ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ರಾಹುಲ್ ಗಾಂಧಿ (Rahul Gandhi) ಹಲವು 113 ಬಾರಿ ಭದ್ರತಾ ನಿಯಮ ಉಲ್ಲಂಘನೆ ಮಾಡಿರುವುದಾಗಿ ಕೇಂದ್ರದ ಅರೆಸೇನಾ ಪಡೆ ಸಿಆರ್‌ಪಿಎಫ್ (CRPF) ಹೇಳಿದೆ.
ಡಿಸೆಂಬರ್ 24ರ ಯಾತ್ರೆಯಲ್ಲಿ ಭದ್ರತಾ ವೈಫಲ್ಯ ಉಂಟಾಗಿರುವುದಾಗಿ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಸಿಆರ್‌ಪಿಎಫ್ ಪ್ರತಿಕ್ರಿಯಿಸಿದೆ. ಇದನ್ನೂ ಓದಿ: ಎರಡು ಬಾರಿ ಮಾತ್ರ ಮಗನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಹೀರಾಬೆನ್!
Advertisement
Advertisement
ಪೊಲೀಸರು (Police) ರಾಹುಲ್ ಗಾಂಧಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಗ್ಗೆ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿದ್ದರು. ರಾಷ್ಟ್ರರಾಜಧಾನಿಯಲ್ಲಿ ಭದ್ರತಾ ವೈಫಲ್ಯವಾಗಿರುವ ಆರೋಪವನ್ನು ಭದ್ರತಾ ಪಡೆಯು ನಿರಾಕರಿಸಿದೆ.
Advertisement
Advertisement
ರಾಹುಲ್ ಗಾಂಧಿಗೆ ಅವರಿಗೆ `ಝಡ್ ಪ್ಲಸ್’ (Z Plus Security) ಭದ್ರತೆ ನೀಡಲಾಗಿದ್ದು, ಭಾರತ್ ಜೋಡೋ ಯಾತ್ರೆಯು ಪಂಜಾಬ್, ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಿಸಿದಾಗ ಅಗತ್ಯ ಭದ್ರತೆ ಖಚಿತಪಡಿಸುವಂತೆ ಕಾಂಗ್ರೆಸ್ ಕೋರಿದೆ. ಇದನ್ನೂ ಓದಿ: ಹೀರಾಬೆನ್ ಅಗಲಿಕೆಗೆ ಗಣ್ಯರ ಸಂತಾಪ
ರಾಜ್ಯದ ಪೊಲೀಸರು ಹಾಗೂ ಇತರೆ ಭದ್ರತಾ ಇಲಾಖೆಗಳ ಸಮನ್ವಯದೊಂದಿಗೆ ಸಿಆರ್‌ಪಿಎಫ್ ರಾಹುಲ್ ಗಾಂಧಿ ಅವರಿಗೆ ಅಗತ್ಯ ಭದ್ರತೆಯನ್ನು ಒಗಿಸಿತ್ತು. ಡಿಸೆಂಬರ್ 24ರ ಕಾರ್ಯಕ್ರಮಕ್ಕಾಗಿ ಎರಡು ದಿನ ಮುಂಚಿತವಾಗಿಯೇ ಭದ್ರತಾ ಸಂಪರ್ಕ ಸುಧಾರಣೆ (ಎಎಸ್‌ಎಲ್) ನಡೆಸಲಾಗಿತ್ತು ಎಂದು ಸಿಆರ್‌ಪಿಎಫ್ ಹೇಳಿದೆ. ಪ್ರಮುಖ ಕಾರ್ಯಕ್ರಮಗಳಲ್ಲಿ ವಿಐಪಿಗಳ ಭದ್ರತೆಗಾಗಿ ಭದ್ರತಾ ಪಡೆಗಳು ಯೋಜನೆ ರೂಪಿಸಲು ನಡೆಸುವ ಸಭೆಯನ್ನು ಎಎಸ್‌ಎಲ್ ಎನ್ನಲಾಗುತ್ತದೆ.
ದೆಹಲಿಯಲ್ಲಿ ಯಾತ್ರೆಯ ದಿನ ಭದ್ರತೆಗೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಪೂರ್ಣವಾಗಿ ಅನುಸರಿಸಲಾಗಿದೆ. ಈ ಬಗ್ಗೆ ದೆಹಲಿ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಆದ್ರೆ ರಾಹುಲ್ ಗಾಂಧಿ ಅವರು ಪದೇ ಪದೇ ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ. ಸುರಕ್ಷತೆಗಾಗಿ ಭದ್ರತೆ ನಿಯೋಜಿಸಿದ್ದರೆ, ರಕ್ಷಣೆಗೆ ಒಳಪಟ್ಟಿರುವ ವ್ಯಕ್ತಿಯೇ ಭದ್ರತಾ ನಿಯಮ ಮುರಿಯುವಂತೆ ಮಾಡಿದ್ದಾರೆ. ಅವರಿಗೂ ಇದನ್ನು ಆಗಾಗ್ಗೆ ತಿಳಿಸಲಾಗಿದೆ ಎಂದು ಪ್ರತಿ ಆರೋಪ ಮಾಡಿದೆ.