ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಪ್ರಾಪ್ತ ಬಾಲಕರ ಗುರು ಪತ್ತೆಯಾಗುವಂತಹ ವಿಡಿಯೋ ಟ್ವೀಟ್ ಮಾಡಿದಕ್ಕೆ ನೋಟಿಸ್ ಜಾರಿ ಮಾಡಿದೆ.
ಜೂನ್ 15 ರ ಶುಕ್ರವಾರದಂದು ರಾಹುಲ್ ಗಾಂಧಿ ಅವರು ಅಪ್ರಾಪ್ತ ಬಾಲಕರಿಬ್ಬರನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ಬಾಲಕರು ಬಾವಿಯಲ್ಲಿ ಈಜಿದ್ದ ಕಾರಣ ಮತ್ತೊಂದು ಸಮುದಾಯದವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದರು.
Advertisement
Advertisement
ಸದ್ಯ ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಅಪ್ರಾಪ್ತ ಬಾಲಕರ ಗುರುತು ಪತ್ತೆಯಾದ ಕಾರಣ ವಿವರಣೆ ಕೋರಿ 10 ದಿನಗಳ ಕಾಲವಕಾಶ ನೀಡಿ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷರಾದ ಪ್ರವೀಣ್ ಘುಜ್ ಅವರು, ರಾಹುಲ್ ಗಾಂಧಿ ತಮ್ಮ ಟ್ವೀಟ್ ನಲ್ಲಿ ಅಪ್ರಾಪ್ತ ಬಾಲಕರ ಗುರುತು ಪತ್ತೆಯಾಗುವಂತೆ ಮಾಡಿದ್ದ ಕಾರಣ ನೋಟಿಸ್ ಜಾರಿ ಮಾಡಿದ್ದಾಗಿ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ಮುಂಬೈ ಬಿಜೆಪಿಯ ಮುಖಂಡರೊಬ್ಬರು ರಾಹುಲ್ ಅವರ ವಿರುದ್ಧ ದೂರು ನೀಡುವ ಕುರಿತು ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ.
Advertisement
ರಾಹುಲ್ ಅವರು ವಿಡಿಯೋವನ್ನು ಸದ್ಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಿಂದ ಡಿಲೀಟ್ ಮಾಡಿಲ್ಲ. ಇದುವರೆಗೂ ರಾಹುಲ್ ಅವರ ಟ್ವೀಟ್ ಅನ್ನು 9 ಸಾವಿರಕ್ಕಿಂತಲೂ ಹೆಚ್ಚು ಮಂದಿ ರೀ ಟ್ವೀಟ್ ಮಾಡಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್, ಆಯೋಗದ ನೋಟಿಸ್ ಅನ್ನು ಬಾಕ್ವಾಸ್ (ಅಸಂಬದ್ಧ) ವಾಗಿದ್ದು, ಮಕ್ಕಳಿಗೆ ಹಕ್ಕುಗಳು ಹಾಗೂ ಮಕ್ಕಳ ಘನತೆಯನ್ನು ಕಾಪಾಡಲು ವಿಫಲವಾದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನಾವಿಸ್ ಗೆ ನೋಟಿಸ್ ಜಾರಿ ಮಾಡಬೇಕು. ರಾಹುಲ್ ಗಾಂಧಿ ಅವರು ಈ ವಿಷಯವನ್ನು ಸರಳವಾಗಿ ಎಲ್ಲರ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.