ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹೆಚ್.ಡಿ.ಕುಮಾರಸ್ವಾಮಿ ಹಾಗು ಜಿ.ಪರಮೇಶ್ವರ್ ಇಬ್ಬರಿಗೂ ಟ್ವಟ್ಟರ್‍ನಲ್ಲಿ ಶುಭಕೋರಿದ್ದಾರೆ.
ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವ ಇಬ್ಬರೂ ನಾಯಕರಿಗೆ ಶುಭಾಶಯಗಳು. ಇನ್ನೂ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸತ್ತಿನ ಎಲ್ಲ ವಿರೋಧ ಪಕ್ಷದ ನಾಯಕರಿಗೂ ಧನ್ಯವಾದಗಳು. ನಿಮ್ಮೆನ್ನಲ್ಲ ಭೇಟಿಯಾಗಿರುವುದು ಖುಷಿಯನ್ನು ತಂದಿದೆ ಅಂತಾ ಬರೆದು ಕೊನೆಗೆ #UnitedInVictory (ಒಗ್ಗಟ್ಟಿನಲ್ಲಿ ಜಯವಿದೆ) ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ‘ಮಹಾಘಟ್ ಬಂಧನ್’ ಬಗ್ಗೆ ಸುಳಿವು ನೀಡಿದ್ದಾರೆ.
Advertisement
Advertisement
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ಕೇರಳ ಸಿಎಂ ಪಿಣರಾಯಿ ವಿಜಯನ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತಮಿಳನಾಡಿನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ನಟ ಕಮಲ್ ಹಾಸನ್, ಬಿಎಸ್ ಪಿ ಅಧಿನಾಯಕಿ ಮಾಯಾವತಿ ಸೇರಿದಂತೆ ರಾಷ್ಟ್ರದ ಹಲವು ನಾಯಕರು ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.
Advertisement
ಕರ್ನಾಟದ ರಾಜಕೀಯ ಬೆಳವಣಿಗೆ 2019ರ ಲೋಕಸಭಾ ಚುನಾವಣೆಗೆ ಮುನ್ನುಡಿ ಬರೆದಿದ್ದು, ಬಿಜೆಪಿಯೇತರ ಪಕ್ಷದ ನಾಯಕರೆಲ್ಲಾ ಒಂದಾಗಿ ಸೇರುವ ಮೂಲಕ ಶಕ್ತಿ ಪ್ರದರ್ಶನ ಮಾಡಿವೆ. ರಾಜ್ಯ ಹಾಗು ಕೇಂದ್ರ ಬಿಜೆಪಿ ನಾಯಕರು ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಪ್ರಧಾನಿ ಮೋದಿಯವರು ಟ್ವಟ್ಟರ್ ನಲ್ಲಿ ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಇಬ್ಬರೂ ನಾಯಕರಿಗೆ ಟ್ವಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.
Advertisement
My best wishes to @HD_Kumaraswamy & @DrParameshwara as they begin their new innings as the CM & Deputy CM of Karnataka.
It was a pleasure to meet & share the stage with leaders of opposition parties from all over India, at the swearing in.#UnitedInVictory pic.twitter.com/q57YSXFWOr
— Rahul Gandhi (@RahulGandhi) May 23, 2018
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಿದ್ದರಾಮಯ್ಯ ಸೈಡ್ ಲೈನ್? https://t.co/2TlEKfTYbz#Siddramaiah #Congress #HDKumaraswamy #GParameshwar #JDS #RahulGandhi pic.twitter.com/sZ2892oe0o
— PublicTV (@publictvnews) May 23, 2018