Connect with us

Latest

ಪ್ರಮಾಣ ವಚನ ಸ್ವೀಕಾರ ಬಳಿಕ ಸಹಿ ಮಾಡೋದನ್ನ ಮರೆತ ರಾಹುಲ್

Published

on

ನವದೆಹಲಿ: 4ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಸದನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಈ ವೇಳೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಹಿ ಮಾಡದೆ ಮುಂದೆ ಸಾಗಿದ ಘಟನೆ ನಡೆಯಿತು.

17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನ ಇಂದು ಆರಂಭವಾಯಿತು. ಸಂಸತ್‍ಗೆ ರಾಹುಲ್ ತಡವಾಗಿ ಆಗಮಿಸಿದ್ದರು. ಇದಕ್ಕೂ ಮುನ್ನ ಹಲವು ನಾಯಕರು ರಾಹುಲ್ ಸಂಸತ್‍ಗೆ ಆಗಮಿಸದೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದರು.

ಸಂಸತ್ ಆಗಮಿಸಿದ ರಾಹುಲ್ ಪ್ರಮಾಣ ವಚನ ಸ್ವೀಕರಿಸಿ ಮುಂದೇ ಸಾಗಿದರು. ಈ ಹಂತದಲ್ಲಿ ರಾಜ್‍ನಾಥ್ ಸಿಂಗ್ ಅವರು ರಾಹುಲ್‍ಗೆ ಸಹಿ ಮಾಡುವಂತೆ ತಿಳಿಸಿದರು. ಪುನಃ ಮರಳಿದ ರಾಹುಲ್ ಸಹಿ ಮಾಡಿ ಸ್ಪೀಕರ್ ಬಳಿ ತೆರಳಿ ಶುಭ ಕೋರಿದರು. ಬಳಿಕ ಪಕ್ಷದ ಮುಖಂಡ ಬಳಿ ತೆರಳಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಕೂಡ ಸಂಸತ್ ನಲ್ಲಿ ಹಾಜರಿದ್ದರು.

ಪ್ರಮಾಣ ವಚನ ಸ್ವೀಕರಿಸುವ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 4ನೇ ಬಾರಿಗೆ ಲೋಕಸಭಾ ಸಂಸತ್ ಸದಸ್ಯರಾಗಿ ಇಂದಿನಿಂದ ಕಾರ್ಯಾರಂಭ ಮಾಡುತ್ತಿದ್ದು, ಕೇರಳ ವಯಾನಾಡು ಜನತೆಗೆ ಧನ್ಯವಾದ. ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿದ್ದೇನೆ. ಭಾರತದ ಸಂವಿಧಾನದಲ್ಲಿ ನಿಷ್ಠೆ ಮತ್ತು ನಂಬಿಕೆಯನ್ನು ಹೊಂದಿರುತ್ತೇನೆ ಎಂದು ತಿಳಿಸಿದ್ದರು.

ರಾಹುಲ್ ಗಾಂಧಿ ಅವರು ಈ ಬಾರಿ 2 ಕ್ಷೇತ್ರಗಳಿಂದ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲುಂಡು, ಕೇರಳ ವಯನಾಡಿಯಲ್ಲಿ ಗೆಲುವು ಪಡೆದಿದ್ದರು.

Click to comment

Leave a Reply

Your email address will not be published. Required fields are marked *