ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬದವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಲಖೀಂಪುರ್ ಖೇರಿಗೆ ತಲುಪಿ ಭೇಟಿ ನೀಡಿ ಬುಧವಾರ ಸಾಂತ್ವನ ಹೇಳಿದ್ದಾರೆ.
Advertisement
ಇತ್ತೀಚೆಗಷ್ಟೇ ಪ್ರಿಯಾಂಕಾ ಗಾಂಧಿ ಅವರು ಲಖಿಂಪುರ್ ಖೇರಿಗೆ ಭೇಟಿ ನೀಡುವ ವೇಳೆ ತಡೆದು ಪೊಲೀಸರು ಬಂಧಿಸಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದು, ಸಹೋದರ ರಾಹುಲ್ ಗಾಂಧಿ ಜೊತೆ ಲಖೀಂಪುರ್ ಖೇರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ರೈತರ ಮೇಲೆ ಜೀಪ್ ಹತ್ತಿಸಿದ ಮತ್ತೊಂದು ವೀಡಿಯೋ ಲಭ್ಯ – ಇಂದು ಸುಪ್ರೀಂನಲ್ಲಿ ವಿಚಾರಣೆ
Advertisement
Advertisement
ಮೊದಲಿಗೆ ಇಬ್ಬರು ಪಾಲಿಯಾಗೆ ತಲುಪಿ ಲವ್‍ಪ್ರೀತ್ ಸಿಂಗ್ ಕುಟುಂಬವನ್ನು ಭೇಟಿ ಮಾಡಿದರು. ಈ ವೇಳೆ ಪ್ರಿಯಾಂಕಾ ಹಾಗೂ ರಾಹುಲ್, ಲವ್‍ಪ್ರೀತ್ ಸಿಂಗ್ ಅವರ ಕುಟುಂಬದವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ. ಇನ್ನೂ ಈ ಫೋಟೋವನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಏಕತಾ ದಿನ- ಮಂಗಳೂರಿಗೆ ಆಗಮಿಸಿದ ಸೈಕಲ್ ರ್‍ಯಾಲಿ
Advertisement
इन आँसुओं को पोंछना था हमें
गले लगाकर भरोसा दिलाना था हमें।
वो लगा रहे थे तरकीबें रोकने की,
मगर इनके दर्द ने रुकने न दिया हमें।#NyayHokarRahega pic.twitter.com/3P1rxZmTup
— Congress (@INCIndia) October 6, 2021
ನಂತರ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಘಟನೆಯಲ್ಲಿ ಮೃತಪಟ್ಟ ಪತ್ರಕರ್ತರಾದ ರಾಮನ್ ಕಶ್ಯಪ್ ಅವರ ನಿಘಾಸನ್ ಅವರ ತಹಸಿಲ್‍ನಲ್ಲಿರುವ ಮನೆಗೆ ಭೇಟಿ ನೀಡಿದರು. ಕೊನೆಗೆ ಧೌರಾಹಾ ತಹಸಿಲ್‍ನಲ್ಲಿರುವ ನಚತಾರ್ ಸಿಂಗ್ ಅವರ ಮನೆಗೆ ತಲುಪಿದರು. ಅಲ್ಲದೇ ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ಆಚಾರ್ಯ ಪ್ರಮೋದ್ ಅವರು ಕೂಡ ಲಖೀಂಪುರ್ ಖೇರಿಯಲ್ಲಿರುವ ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ಮೊರಾದಾಬಾದ್‍ನಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
“पत्रकारों पर हमला संविधान पर हमला है और पत्रकारों की हत्या संविधान की हत्या है।”
आज @RahulGandhi जी और @priyankagandhi जी ने शहीद पत्रकार रमन कश्यप के परिजनों से मुलाकात कर दर्द साझा किया और भरोसा दिलाया।#NyayHokarRahega pic.twitter.com/ogGSDgNFE4
— Congress (@INCIndia) October 6, 2021
ಭಾನುವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಕೃತ್ಯ ನಡೆದಿದ್ದು, 8 ಜನ ಮೃತಪಟ್ಟಿದ್ದಾರೆ. ಸತ್ತವರಲ್ಲಿ ನಾಲ್ವರು ರೈತರಾಗಿದ್ದಾರೆ. ಇನ್ನೂ ಈ ಕೃತ್ಯ ಖಂಡಿಸಿ ರೈತರು ಬಿಜೆಪಿ ಕಾರ್ಯಕರ್ತರು ಕಾರು ಚಲಾಯಿಸಿದ್ದ ಕಾರಿನ್ನು ಹೊಡೆದುರುಳಿಸಿ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ಹೈದರಾಬಾದ್‌ಗೆ ರೋಚಕ 4 ರನ್ ಜಯ – ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿದ ಆರ್‌ಸಿಬಿ