ನವದೆಹಲಿ: ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಆಢಳಿತ ಪಕ್ಷಕ್ಕೆ ಒತ್ತಾಯ ಮಾಡಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 700 ರೈತರು ಸಾವನ್ನಪ್ಪಿದ್ದಾರೆ. ಪ್ರಧಾನಿಯವರು ದೇಶದ ರೈತರಲ್ಲಿ ಕ್ಷಮೆಯಾಚಿಸಿದ್ದಾರೆ. ತಾನು ತಪ್ಪು ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ. ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯೊಂದಿಗೆ ಸೇರಿ ಅಕ್ಕನನ್ನು ಕೊಂದ ತಮ್ಮ- ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ
Advertisement
सत्याग्रही शहीद किसानों के नाम पर मुआवज़ा ना देना, नौकरी ना देना और अन्नदाताओं के ख़िलाफ़ पुलिस केस वापस ना लेना बहुत बड़ी ग़लतियाँ होंगी।
आख़िर PM कितनी बार माफ़ी माँगेंगे?#FarmersProtest
— Rahul Gandhi (@RahulGandhi) December 7, 2021
Advertisement
ಮೃತ ರೈತರಿಗೆ ಪರಿಹಾರ ನೀಡಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನವೆಂಬರ್ 30ರಂದು ಕೃಷಿ ಸಚಿವರಾದ ನರೇಂದ್ರ ತೋಮರ್ ಮಾತನಾಡಿ ಪ್ರತಿಭಟನೆಯಲ್ಲಿ ಎಷ್ಟು ರೈತರು ಪ್ರಾಣಕಳೆದುಕೊಂಡರು, ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಪಂಜಾಬ್ ಸರ್ಕಾರವು ಸುಮಾರು 400 ರೈತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿರುವುದನ್ನು ನೋಡಿದ್ದೇವೆ. ಇದರಲ್ಲಿ 152 ಮಂದಿಯ ಕುಟುಂಬಗಳಿಗೆ ಉದ್ಯೋಗ ನೀಡಿದೆ. ನನ್ನ ಬಳಿ ಪಟ್ಟಿ ಇದೆ ಎಂದಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ
Advertisement
Advertisement
ನಾವು ಹರಿಯಾಣದ 70 ರೈತರ ಮತ್ತೊಂದು ಪಟ್ಟಿಯನ್ನು ಮಾಡಿದ್ದೇವೆ. ಆದರೆ, ನೀವು ಮೃತ ರೈತರ ಮಾಹಿತಿ ಇಲ್ಲ ಎನ್ನುತ್ತಿದ್ದೀರಿ. ರೈತರಿಗೆ ಅವರ ಹಕ್ಕುಗಳನ್ನು ನೀಡಬೇಕು. ಅವರಿಗೆ ಪರಿಹಾರದ ಜೊತೆಗೆ ಅವರ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಾಯಿಯೊಂದಿಗೆ ಸೇರಿ ಅಕ್ಕನನ್ನು ಕೊಂದ ತಮ್ಮ- ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