ಚಿತ್ರದುರ್ಗ: ಕೇಂದ್ರದ ಬಿಜೆಪಿ ಆಡಳಿತದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಯುತ್ತಿದೆ. ಈ ಪಾದಯಾತ್ರೆ ಸದ್ಯ ಕರ್ನಾಟಕದಲ್ಲಿ ಮುಂದುವರಿದಿದ್ದು, ರಾಜ್ಯದಲ್ಲೂ ಪಾದಯಾತ್ರೆಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ. ಪಾದಯಾತ್ರೆಯುದ್ದಕ್ಕೂ ಹಲವಾರು ವಿಶೇಷತೆಗಳೊಂದಿಗೆ ರಾಹುಲ್ ಗಾಂಧಿಯವರು ಗಮನ ಸೆಳೆಯುತ್ತಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆಯು ರಾಜ್ಯಕ್ಕೆ ಬಂದು ಈವರೆಗೆ 11 ದಿನವಾಗಿದೆ. ಸದ್ಯ ಪಾದಯಾತ್ರೆಯು ಚಿತ್ರದುರ್ಗದ (Chitradurga) ಚಳ್ಳಕೆರೆ ಭಾಗದಲ್ಲಿ ಸಾಗುತ್ತಿದೆ. ಈ ವೇಳೆ ಚಳ್ಳಕೆರೆ ಹೊರಭಾಗದಿಂದ ಬರುತ್ತಿದ್ದ ಆಂಬುಲೆನ್ಸ್ ಪಾದಯಾತ್ರೆ ನಡುವೆ ಸಿಲುಕಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ರಾಹುಲ್ ಗಾಂಧಿ ಅವರು ತಕ್ಷಣ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಆಂಬುಲೆನ್ಸ್ ಸುಗಮವಾಗಿ ಹೋಗಲು ದಾರಿ ಬಿಟ್ಟರು. ಇದನ್ನೂ ಓದಿ: ರಾಹುಲ್ ಗಾಂಧಿ ಪಾದಕ್ಕೂ ಬಿಎಸ್‍ವೈ ಸಮ ಇಲ್ಲ ಎಂದು ನಾನು ಹೇಳಲ್ಲ: ಸಿದ್ದರಾಮಯ್ಯ
Advertisement
Advertisement
ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ವಿದ್ಯಾರ್ಥಿಗಳು ಸಹ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳ ಕೈ ಹಿಡಿದು ರಾಹುಲ್ ಪಾದಯಾತ್ರೆ ನಡೆಸಿದರು. ಈ ವೇಳೆ ಮಕ್ಕಳಿಗೆ ರಾಹುಲ್ ಚಾಕೊಲೇಟ್ ನೀಡಿದರು.
Advertisement
Advertisement
ಪಾದಯಾತ್ರೆಯಲ್ಲಿ ಬಾಲಕಿಯೊಬ್ಬಳು ಭರತನಾಟ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಳು. ಬಾಲಕಿಯ ಭರತನಾಟ್ಯಕ್ಕೆ ರಾಹುಲ್ ಮನಸೋತರು. ನಾನಾ ವಿಶೇಷತೆಗಳೊಂದಿಗೆ ಪಾದಯಾತ್ರೆ ಸಾಗುತ್ತಿದೆ. ಇದನ್ನೂ ಓದಿ: ಕನಸಲ್ಲಿ ಬರುತ್ತಿದ್ದ ವಿಗ್ರಹಗಳು ಕಣ್ಣೆದುರೇ ಪ್ರತ್ಯಕ್ಷ