ಮುಂಬೈ: ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ ಬಳಿಕ ರಾಹುಲ್ ಗಾಂಧಿ ಪಪ್ಪು ಆಗಿ ಉಳಿದಿಲ್ಲ, ಅವರು ಕಾಂಗ್ರೆಸ್ ಪಪ್ಪ ಆಗಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಮೂರು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದಾರೆ. ರಾಹುಲ್ ಅವರಲ್ಲಿ ಓರ್ವ ಪ್ರಬುದ್ಧ ನಾಯಕ ಕಾಣುತ್ತಿದ್ದಾರೆ. ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಢ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸೋತಿದೆ. ಇದು ಪ್ರಧಾನಿ ಮೋದಿ ಅವರ ಸೋಲಲ್ಲ. ಪಕ್ಷದ ಸೋಲು ಎಂದು ಕೇಂದ್ರ ಸಚಿವರು ಸ್ಪಷ್ಟನೆ ನೀಡಿದರು.
Advertisement
Advertisement
ರಾಜಸ್ಥಾನದ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಸಂಸದ ದೇವಜಿ ಭಾಯಿ, ಕಾಂಗ್ರೆಸ್ ಅಧ್ಯಕ್ಷರನ್ನು ಪಪ್ಪು ಎಂದು ಕರೆಯುವ ಮೂಲಕ ಮುಜುಗರಕ್ಕೀಡಾಗಿದ್ದರು. ಬಿಜೆಪಿ ಬೈಠಕ್ ನಲ್ಲಿ ಸಂಸದರು ಭಾಗಿಯಾಗಿದ್ದ ವೇಳೆ ಕಾಂಗ್ರೆಸ್ ಕೌನ್ಸಿಲರ್ ಸೀತಾ ಎಂಬವರು ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಅಂತ ಮನವಿ ಮಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡ ದೇವಜಿ ಭಾಯಿ “ನಿಮ್ಮ ಪಪ್ಪು ಹೇಳಿ” ಎಂದು ವ್ಯಂಗ್ಯ ಮಾಡಿದ್ದರು.
Advertisement
ಸಂಸದರ ಮಾತುಗಳಿಂದ ಆಕ್ರೋಶಗೊಂಡ ಮಹಿಳೆ, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಹೀಗೆ ಮಾತನಾಡಬಾರದು ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
Advertisement
ಗುಜರಾತ್ ವಿಧಾನಸಭಾ ಚುನವಾಣೆ ವೇಳೆ ಬಿಜೆಪಿ ತನ್ನ ಜಾಹೀರಾತಿನಲ್ಲಿ ಪಪ್ಪು ಎಂಬ ಪದ ಬಳಕೆ ಮಾಡಿತ್ತು. ಈ ಸಂಬಂಧ ಕಾಂಗ್ರೆಸ್ ಪಪ್ಪು ಎಂಬ ಪದ ಬಳಸದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿತ್ತು. ಪಪ್ಪು ಎಂಬ ಪದ ಅಗೌರವ ಸೂಚಿಸುತ್ತದೆ. ಹಾಗಾಗಿ ಬಿಜೆಪಿ ತನ್ನ ಎಲ್ಲ ಜಾಹೀರಾತುಗಳಲ್ಲಿ ಸ್ಕ್ರಿಪ್ಟ್ ನಲ್ಲಿ ಪಪ್ಪು ಪದ ತೆಗೆಯುವಂತೆ ಸೂಚಿಸಿತ್ತು. ಚುನಾವಣಾ ಅಯೋಗದ ಸೂಚನೆಯಂತೆ ಬಿಜೆಪಿ ‘ಪಪ್ಪು’ ಬದಲಾಗಿ ರಾಜ್‍ಕುಮಾರ್ ಎಂದು ಬಳಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv