ಮುಂಬೈ: ಶ್ರೀರಾಮ (Lord Rama) ಅಯೋಧ್ಯೆಯಿಂದ ಶ್ರೀಲಂಕಾಗೆ ನಡೆದದ್ದಕ್ಕಿಂತ ಹೆಚ್ಚು ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರು (Rahul Gandhi) ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ (Nana Patole) ಬಣ್ಣಿಸಿದ್ದಾರೆ.
ಅಯೋಧ್ಯೆಯಿಂದ (Ayodhya) ಶ್ರೀಲಂಕಾದವರೆಗೆ (Sri Lanka) ಶ್ರೀರಾಮ ಕೈಗೊಂಡಿದ್ದ ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರ ಪಾದಯಾತ್ರೆಗೆ ಹೋಲಿಸಿದ ರಾಜಸ್ಥಾನದ ಸಚಿವ ಪರ್ಸಾದಿ ಲಾಲ್ ಮೀನಾ ಅವರ ಹೇಳಿಕೆಯನ್ನು ಪಟೋಲೆ ಬೆಂಬಲಿಸಿದ್ದಾರೆ. ಅಲ್ಲದೇ ರಾಮ ಹಾಗೂ ರಾಹುಲ್ ಗಾಂಧಿ ಹೆಸರಿಗೆ ಮೊದಲಕ್ಷರ ʼರಾʼಯಿಂದ ಶುರುವಾಗುವುದು ಕಾಕತಾಳೀಯವೂ ಹೌದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈತರಿಗೆ ಭರ್ಜರಿ ಗಿಫ್ಟ್ – ಗೋಧಿ ಸೇರಿ 6 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ
ರಾಹುಲ್ ಗಾಂಧಿ ಅವರ ಪಾದಯಾತ್ರೆ ಐತಿಹಾಸಿಕವಾಗಲಿದೆ. ಶ್ರೀರಾಮ ಅಯೋಧ್ಯೆಯಿಂದ ಶ್ರೀಲಂಕಾಗೆ ಕಾಲ್ನಡಿಗೆಯಲ್ಲಿ ಹೋಗಿದ್ದರು. ರಾಹುಲ್ ಗಾಂಧಿ ಅದಕ್ಕಿಂತಲೂ ಹೆಚ್ಚಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿದ್ದಾರೆ ಎಂದು ಪರ್ಸಾದಿ ಲಾಲ್ ಮೀನಾ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿರುವ ಪಟೋಲೆ, ಭಗವಾನ್ ಶ್ರೀರಾಮ ಕೂಡ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದರು. ಶಂಕರಾಚಾರ್ಯರು ಕೂಡ ಅದೇ ದಾರಿಯಲ್ಲಿ ನಡೆದರು. ಹಾಗೆಯೇ ರಾಹುಲ್ ಗಾಂಧಿ ಪಾದಯಾತ್ರೆಯ ರೂಪದಲ್ಲಿ ಮಾಡುತ್ತಿದ್ದಾರೆ. ಜನರು ಅವರೊಂದಿಗೆ ಸೇರುತ್ತಿದ್ದಾರೆ. ಇದು ಭಗವಾನ್ ರಾಮನೊಂದಿಗೆ ಹೋಲಿಕೆಯಲ್ಲ. ಕಾಕತಾಳೀಯವೆಂದರೆ, ಭಗವಾನ್ ರಾಮ ಮತ್ತು ರಾಹುಲ್ ಗಾಂಧಿಯವರ ಹೆಸರುಗಳು “ರಾ”ಯಿಂದ ಪ್ರಾರಂಭವಾಗುತ್ತವೆ. ಆದರೆ ಬಿಜೆಪಿಯವರು ತಮ್ಮ ನಾಯಕರನ್ನು ದೇವರೊಂದಿಗೆ ಹೋಲಿಸಿದಂತೆ, ನಾವು ರಾಹುಲ್ ಅವರನ್ನು ರಾಮನಿಗೆ ಹೋಲಿಸುವುದಿಲ್ಲ. ದೇವರು ಎಂದರೆ ದೇವರು. ರಾಹುಲ್ ಗಾಂಧಿ ಮನುಷ್ಯ. ಅವರು ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಾರದ ಕೆಟ್ಟದಿನ ಸೋಮವಾರ – ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅಧಿಕೃತ ಘೋಷಣೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಂಗಳವಾರ ಬೆಳಗ್ಗೆ ಆಂಧ್ರಪ್ರದೇಶ ಪ್ರವೇಶಿಸಿದೆ. ಯಾತ್ರೆಯನ್ನು 150 ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ.