Connect with us

ಕೆಪಿಸಿಸಿ ನಾಯಕರ ನಿದ್ದೆಗೆಡಿಸಿದೆ ರಾಹುಲ್ ಗಾಂಧಿ ನಿರ್ಧಾರ!

ಕೆಪಿಸಿಸಿ ನಾಯಕರ ನಿದ್ದೆಗೆಡಿಸಿದೆ ರಾಹುಲ್ ಗಾಂಧಿ ನಿರ್ಧಾರ!

ಬೆಂಗಳೂರು: ರಾಜ್ಯದಲ್ಲಿಯ ದೇವಸ್ಥಾನಗಳಿಗೆ ಭೇಟಿ ನೀಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಸಕ್ತಿ ತೋರಿಸದೇ ಇರುವದರಿಂದ ರಾಜ್ಯ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ನಾಯಕರು ರಾಹುಲ್ ಗಾಂಧಿ ಯಾವ ದೇವಸ್ಥಾನಗಳಿಗೆ ಭೇಟಿ ನೀಡಬೇಕೆಂಬುದರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆದ್ರೆ ರಾಹುಲ್ ಗಾಂಧಿ ಮಾತ್ರ ದೇವಸ್ಥಾನ ಭೇಟಿಗೆ ಇನ್ನು ಸಮ್ಮತಿ ಸೂಚಿಸಿಲ್ಲ ಅಂತಾ ಹೇಳಲಾಗುತ್ತಿದೆ. 12 ದಿನಗಳ ರಾಜ್ಯ ಪ್ರವಾಸಕ್ಕೆ ಮಾತ್ರ ರಾಹುಲ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಗುಜರಾತ್ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ಅಲ್ಲಿಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಈಗ ಕರ್ನಾಟಕದಲ್ಲಿ ಮಾತ್ರ ಹಿಂದೂ ದೇಗುಲಗಳಿಗೆ ಭೇಟಿ ನೀಡಲು ಒಪ್ಪುತ್ತಿಲ್ಲ ಎಂಬ ಪ್ರಶ್ನೆ ರಾಜ್ಯ ಕಾಂಗ್ರೆಸಿಗರಲ್ಲಿ ಹುಟ್ಟಿಕೊಂಡಿದೆ. ಫೆಬ್ರವರಿ 4ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೂ ಟೆಂಪಲ್ ರನ್ – ಒಂದೇ ದಿನ ಎರಡು ಮಠಕ್ಕೆ ರಾಹುಲ್ ಭೇಟಿ!

Advertisement
Advertisement