ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ರಾಹುಲ್‌ ಗಾಂಧಿ – ಬೆಂಬಲಿಸಿದ ಮಲ್ಲಿಕಾರ್ಜುನ ಖರ್ಗೆ

Public TV
1 Min Read
Rahul Gandhi Mallikarjun Kharge

ನವದೆಹಲಿ: ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಉತ್ತರಾಧಿಕಾರಿಯಾಗಲು ರಾಹುಲ್‌ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬೆಂಬಲಿಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಇಂಡಿಯಾ ಒಕ್ಕೂಟ ((INDIA Block)) ಅಧಿಕಾರಕ್ಕೆ ಬಂದ್ರೆ ಪ್ರಧಾನಿಯಾಗಿ ಯಾರು ಆಯ್ಕೆಯಾಗಬೇಕು ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ಸ್ಪರ್ಧೆಗೂ ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 76 ದಿನ, 206 ಕಾರ್ಯಕ್ರಮ – ಪ್ರಚಾರ ಆರಂಭಿಸಿದ ಕನ್ಯಾಕುಮಾರಿಯಲ್ಲೇ ಮೋದಿ ಧ್ಯಾನ

pm modi metitation in kanyakumari

ಏಕೆಂದರೆ ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಹೈವೋಲ್ಟೇಜ್‌ ಕ್ಷೇತ್ರಗಳಾಗಿದ್ದ ಅಮೇಥಿಯಿಂದ ರಾಹುಲ್‌ ಗಾಂಧಿ (Rahul Gandhi) ಹಾಗೂ ರಾಯ್‌ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದ್ರೆ ಪ್ರಿಯಾಂಕಾ ಗಾಂಧಿ ಚುನಾವಣಾ ಕಣದಿಂದ ಹೊರಗುಳಿದರು. ಆದರೂ ರಾಯ್‌ ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಪರ ಬಿರುಸಿನ ಪ್ರಚಾರ ನಡೆಸಿದ್ದರು.

ಪ್ರಮುಖ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಖರ್ಗೆ ಅವರು, ರಾಹುಲ್‌ ಗಾಂಧಿ ಅವರು ಚುನಾವಣೆಗೆ ಮುನ್ನ ಎರಡು ಭಾರತ್‌ ಜೋಡೋ ಯಾತ್ರೆಗಳನ್ನ ನಡೆಸಿದ್ದಾರೆ. ಮಿತ್ರ ಪಕ್ಷಗಳೊಂದಿಗೆ ಸಮನ್ವಯತೆ ಕಾಯ್ದುಕೊಂಡಿದ್ದಾರೆ. ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುತ್ತಾರೆ. ಆದ್ದರಿಂದ ಪ್ರಧಾನಿ ಹುದ್ದೆಗೆ ಜನಪ್ರಿಯ ಆಯ್ಕೆ ಎಂದರೆ ರಾಹುಲ್‌ ಗಾಂಧಿ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ- ಜನರಲ್ಲಿ ಕೇಜ್ರಿವಾಲ್‌ ಭಾವನಾತ್ಮಕ ಮನವಿ

ಪ್ರಧಾನಿ ಹುದ್ದೆಗೆ ರಾಹುಲ್‌ ಗಾಂಧಿ ನನ್ನ ಆಯ್ಕೆಯಾಗಿದ್ದಾರೆ. ಏಕೆಂದರೆ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಬಾಸ್‌. ಯುವಸಮೂಹವನ್ನ ಪ್ರತಿನಿಧಿಸುತ್ತಾರೆ. ದೇಶದ ಆಳ-ಅಗಲ ಅರಿತಿದ್ದಾರೆ. ಅಲ್ಲದೇ ಇಂಡಿಯಾ ಕೂಟದ ಅನೇಕ ಮಂದಿ ರಾಹುಲ್‌ ಗಾಂಧಿ ಅವರನ್ನ ಒಮ್ಮತದ ಅಭ್ಯರ್ಥಿಯಾಗಿ ನೋಡುತ್ತಾರೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಇಂಡಿಯಾ ಕೂಟ ಚುನಾವಣೆಯಲ್ಲಿ ಗೆದ್ದ ಬಳಿಕ ಒಟ್ಟಾಗಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರ್ತೀವಿ ಎಂದು ಖರ್ಗೆ ಹೇಳಿದ್ದಾರೆ.

Share This Article