– ಇದು ಅತ್ಯಾಚಾರ ಮಾತ್ರವಲ್ಲ, ಸಮೂಹ ಅತ್ಯಾಚಾರ
ಶಿವಮೊಗ್ಗ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರು (Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು ಮಾಸ್ ರೇಪಿಸ್ಟ್ ಎಂದು ಕರೆದಿದ್ದಾರೆ.
Advertisement
ಶಿವಮೊಗ್ಗದ ಫ್ರೀಡಂ ಪಾರ್ಕ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅವರು ಪ್ರಚಾರ ನಡಸಿದರು. ಈ ವೇಳೆ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣ ದೇಶದ ಗಮನ ಸೆಳೆದಿದೆ. ನೂರಾರು ಜನ ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಬದಲಿಗೆ ಇದು ಸಮೂಹ ಅತ್ಯಾಚಾರವಾಗಿದೆ. ಈ ಪ್ರಕರಣ ಬಿಜೆಪಿಯವರಿಗೆ ಗೊತ್ತಿತ್ತು. ಆದರೂ ಪ್ರಧಾನಿ ಆದಿಯಾಗಿ ಆ ಪಕ್ಷದ ಮುಖಂಡರು ಪ್ರಜ್ವಲ್ ರೇವಣ್ಣ ಪರ ಮತ ಯಾಚಿಸಿದ್ದಾರೆ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜರ್ಮನಿಯಿಂದ ದುಬೈಗೆ ಬಂದಿಳಿದ ಪ್ರಜ್ವಲ್ ರೇವಣ್ಣ
Advertisement
Advertisement
ಪ್ರಧಾನಿ ಮೋದಿಯವರು (Narendra Modi) ಪ್ರಜ್ವಲ್ ಪ್ರಕರಣವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಅವರ ಜೊತೆಗೆ ಮೋದಿ ವೇದಿಕೆಯಲ್ಲಿ ಪ್ರಚಾರ ಮಾಡಿದ್ದಾರೆ. ಇದೇ ಬಿಜೆಪಿಯವರ ಸಂಸ್ಕøತಿಯಾಗಿದೆ. ಬಿಜೆಪಿಯವರು ಅಧಿಕಾರಕ್ಕಾಗಿ ಏನು ಬೇಕಾದರು ಮಾಡಲು ತಯಾರಾಗಿದ್ದಾರೆ. ಮಾಸ್ ರೇಪಿಸ್ಟ್ ವಿದೇಶಕ್ಕೆ ಒಡಿಹೋಗಲು ಅನುವು ಮಾಡಿಕೊಟ್ಟಿದ್ದಾರೆ. ಸಿಬಿಐಗೆ ಎಲ್ಲಾ ಅಧಿಕಾರ ಇದ್ದರೂ ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಹೋಗಲು ಬಿಟ್ಟಿದ್ದಾರೆ. ಇದೇ ಮೋದಿಯ ಗ್ಯಾರಂಟಿ. ಮೋದಿ, ಅಮಿತ್ ಶಾ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Advertisement
ಬಿಜೆಪಿಯ ಮುಖಂಡರು ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ. ದೇಶದ ಜನರೊಂದಿಗೆ ಸೇರಿ ಜಾರಿಗೊಳಿಸಿದ್ದ ಸಂವಿಧಾನವನ್ನು ಬದಲಿಸುವ ಮಾತನಾಡುತ್ತಿದ್ದಾರೆ. ಸಂವಿಧಾನ ಜಾರಿಗೆ ತರುವಲ್ಲಿ ಡಾ.ಅಂಬೇಡ್ಕರ್ ಸಾಕಷ್ಟು ಶ್ರಮಿಸಿದ್ದಾರೆ. ಮೀಸಲಾತಿ ನೀಡಬೇಕು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬಿಜೆಪಿಯವರು ಸಮಾನತೆ ವಿರೋಧಿಸುತ್ತಿದ್ದಾರೆ. ಸಮಾನತೆ ಬೇಕು ಎನ್ನುವವರನ್ನು ನಕ್ಸಲ್‍ಗಳು ಎನ್ನುತ್ತಿದ್ದಾರೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಮತ್ತು ಸಂವಿಧಾನವನ್ನು ಕಾಪಾಡುತ್ತೇವೆ ಎನ್ನುತ್ತಾರೆ. ಇನ್ನೊಂದೆಡೆ ಆದಿವಾಸಿಗಳ, ಬುಡಕಟ್ಟು ಜನರ ಮೀಸಲಾತಿ ವಿರೋಧಿಸುತ್ತಿದ್ದಾರೆ. ಈ ಮೂಲಕ ಅವರದೇ ಪಕ್ಷದ ಬುಡಕಟ್ಟು ಸಮಾಜದ ರಾಷ್ಟ್ರಪತಿ ಮಹಿಳೆಗೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿಯವರು ದೇಶದ ಸಂಪತ್ತನ್ನು 22 ಜನರ ಕೈಗೆ ನೀಡಿದ್ದಾರೆ. ಇದೀಗ ಮಹಿಳೆಯರನ್ನು ಲಕ್ಷಾಧಿಪತಿಗಳನ್ನು ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ: ಅಣ್ಣಾಮಲೈ