ನವದೆಹಲಿ: 2019 ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆಯುವ ಉದ್ದೇಶ ಹೊಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಹತ್ವದ ‘ನ್ಯಾಯ’ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಆದರೆ ಈ ಯೋಜನೆಗೆ ಬಳಕೆ ಮಾಡಿದ ಫೋಟೋವನ್ನ ಕೆಟ್ಟದಾಗಿ ಫೋಟೋ ಶಾಪ್ ಮಾಡಿದಕ್ಕೆ ಟ್ರೋಲ್‍ಗೆ ಒಳಗಾಗಿದ್ದಾರೆ.
ಯೋಜನೆ ಪ್ರಚಾರದ ಭಾಗವಾಗಿ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಫೋಟೋ ಟ್ವೀಟ್ ಮಾಡಲಾಗಿತ್ತು. ಈ ವೇಳೆ ವೃದ್ಧ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರನ್ನು ಅಪ್ಪಿಕೊಂಡಿರುವ ಫೋಟೋ ಬಳಕೆ ಮಾಡಲಾಗಿತ್ತು. ಆದರೆ ಈ ಫೋಟೋದಲ್ಲಿ ರಾಹುಲ್ ಮತ್ತು ವೃದ್ಧ ಮಹಿಳೆಯ ಕೈ ಅಲ್ಲದೇ ಮತ್ತೊಂದು ಕೈ ಕಾಣಿಸಿದೆ. ಇದನ್ನೇ ಟೀಕೆ ಮಾಡಿದ ಟ್ವಿಟ್ಟಿಗರು ರಾಹುಲ್‍ರನ್ನ ಟ್ರೋಲ್ ಮಾಡಿ ಕಾಲೆಳೆದಿದ್ದಾರೆ. ಬಿಜೆಪಿಯ ಮುಖಂಡ ತಾಜಿಂದರ್ ಬಾಗ್ಗಾ ರಾಹುಲ್ ರನ್ನು ಟ್ರೋಲ್ ಮಾಡಿ, ಒಂದು ಉತ್ತಮ ಪಿಆರ್ ಏಜೆನ್ಸಿಯನ್ನ ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ.
Advertisement
गरीबी पर वार होगा, सपना ये साकार होगा।
कांग्रेस सरकार में, सशक्त गरीब परिवार होगा।।#AbHogaNYAY pic.twitter.com/sBlf5ITnHY
— Congress (@INCIndia) April 7, 2019
Advertisement
ರಾಹುಲ್ ಗಾಂಧಿ ಅವರ ಫೋಟೋ ಬಗ್ಗೆ ಟೀಕೆ ಮಾಡಿರುವ ಪ್ರವೀಣ್ ಕುಮಾರ್ ಕುಶಾಲ್ ಎಂಬವರು, ಫೋಟೋ ಶಾಪ್ ಉತ್ತಮವಾಗಿಲ್ಲ. ಮುಂದಿನ ಬಾರಿ ನಿಜವಾಗಲು ಬಡವರನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿ. ನ್ಯಾಯ ಯೋಜನೆಯ ಪ್ರಚಾರದ ಫೋಟೋ ಈ ರೀತಿ ಇದ್ದರೆ ಯೋಜನೆ ಅನುಷ್ಠಾನ ಬಗ್ಗೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
Advertisement
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನ್ಯಾಯ ಯೋಜನೆಯ ಮೂಲಕ ದೇಶದ ಬಡ ಕುಟುಂಬಗಳಿಗೆ ವಾರ್ಷಿಕ 72 ಸಾವಿರ ರೂ. ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಈ ಯೋಜನೆ ದೇಶದ ಶೇ. 20 ರಷ್ಟು ಜನರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದರು.
Advertisement
@RahulGandhi Photoshop not good.. next time try really hugging poor and needy and advertise genuine pictures! If #NYAY advertisement itself photoshopped, what about the implementation of the scheme? @BJP4Karnataka @BJP4India @amitmalviya pic.twitter.com/HJzXldWSw0
— Praveen Kumar Kushal (@KushalPraveen) April 8, 2019