʻಮೇಕ್ ಇನ್ ಇಂಡಿಯಾʼ (Make In India) ವೈಫಲ್ಯಕ್ಕೆ ಕಾರಣ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಲೋಕಸಭೆಯಲ್ಲಿ (Lok Sabha) ಮಾತನಾಡಿದ ಅವರು, ನಾವು ಉತ್ಪಾದನಾ ವ್ಯವಸ್ಥೆಯನ್ನು ಬಲಗೊಳಿಸಬೇಕು ಇಲ್ಲದಿದ್ದರೆ ಚೀನಾ ನಮ್ಮ ಮೇಲೆ ಸವಾರಿ ಮಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳ ಕಾಲ್ತುಳಿತದಲ್ಲಿ 1,000 ಜನ ಸಾವು – ಮಲ್ಲಿಕಾರ್ಜುನ ಖರ್ಗೆ ಬಾಂಬ್‌

ಮೊಬೈಲ್ ಸೇರಿ ಎಲೆಕ್ಟ್ರಾನಿಕ್ ವಸ್ತುಗಳು ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿಲ್ಲ ಬದಲಿಗೆ ಕೇವಲ ಅಸೆಂಬಲ್ ಮಾಡಲಾಗುತ್ತಿದೆ. ದೇಶದಲ್ಲಿ ಉತ್ಪಾದನಾ ವಲಯವನ್ನು ಕಡೆಗಣಿಸಲಾಗಿದೆ. ಬಳಕೆಯನ್ನು ಮಾತ್ರ ಉತ್ತೇಜಿಸಲಾಗುತ್ತಿದೆ ಹೀಗಿದ್ದಾಗ ಉದ್ಯೋಗ ಸೃಷ್ಟಿ ಹೇಗೆ ಆಗುತ್ತದೆ? ವಿಶ್ವದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದೆ ಶಿಕ್ಷಣ, ಯುದ್ಧ, ಆರೋಗ್ಯ ಕ್ಷೇತ್ರಗಳಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಆದರೆ ನಮಗೆ ಇನ್ನೂ ನಿರುದ್ಯೋಗ ಸಮಸ್ಯೆಗೆ ಉತ್ತರ ಕಂಡುಹಿಯಲು ಸಾಧ್ಯವಾಗಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಅಗತ್ಯ – ಹೆಚ್‌ಡಿಡಿ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

India China

ದೇಶದಲ್ಲಿ ಎಐ ಬಗ್ಗೆ ಮಾತನಾಡಬೇಕು, ಡೇಟಾ ಇಲ್ಲದೇ ಎಐ ಏನೂ ಅಲ್ಲ. ಫೇಸ್ ಬುಕ್, ವಾಟ್ಸಪ್, ಗೂಗಲ್ ಎಲ್ಲವೂ ಅಮೆರಿಕದವು. ಆದ್ರೆ ನಮ್ಮಲ್ಲಿ ಯಾವುದೇ ಡೇಟಾ ಸೆಂಟರ್‌ಗಳಿಲ್ಲ. ಚೀನಾ, ಅಮೆರಿಕದಲ್ಲಿ ತಮ್ಮದೇ ಆದ ಡೇಟಾ ಕೇಂದ್ರಗಳನ್ನು ಹೊಂದಿವೆ. ಡ್ರೋನ್‌, ರೋಬರ್ಟ್, ಬ್ಯಾಟರಿ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು ಇವುಗಳ ಉತ್ಪಾದನೆಯಲ್ಲಿ ಕೆಲಸ ಮಾಡಬೇಕು. ಚೀನಾ ಬ್ಯಾಟರಿ, ಮೋಟರ್, ರೋಬರ್ಟ್ ಗಳ ಬಗ್ಗೆ ವರ್ಕ್ ಮಾಡುತ್ತಿದೆ. ನಮ್ಮ ದೇಶದಲ್ಲಿ ಮಕ್ಕಳಲ್ಲಿ ಇದರ ಬಗ್ಗೆ ತಿಳುವಳಿಕೆ ನೀಡಬೇಕು ಈ ಕ್ರಾಂತಿಯಲ್ಲಿ ಕೋಟಿಗಟ್ಟಲೆ ಭಾರತೀಯರು ಭಾಗಿಯಾಗಬೇಕು ಎಂದು ಕರೆ ನೀಡಿದರು.

ತೆಲಂಗಾಣದಲ್ಲಿ ಜಾತಿಗಣತಿ ಮಾಡಿದ್ದೇವೆ, ಅಲ್ಲಿ 90% ಅಹಿಂದ ವರ್ಗದವರಿದ್ದಾರೆ, ದೇಶದಲ್ಲಿ ಒಬಿಸಿ 50 ರಿಂದ 55% ಇದೆ. ಹಾಗಾಗಿ ಉತ್ಪಾದನಾ ವಲಯದಲ್ಲಿ ಒಬಿಸಿ, ದಲಿತರನ್ನೂ ಒಳಗೊಳ್ಳಬೇಕು. ದೇಶದ ಮಾಧ್ಯಮಗಳ ಮಾಲೀಕರು ದಲಿತರು, ಒಬಿಸಿಗಳಿಲ್ಲ, ಬಿಜೆಪಿಯಲ್ಲಿರುವ ಒಬಿಸಿಗಳ ಬಾಯಿ ಕಟ್ಟಿಹಾಕಲಾಗಿದೆ. ಜಾತಿಗಣತಿ ಮಾಡಿವುದರಿಂದ ಡೇಟಾ ಸಿಗಲಿದೆ. ಎಐ ಮೂಲಕ ಸಾಮಾಜಿಕ ಕ್ರಾಂತಿ ಮಾಡಬಹುದು ಇದರಿಂದ ಚೀನಾಗೂ ಚಾಲೆಂಜ್‌ಗೂ ಮಾಡಬಹುದು ಎಂದರು.

ಸಂವಿಧಾನ ಪುಸ್ತಕದ ತಾಕತ್ತು ಏನು ಎನ್ನುವುದು ನಾವು ತೋರಿಸಿದ್ದೇವೆ, ಲೋಕಸಭಾ ಚುನಾವಣೆ ಬಳಿಕ ಮೋದಿಯವರು ಸಂವಿಧಾನ ಪುಸ್ತಕಕ್ಕೆ ತಲೆಬಾಗಬೇಕಾಯಿತು. ಸಂವಿಧಾನವನ್ನು ಆರ್‌ಎಸ್‌ಎಸ್ ಎಂದೂ ಒಪ್ಪಿಕೊಂಡಿಲ್ಲ. 1947ರಲ್ಲಿ ಸ್ವಾತಂತ್ರ‍್ಯ ಸಿಕ್ಕಿಲ್ಲ, ರಾಮಮಂದಿರ ನಿರ್ಮಾಣದ ದಿನ ಸ್ವಾತಂತ್ರ‍್ಯ ಸಿಕ್ಕಿದೆ ಎಂದಿದ್ದಾರೆ. ಮಹಾರಾಷ್ಟ್ರ ಚುನಾವಣೆ ಮೇಲೆ ಅನುಮಾನಗಳಿವೆ, ಹಿಮಾಚಲ ಮತದಾರರು ಎಷ್ಟಿದ್ದಾರೆ ಅಷ್ಟು ಹೊಸ ಮತದಾರರು ಹೊಸದಾಗಿ ಸೇರಿಕೊಂಡರು. ಸುಮಾರು 70 ಲಕ್ಷ ಮತದಾರರು ಹೊಸದಾಗಿ ಸೇರಿಸಿದ್ದಾರೆ. ಕೊನೆಯ 5 ತಿಂಗಳಲ್ಲಿ 70 ಲಕ್ಷ ಮತದಾರರನ್ನು ಹೊಸದಾಗಿ ಸೇರಿಸಲಾಗಿದೆ. ಒಂದು ಬಿಲ್ಡಿಂಗ್ ನಲ್ಲಿ 7 ಸಾವಿರ ಮತದಾರರನ್ನು ಸೇರಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಜಾದು ಮಾಡಲಾಗಿದೆ. ಚುನಾವಣಾ ಆಯೋಗಕ್ಕೆ ನಾವು ಕೇಳಿದ ಮಾಹಿತಿ ನೀಡಿಲ್ಲ. ಚುನಾವಣಾ ಆಯುಕ್ತರನ್ನು ನೇಮಕ ಸಮಿತಿಯಿಂದ ನ್ಯಾಯಾಧೀಶರನ್ನು ತೆಗೆದುಹಾಕಲಾಗಿದೆ ಎಂದ ರಾಗಾ, ಆಯುಕ್ತರ ನೇಮಕದ ಹಕ್ಕನ್ನು ಸಂಸತ್‌ಗೆ ನೀಡಬೇಕು ಎಂದು ಆಗ್ರಹಿಸಿದರು.

Share This Article