ಬಳ್ಳಾರಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಮುಂಜಾನೆ ಏಕಾಏಕಿ ನಗರದ ಹೊರ ವಲಯದಲ್ಲಿರುವ ಇರ್ಷಾದ್ ಅಲಿ ಬಾಬಾ ದರ್ಗಾಕ್ಕೆ ಭೇಟಿ ನೀಡಲು ಮುಂದಾಗಿದ್ದು, ಭದ್ರತಾ ದೃಷ್ಟಿಯಿಂದ ದರ್ಗಾ ಭೇಟಿಯನ್ನು ರದ್ದು ಮಾಡಿದ್ದಾರೆ.
ಬಳ್ಳಾರಿಯ (Ballary) ಸಂಗನಕಲ್ಲು ಹೊರವಲಯದಲ್ಲಿ ವಾಸ್ತವ್ಯ ಇರುವ ರಾಹುಲ್ ಗಾಂಧಿ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ಕ್ಯಾಂಪ್‍ನಿಂದ ದರ್ಗಾ ಭೇಟಿಗೆ ತೆರಳಿದ್ದರು. ಆದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ಕಾರಣ ಪೊಲೀಸರ ನಿಯೋಜನೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಬಳ್ಳಾರಿಯ ಕೌಲಬಜಾರ್ ಪ್ರದೇಶದಲ್ಲಿನ ದರ್ಗಾ ಭೇಟಿ ರದ್ದು ಮಾಡಿದ್ದಾರೆ.
Advertisement
Advertisement
ನಂತರ ಕೌಲಬಜಾರ್ ಪ್ರದೇಶದ ಜನರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಕೌಲಬಜಾರ್ ಪ್ರದೇಶದ ಜೀನ್ಸ್ ಉದ್ಯಮಿಯೊಬ್ಬರ ಮನೆ ಭೇಟಿ ನೀಡಿ ಮರಳಿ ಕ್ಯಾಂಪ್‍ಗೆ ಬಂದಿದ್ದಾರೆ. ರಾಹುಲ್ ಗಾಂಧಿ ಅವರ ಈ ನಿರ್ಧಾರದಿಂದ ಸ್ಥಳೀಯ ಪೊಲೀಸರು ಕೆಲಕಾಲ ಕಂಗಾಲಾಗಿದ್ದು, ಬಳಿಕ ಧರ್ಗಾ ಭೇಟಿಯನ್ನೇ ರದ್ದು ಮಾಡಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರೈತರ ಖಾತೆಗೆ 2 ಸಾವಿರ ಹಣ ಬಿಡುಗಡೆ ಮಾಡಿದ ಪ್ರಧಾನಿ