ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಭಾರೀ ವಿವಾದ ಸೃಷ್ಟಿಸಿರುವ ‘ಶಕ್ತಿ’ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಾಗಾ, ಮೋದಿ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ಅವರು ನನ್ನ ಹೇಳಿಕೆಗಳನ್ನು ತಿರುಚಿ, ಅದರ ಅರ್ಥ ಬದಲಾಯಿಸಲು ಪ್ರಯತ್ನಿಸುತ್ತಾರೆ. ಯಾಕೆಂದರೆ ನಾನು ಸತ್ಯವನ್ನೇ ನುಡಿದಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಎಕ್ಸ್‌ನಲ್ಲೇನಿದೆ..?: ಮೋದಿಯವರು ನನ್ನ ಮಾತುಗಳನ್ನು ಇಷ್ಟಪಡುವುದಿಲ್ಲ. ಅವರು ಯಾವಾಗಲೂ ನನ್ನ ಹೇಳಿಕೆಗಳನ್ನು ಯಾವುದೋ ಒಂದು ರೀತಿಯಲ್ಲಿ ತಿರುಚಿ ಅವುಗಳ ಅರ್ಥವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ನಾನು ಗಾಢವಾದ ಸತ್ಯವನ್ನು ಹೇಳಿದ್ದೇನೆ ಎಂದು ಅವರಿಗೆ ಕೂಡ ತಿಳಿದಿದೆ. ನಾನು ಹೇಳಿದ ಶಕ್ತಿ, ನಾವು ಹೋರಾಡುತ್ತಿರುವ ಶಕ್ತಿ, ಆ ಶಕ್ತಿಯ ಮುಖವಾಡ ಮೋದಿಯವರಾಗಿದ್ದಾರೆ. ಅಂತಹ ಶಕ್ತಿಯೇ ಇಂದು ಭಾರತದ ಧ್ವನಿಯನ್ನು ಸೆರೆಹಿಡಿದಿದೆ.
Advertisement
मोदी जी को मेरी बातें अच्छी नहीं लगतीं, किसी न किसी तरह उन्हें घुमाकर वह उनका अर्थ हमेशा बदलने की कोशिश करते हैं क्योंकि वह जानते हैं कि मैंने एक गहरी सच्चाई बोली है।
जिस शक्ति का मैंने उल्लेख किया, जिस शक्ति से हम लड़ रहे हैं, उस शक्ति का मुखौटा मोदी जी हैं।
वह एक ऐसी शक्ति…
— Rahul Gandhi (@RahulGandhi) March 18, 2024
Advertisement
ಭಾರತದ ಸಂಸ್ಥೆಗಳು, ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ, ಮಾಧ್ಯಮಗಳು, ಭಾರತೀಯ ಉದ್ಯಮ ಮತ್ತು ಭಾರತದ ಸಂಪೂರ್ಣ ಸಾಂವಿಧಾನಿಕ ರಚನೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಧಿಕಾರಕ್ಕಾಗಿ ನರೇಂದ್ರ ಮೋದಿಯವರು ಭಾರತೀಯ ಬ್ಯಾಂಕ್‌ಗಳ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡುತ್ತಾರೆ. ಆದರೆ ಭಾರತೀಯ ರೈತ ಕೆಲವೇ ಕೆಲವು ಸಾವಿರ ರೂಪಾಯಿಗಳ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಅದೇ ಅಧಿಕಾರವನ್ನು ಭಾರತದ ಬಂದರುಗಳು, ಭಾರತದ ವಿಮಾನ ನಿಲ್ದಾಣಗಳನ್ನು ನೀಡಲಾಗುತ್ತದೆ. ಆದರೆ ಭಾರತದ ಯುವಕರಿಗೆ ಅಗ್ನಿವೀರನ ಉಡುಗೊರೆಯನ್ನು ನೀಡಲಾಗುತ್ತದೆ. ಅದು ಅವರ ಧೈರ್ಯವನ್ನು ಕಸಿಯುತ್ತದೆ. ಅದೇ ಶಕ್ತಿಗೆ ಹಗಲಿರುಳು ಸೆಲ್ಯೂಟ್ ಹೊಡೆಯುತ್ತಲೇ ದೇಶದ ಮಾಧ್ಯಮಗಳು ಸತ್ಯವನ್ನು ಹತ್ತಿಕ್ಕುತ್ತವೆ.
