ಪಣಜಿ: ಸೋಮವಾರ ರಫೇಲ್ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದಾರೆ.
ಆನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಪರಿಕ್ಕರ್ ಅವರನ್ನು ರಾಹುಲ್ ಗಾಂಧಿ ಮಂಗಳವಾರ ಬೆಳಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭೇಟಿಯ ಬಳಿಕ ರಾಹುಲ್ ಗಾಂಧಿ, ಇದು ಖಾಸಗಿ ಭೇಟಿಯಾಗಿದ್ದು ಪರಿಕ್ಕರ್ ಬೇಗನೇ ಗುಣಮುಖರಾಗಲಿ ಎಂದು ಹಾರೈಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
Advertisement
This morning I visited Goa CM, Manohar Parrikar, to wish him a speedy recovery. It was a personal visit.
Later this afternoon I will address Polling Booth Committee Members from all over Kerala, in Kochi. The meeting will be LIVE on my Facebook page.https://t.co/NraAer1ksf
— Rahul Gandhi (@RahulGandhi) January 29, 2019
Advertisement
ಸೋಮವಾರ ರಾಹುಲ್ ಗಾಂಧಿ ಟ್ವೀಟ್ ಮಾಡಿ, ರಫೇಲ್ ಕುರಿತ ಆಡಿಯೋ ಬಿಡುಗಡೆಯಾಗಿ 30 ದಿನ ಆಗಿದೆ. ಯಾವುದೇ ಎಫ್‍ಐಆರ್ ದಾಖಲಾಗಿಲ್ಲ, ತನಿಖೆಗೆ ಆದೇಶವಾಗಿಲ್ಲ. ಸಚಿವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆಡಿಯೋದಲ್ಲಿರುವ ಗೋವಾ ಮುಖ್ಯಮಂತ್ರಿ ಧ್ವನಿ ಸಾಚಾ ಆಗಿದೆ. ಪ್ರಧಾನಿಗಿಂತಲೂ ಪರಿಕ್ಕರ್ ಅವರಿಗೆ ಹೆಚ್ಚಿನ ಅಧಿಕಾರವಿದೆ ಎಂದು ಹೇಳಿದ್ದರು.
Advertisement
30 days since the Goa Audio Tapes on RAFALE were released. No FIR or enquiry ordered. No action against the Minister either!
It's obvious that the tapes are authentic & that Goa CM, Parrikar, is in possession of explosive RAFALE secrets, that give him power over the PM. https://t.co/sKwwfIj0bM
— Rahul Gandhi (@RahulGandhi) January 28, 2019
Advertisement
ಖಾಸಗಿ ಭೇಟಿಗಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಗೋವಾಗೆ ಬಂದಿದ್ದರು. ಈ ವಿಚಾರ ತಿಳಿದು ಗೋವಾ ಬಿಜೆಪಿ ಟ್ವಿಟ್ಟರಿನಲ್ಲಿ, ರಾಹುಲ್ ಅವರೇ, ಅಟಲ್ ಸೇತುವೆಯನ್ನು ನೋಡಲು ಒಮ್ಮೆ ಬನ್ನಿ. ದೇಶದಲ್ಲಿ ಆಡಳಿತ ನಡೆಸುವ ಬಿಜೆಪಿ ಹೇಗೆ ಭಾರತವನ್ನು ಬದಲಾಯಿಸುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ಬರೆದು ಆಹ್ವಾನಿಸಿತ್ತು.
Dear Shri @RahulGandhi , We have come to learn that you are currently on a vacation in Goa. We request you along with all Congress MLAs to visit the Atal Setu, the 3rd longest cable stayed-bridge in India over river Mandovi and witness how @BJP4India is #TransformingIndia.
— BJP Goa (@BJP4Goa) January 28, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv