ಗಾಂಧಿನಗರ: ಕಾಂಗ್ರೆಸ್ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ತರಲು ಮುಂದಾಗಿತ್ತು, ಆದರೆ ಕೇಂದ್ರದಲ್ಲಿರುವ ಮೋದಿ ಸರ್ಕಾರ ಗಬ್ಬರ್ ಸಿಂಗ್ ಟ್ಯಾಕ್ಸ್ ತಂದಿದೆ ಎಂದು ಹೇಳುವ ಮೂಲಕ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜಿಎಸ್‍ಟಿಯನ್ನು ಲೇವಡಿ ಮಾಡಿದ್ದಾರೆ.
ಗಾಂಧಿನಗರದಲ್ಲಿ ನಡೆದ ನವಸರ್ಜನ್ ಜನದೇಶ್ ಮಹಾಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಇದ್ದರೆ ಜಿಎಸ್‍ಟಿ ಗರಿಷ್ಟ ಮಿತಿ ಶೇ.18 ಮತ್ತು ಒಂದೇ ಶ್ರೇಣಿ ಇರುತಿತ್ತು. ಆದರೆ ಈಗ ತರಾತುರಿಯಲ್ಲಿ ಜಿಎಸ್‍ಟಿಯನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ಸುಧಾರಣೆಯಾಗಬೇಕು ಎಂದು ಅವರು ಆಗ್ರಹಿಸಿದರು.
Advertisement
ಮೋದಿಯ ಮೇಕ್ ಇನ್ ಇಂಡಿಯಾವನ್ನು ಲೇವಡಿ ಮಾಡಿದ ಅವರು, ಚೀನಾದ ಉತ್ಪನ್ನಗಳು ದೇಶವ್ಯಾಪಿ ಮಾರಾಟವಾಗುತ್ತಿದೆ. ಎಲ್ಲ ಉತ್ಪನ್ನಗಳ ಲೇಬಲ್ ಮೇಲೆ ಚೀನಾದ ಹೆಸರು ಇರುತ್ತದೆ. ಸೆಲ್ಫಿಗಾಗಿ ಫೋಟೋ ವನ್ನು ಕ್ಲಿಕ್ ಮಾಡಿದರೂ ಚೀನಾದ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.
Advertisement
ಗುಜರಾತ್ ಒಂದೇ ರಾಜ್ಯದಲ್ಲಿ 30 ಲಕ್ಷ ಮಂದಿ ನಿರುದ್ಯೋಗಿ ಯುವಕರಿದ್ದಾರೆ. ಪ್ರತಿ ದಿನ 30 ಸಾವಿರ ಮಂದಿ ಉದ್ಯೋಗ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರೆ ಕೇವಲ 450 ಮಂದಿಗೆ ಉದ್ಯೋಗ ಸಿಗುತ್ತಿದೆ ಎಂದು ಆರೋಪಿಸಿದರು.
Advertisement
CVP Rahul Gandhi hits it out of the park with his address in Gandhinagar, Gujarat. #GabbarSinghTax #CongressForAllhttps://t.co/1o4yuuUjQ7
— Congress (@INCIndia) October 23, 2017
Advertisement
Modi Govt reincarnates Gabbar Singh after 42 years – comes back to haunt the innocent in the form of #GabbarSinghTax! pic.twitter.com/wpejlu2wB6
— Congress (@INCIndia) October 23, 2017
CVP Rahul Gandhi addresses the people at Navsarjan Janadesh Mahasammelan in Gandhinagar, Gujarat. #CongressForAll pic.twitter.com/d7c7wiBuHS
— Congress (@INCIndia) October 23, 2017