ಶಕ್ತಿಯ ಗುಲಾಮ ನರೇಂದ್ರ ಮೋದಿಯವರು ದೇಶದ ಬಡವರ ಮೇಲೆ GST ಹೇರುತ್ತಾರೆ. ಹಣದುಬ್ಬರವನ್ನು ನಿಯಂತ್ರಿಸದೆ, ಆ ಶಕ್ತಿಯನ್ನು ಹೆಚ್ಚಿಸಲು ದೇಶದ ಆಸ್ತಿಯನ್ನು ಹರಾಜು ಹಾಕುತ್ತಾರೆ. ನಾನು ಆ ಶಕ್ತಿಯನ್ನು ಗುರುತಿಸುತ್ತೇನೆ. ಆ ಶಕ್ತಿಯನ್ನು ನರೇಂದ್ರ ಮೋದಿಯವರೂ ಗುರುತಿಸಿದ್ದಾರೆ. ಅವರು ಯಾವುದೇ ರೀತಿಯ ಧಾರ್ಮಿಕ ಶಕ್ತಿಯಲ್ಲ, ಅವರು ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳುತನದ ಶಕ್ತಿ. ಆದ್ದರಿಂದಲೇ ನಾನು ಅವರ ವಿರುದ್ಧ ದನಿ ಎತ್ತಿದಾಗಲೆಲ್ಲ ಮೋದಿಯವರು ಮತ್ತು ಅವರ ಸುಳ್ಳಿನ ಯಂತ್ರ ಕೆರಳುತ್ತದೆ ಎಂದು ರಾಗಾ ಸುದೀರ್ಘವಾಗಿ ಬರೆದುಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಇವಿಎಂ, ಇಡಿ, ಸಿಬಿಐ, ಐಟಿ ಇಲಾಖೆಯಲ್ಲಿ ರಾಜನ ಆತ್ಮ ನೆಲೆಸಿದೆ- ಮೋದಿ ವಿರುದ್ಧ ರಾಗಾ ವಾಗ್ದಾಳಿ
ರಾಹುಲ್ ಹೇಳಿದ್ದೇನು..?: ಭಾನುವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತಮ್ಮ ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿಯವರು, ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಪ್ರಶ್ನಿಸಲು ‘ಶಕ್ತಿ’ ಎಂದು ಕರೆದಿದ್ದರು. ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ಒಂದು ಶಕ್ತಿ (ರಾಜ್ಯದ ಶಕ್ತಿ) ವಿರುದ್ಧ ಹೋರಾಡುತ್ತಿದ್ದೇವೆ. ಆ ಶಕ್ತಿ ಎಂದರೇನು ಮತ್ತು ಅದು ನಮಗೆ ಏನು ನೀಡುತ್ತದೆ? ಇವಿಎಂಗಳ ಆತ್ಮ ಮತ್ತು ಸಮಗ್ರತೆಯನ್ನು ರಾಜನಿಗೆ (ಮೋದಿ) ವ್ಯಾಪಾರ ಮಾಡಲಾಗಿದೆ. ಇದು ಸತ್ಯ. ಇವಿಎಂಗಳು ಮಾತ್ರವಲ್ಲದೆ ದೇಶದ ಪ್ರತಿಯೊಂದು ಸ್ವಾಯತ್ತ ಸಂಸ್ಥೆಗಳು, ಇಡಿ, ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಯು ಕೇಂದ್ರಕ್ಕೆ ವ್ಯಾಪಾರ ಮಾಡಿದೆ ಎಂದು ಹೇಳಿಕೆ ನೀಡಿದ್ದರು.
ಮೋದಿ ಹೇಳಿದ್ದೇನು..?: ರಾಹುಲ್ ಶಕ್ತಿ ಹೇಳಿಕೆಗೆ ಇಂದು ಕರ್ನಾಟಕದ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಹಿಂದೂ ಸಮಾಜ ಅಂತ್ಯ ಮಾಡಲು ಇಂಡಿಯಾ ಸಂಕಲ್ಪ ಮಾಡಿದೆ. ಈ ಬಗ್ಗೆ ನಿನ್ನೆ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಘೋಷಣೆ ಮಾಡಿದ್ದಾರೆ. ನಾನು ಹಿಂದೂ ಧರ್ಮದ ಮೂಲಕ ಬಂದಿದ್ದೇನೆ. ನಾನು ಈಗಲೂ ಶಕ್ತಿ ಉಪಾಸನೆ ಮಾಡುತ್ತೇನೆ. ನನ್ನ ದೇಹದ ಕಣ…ಕಣದಲ್ಲಿ ಹಿಂದೂ ಧರ್ಮವಿದೆ. ನಿನ್ನೆ ಹಿಂದೂ ಶಕ್ತಿಯ ವಿನಾಶ ಮಾಡುವ ಸಂಕಲ್ಪ ಮಾಡಿದ್ದಾರೆ. ಅದು ಶಿವಾಜಿ ಮಹಾರಾಜರ ಭೂಮಿಯಲ್ಲಿ ಘೋಷಣೆ ಮಾಡಿದ್ದಾರೆ. ಹಿಂದೂ ಸಮಾಜಕ್ಕಾಗಿ ಹೋರಾಡಿದ ಶಿವಾಜಿ ಭೂಮಿಯಲ್ಲಿಯೇ ಘೋಷಣೆ ಆಗಿದೆ. ಬಾಲಠಾಕ್ರೆಯ ಕುಟುಂಬಸ್ಥರು ಕೂಡ ಅಲ್ಲಿ ಇದ್ದರು. ನನಗೆ ಇದು ತುಂಬಾ ಬೇಸರ ತಂದಿದೆ ಎಂದಿದ್ದರು. ಆ ಬಳಿಕ ರಾಗಾ ಎಕ್ಸ್ ಮೂಲಕ ಸ್ಪಷ್ಟನೆ ನೀಡಿದರು.