ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election) ರಾಹುಲ್ ಗಾಂಧಿ (Rahul Gandhi) ಕಾಂಗ್ರೆಸ್ (Congress) ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹೇಳಿದ್ದಾರೆ.
26 ವಿರೋಧ ಪಕ್ಷಗಳ ಐಎನ್‌ಡಿಐಎ (INDIA) ಸಭೆ ಕುರಿತು ಮಾತನಾಡಿದ ಅವರು, ಈ ನಿರ್ಧಾರವನ್ನು ಎಲ್ಲಾ ಪಕ್ಷಗಳು ಚರ್ಚೆ ಮತ್ತು ಸಮಾಲೋಚನೆ ನಡೆಸಿ ನಂತರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಐಎನ್‌ಡಿಐಎ ಮೈತ್ರಿಯ ಅಗತ್ಯತೆಯ ಕುರಿತು ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಸ್ಥಳೀಯ ಅಂಶಗಳೇ ಮುಖ್ಯವಾಗಿರುತ್ತದೆ. ಆದರೆ ದೇಶದ ಪ್ರಸ್ತುತ ಪರಿಸ್ಥಿತಿ ಎಲ್ಲಾ ಪಕ್ಷಗಳ ಮೇಲೆ ಅಗಾಧವಾದ ಒತ್ತಡವನ್ನು ಸೃಷ್ಟಿಸಿದೆ ಎಂದು ಹೇಳಿದರು.
Advertisement
ಸಾರ್ವಜನಿಕರು ಇಂತಹ ಒತ್ತಡ ಸೃಷ್ಟಿಸಿದ್ದು, ಎಲ್ಲ ಪಕ್ಷಗಳ ಮೈತ್ರಿಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಹಂಕಾರಿ ಆಗಬಾರದು. 2014 ರಲ್ಲಿ ಬಿಜೆಪಿ ಕೇವಲ 31% ಮತಗಳಿಂದ ಅಧಿಕಾರಕ್ಕೆ ಬಂದಿದ್ದರಿಂದ ಪ್ರಧಾನಿ ಮೋದಿ ದುರಹಂಕಾರಿಯಾಗಬಾರದು. ಉಳಿದ 69% ಅವರ ವಿರುದ್ಧವಾಗಿದೆ ಎಂದು ಹೇಳಿದರು.
Advertisement
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ 50% ಮತಗಳೊಂದಿಗೆ ಅಧಿಕಾರಕ್ಕೆ ಬರುವಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಕಳೆದ ತಿಂಗಳು ಬೆಂಗಳೂರಿನಲ್ಲಿ ಐಎನ್‌ಡಿಐಎ ಮೈತ್ರಿ ಪಕ್ಷಗಳು ಸಭೆ ನಡೆಸಿದಾಗ ಎನ್‌ಡಿಎ ಭಯಗೊಂಡಿತ್ತು. ಪ್ರಧಾನಿ ಮೋದಿ ಅವರು ಅದನ್ನು ಸಾಧಿಸಲು ಎಂದಿಗೂ ಸಾಧ್ಯವಿಲ್ಲ. ಮೋದಿ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅವರಿಗೆ ಇದನ್ನು ಸಾಧಿಸಲು ಸಾಧ್ಯವಾಗಲಿಲ್ಲ. 2024ರ ಚುನಾವಣೆಯ ಫಲಿತಾಂಶ ಪ್ರಧಾನ ಮಂತ್ರಿ ಯಾರು ಎಂಬುದನ್ನು ನಿರ್ಧರಿಸುತ್ತದೆ ಎಂದರು. ಇದನ್ನೂ ಓದಿ: ಮೋದಿ ಬರ್ತಾರೆ ಅಂತ ಸೌಜನ್ಯಕ್ಕೂ ನನ್ನನ್ನ ಕರೆಯಲಿಲ್ಲ – ಸ್ವಪಕ್ಷೀಯರ ವಿರುದ್ಧವೇ ಎಸ್‌ಟಿಎಸ್ ಅಸಮಾಧಾನ
2014ರಲ್ಲಿ ಕಾಂಗ್ರೆಸ್‌ನಿಂದಾಗಿ ಮೋದಿ ಪ್ರಧಾನಿಯಾದರು. ಪ್ರಜಾಪ್ರಭುತ್ವದಲ್ಲಿ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅನೇಕ ಭರವಸೆಗಳನ್ನು ನೀಡಿದ್ದಾರೆ. ಆದರೆ ಆ ಭರವಸೆಗಳು ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಚಂದ್ರಯಾನ-3ರ ಯಶಸ್ಸಿಗೆ ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಕಾರಣ. ಚಂದ್ರಯಾನ-3ರ ಯಶಸ್ಸಿನಲ್ಲಿ ನೆಹರೂ ಅವರ ಕೊಡುಗೆಯೂ ಮಹತ್ವದ್ದಾಗಿದೆ. ಪ್ರಸ್ತುತ ಸಾಧನೆಗಳು ಇಂದಿರಾ ಗಾಂಧಿ ಮತ್ತು ನೆಹರೂ ಅವರ ಪರಿಶ್ರಮದ ಫಲವಾಗಿದೆ. ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಸಲಹೆಯನ್ನು ನೆಹರೂ ಕೇಳಿದ್ದರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ISRO) ಸ್ಥಾಪಿಸಲಾಯಿತು. ಅಂದು ಬಾಹ್ಯಾಕಾಶ ಕೇಂದ್ರದ ಹೆಸರು ಬೇರೆ ಇತ್ತು. ಆದರೆ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದ ನಂತರ ಅದನ್ನು ಇಸ್ರೋ ಎಂದು ಬದಲಾಯಿಸಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: 140 ಕೋಟಿ ಭಾರತೀಯರಲ್ಲಿ ಕಾಂಗ್ರೆಸ್ಸಿಗರೂ ಇದ್ದಾರೆಂದು ಭಾವಿಸಿದ್ದೇನೆ: ಸಿ.ಟಿ ರವಿ ವ್ಯಂಗ್ಯ
Web Stories