ದಿಸ್ಪುರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೋದ ಕಡೆಗಳಲ್ಲಿ ಕಾಂಗ್ರೆಸ್ (Congress) ಸೋತಿದೆ. ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.
Advertisement
ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರಲ್ಲಿ ನಾಯಕತ್ವದ ಗುಣಗಳಿಲ್ಲ. ಎಲ್ಲೆಲ್ಲಿ ರಾಹುಲ್ ಗಾಂಧಿ ಹೋಗಿದ್ದಾರೋ, ಅಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ರಾಹುಲ್ ಗಾಂಧಿಯಿಂದ ಯಾರೂ ಪ್ರೇರಣೆ ಪಡೆಯುತ್ತಿಲ್ಲ. ರಾಹುಲ್ ಗಾಂಧಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: 9ನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ
Advertisement
Advertisement
ಐ.ಎನ್.ಡಿ.ಐ.ಎ ಮೈತ್ರಿ ಒಕ್ಕೂಟ ರಚನೆಯಾದಾಗಲೇ ಇದು ಹೆಚ್ಚಿನ ದಿನ ಇರುವುದಿಲ್ಲ ಎಂದು ನಾನು ಹೇಳಿದ್ದೆ. ಕಾರಣ ಸೈದ್ಧಾಂತಿಕ ಭಿನ್ನಭಿಪ್ರಾಯ ಇದ್ದರೂ ಸರಿಹೋಗಬಹುದು. ಆದರೆ ಬಹುತೇಕ ಪಾರ್ಟಿಗಳಲ್ಲಿ ಅಜೆಂಡಾ, ಸೈದ್ಧಾಂತಿಕ ವಿಚಾರಧಾರೆಯೇ ಇಲ್ಲ. ಅಧಿಕಾರಕ್ಕಷ್ಟೇ ಮೈತ್ರಿ, ಎಲ್ಲರಿಗೂ ಪ್ರಧಾನಿ ಮೋದಿಯವರನ್ನು ಸೋಲಿಸಬೇಕು ಎಂಬ ಗುರಿ ಇದೆ. ಬಿಜೆಪಿ ಆಡಳಿತದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದರೆ ಅವರ ಬಳಿ ಉತ್ತರ ಇಲ್ಲ ಎಂದಿದ್ದಾರೆ.
Advertisement
ರಾಹುಲ್ ಗಾಂಧಿ ಭಾರತ್ ಜೋಡೊ ನ್ಯಾಯ ಯಾತ್ರೆ ಅಸ್ಸಾಂ ತಲುಪುತ್ತಿದ್ದಂತೆ ಸಂಘರ್ಷಗಳು ಆರಂಭಗೊಂಡಿತ್ತು. ಮೇಘಾಲಯ ಖಾಸಗಿ ವಿವಿಯೊಂದರ ವಿದ್ಯಾರ್ಥಿಗಳ ಸಂವಾದಕ್ಕೆ ತಡೆ ಒಡ್ಡಲಾಗಿದೆ. ಅಲ್ಲದೇ ಗುವಾಹಟಿ ಪ್ರವೇಶಕ್ಕೂ ಅವರಿಗೆ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿ ಪ್ರತಿಭಟಿಸಿತ್ತು. ಇದೇ ವೇಳೆ, ಕಾರ್ಯಕರ್ತರನ್ನು ಹಿಂಸೆಗೆ ಪ್ರಚೋದಿಸಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿಮಂತ್ ಬಿಸ್ವಾ ಶರ್ಮಾ ಪೊಲೀಸರಿಗೆ ಸೂಚಿಸಿದ್ದರು. ಇದನ್ನೂ ಓದಿ: ಕಸ ಮತ್ತೆ ಡಸ್ಟ್‌ಬಿನ್‌ಗೆ ಹೋಗಿದೆ – ಪಕ್ಷ ತೊರೆದ ನಿತೀಶ್ ಕುಮಾರ್‌ಗೆ ಲಾಲೂ ಪುತ್ರಿ ಟಾಂಗ್