– ಸೋದರಿ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ರಾಗಾ
ನವದೆಹಲಿ: ಇಂದು ದೇಶಾದ್ಯಂತ ರಕ್ಷಾ ಬಂಧನ ಹಬ್ಬದ ಸಂಭ್ರಮ. ರಕ್ಷಾ ಬಂಧನದ ಈ ಶುಭ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪ್ರೀತಿಯ ಸಹೋದರಿ ಪ್ರಿಯಾಂಕಾ ಗಾಂಧಿಗೆ ಶುಭಾಶಯ ತಿಳಿಸಿದ್ದಾರೆ.
ಹೌದು, ರಕ್ಷಾ ಬಂಧನ ದಿನ ಸೋದರ ಹಾಗೂ ಸೋದರಿಯರ ಪ್ರೀತಿಯ ಸಂಕೇತವಾಗಿದೆ. ಈ ದಿನ ಸೋದರಿಯರು ತಮ್ಮ ಸಹೋದರನ ಕೈಗೆ ರಾಕಿಯನ್ನು ಕಟ್ಟಿ ಸಿಹಿ ತಿಂಡಿಯನ್ನು ತಿನ್ನಿಸುವ ಮೂಲಕ ದೇವರು ಆತನಿಗೆ ಸುಖ, ಸಂತೋಷ ಹಾಗೂ ದೀಘಾಯುಷ್ಯ ನೀಡಲಿ ಎಂದು ಶುಭ ಹಾರೈಸುತ್ತಾರೆ. ಇದನ್ನೂ ಓದಿ:ರಾಹುಲ್ ಗಾಂಧಿ ಬ್ರೇಕ್‍ಫಾಸ್ಟ್ ಮೀಟಿಂಗ್ – ಸಂಸತ್‍ವರೆಗೂ ಸೈಕಲ್ ಮಾರ್ಚ್
View this post on Instagram
ಸದ್ಯ ಈ ವಿಶೇಷ ದಿನದಂದು ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆಗಿರುವ ಬಾಲ್ಯ, ಯೌವನ ಹಾಗೂ ಈಗೀನ ಫೋಟೋಗಳನ್ನು ಕೊಲಾಜ್ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಸಹೋದರಿಯಾಗಿ ಸ್ನೇಹಿತೆಯಾಗಿ ಜೊತೆಗಿರುವ ನನ್ನ ಸಹೋದರಿಗೆ ನನ್ನ ಜೀವನದಲ್ಲಿ ವಿಶೇಷ ಸ್ಥಾನವಿದೆ. ನಾವಿಬ್ಬರೂ ಪರಸ್ಪರ ಸ್ನೇಹಿತರು ಹಾಗೂ ರಕ್ಷಕರು. ನಿಮ್ಮೆಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ:ರಾಹುಲ್ ಗಾಂಧಿಯ ಪೋಸ್ಟ್ ತೆಗೆದು ಹಾಕಿದ ಫೇಸ್‍ಬುಕ್