– 105 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಚುನಾವಣೆಗೆ ರಣಕಹಳೆ
ಹೈದರಾಬಾದ್: ಸರ್ಕಾರದ ಅವಧಿ 8 ತಿಂಗಳು ಬಾಕಿ ಇರುವಂತೆ ವಿಧಾನಸಭೆ ವಿಸರ್ಜನೆ ಮಾಡಿ ಅಚ್ಚರಿ ಮೂಡಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರರಾವ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ದೊಡ್ಡ ಬಫೂನ್ ಎಂದು ಲೇವಡಿ ಮಾಡಿದ್ದಾರೆ.
ವಿಧಾನಸಭೆ ವಿಸರ್ಜನೆ ಬಳಿಕ ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆಸಿಆರ್, ನಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯ ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
Advertisement
అసెంబ్లీ రద్దు తర్వాత తెలంగాణ భవన్ లో ఏర్పాటు చేసిన మీడియా సమావేశంలో పాల్గొన్న పార్టీ అధినేత శ్రీ కేసీఆర్. pic.twitter.com/LluKKZBWm9
— BRS Party (@BRSparty) September 6, 2018
Advertisement
ಇದೇ ವೇಳೆ ಪತ್ರಕರ್ತರು ರಾಹುಲ್ ಗಾಂಧಿ ಕುರಿತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಸಿಆರ್, ರಾಹುಲ್ ದೇಶದಲ್ಲಿ ದೊಡ್ಡ ಬಫೂನ್. ದೇಶವೇ ರಾಹುಲ್ ಗಾಂಧಿ ಸಂಸತ್‍ನಲ್ಲಿ ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಂಡು, ಕಣ್ಣು ಹೊಡೆದಿದ್ದನ್ನು ನೋಡಿದೆ ಎಂದರು. ಅಲ್ಲದೇ ರಾಹುಲ್ ತೆಲಂಗಾಣದಲ್ಲಿ ಪ್ರಚಾರ ಮಾಡಿದರೆ ಪ್ರಭಾವ ಉಂಟಾಗುತ್ತಾ ಎಂಬ ಪ್ರಶ್ನೆಗೆ, ಅವರು ನಮಗೆ ಒಂದು ಶಕ್ತಿ ಇದ್ದ ಹಾಗೇ. ರಾಹುಲ್ ಪ್ರಚಾರಕ್ಕಾಗಿ ತೆಲಂಗಾಣಗೆ ಆಗಮಿಸಿದರೆ ನಾವು ಇನ್ನು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವ್ಯಂಗ್ಯದ ಉತ್ತರ ನೀಡಿದರು. ಇದನ್ನು ಓದಿ: ತೆಲಂಗಾಣ ವಿಧಾನಸಭೆ ವಿಸರ್ಜನೆ- ಗುರುವಾರದಂದೇ ವಿಸರ್ಜಿಸಿದ್ದು ಯಾಕೆ?
Advertisement
Hyderabad: Telangana Rashtra Samithi (TRS) workers burst firecrackers in celebration after Telangana Governor ESL Narasimhan approved assembly dissolution as recommended by CM K Chandrasekhar Rao. Guv has asked Rao to continue as caretaker Telangana CM till the new govt is formed pic.twitter.com/83zhiycQBN
— ANI (@ANI) September 6, 2018
Advertisement
ತೆಲಂಗಾಣ ಜನರು ದೆಹಲಿಯಲ್ಲಿ ಗುಲಾಮರಾಗಲು ಬಯಸುವುದಿಲ್ಲ. ನಮ್ಮ ನಿರ್ಧಾರದಿಂದ ಕಾಂಗ್ರೆಸ್‍ಗೆ ಈಗಾಗಲೇ ಭಯವಾಗಿದ್ದು, ತೆಲಂಗಾಣಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಇಲ್ಲಿಯೇ ತೆಗೆದುಕೊಳ್ಳುತ್ತೇವೆ ಎಂದರು. ಪತ್ರಿಕಾಗೋಷ್ಟಿಯಲ್ಲೇ ಪಕ್ಷದ ಮುಂದಿನ ಚುನಾವಣೆಯ 105 ಅಭ್ಯರ್ಥಿಗಳ ಬಿಡುಗಡೆಗೊಳಿಸಿದ ಕೆಸಿಆರ್, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ `ಪ್ರಜಲ ಅರ್ಶೀವಾದ ಸಭಾ’ ಹೆಸರಿನಲ್ಲಿ 100 ಹೆಚ್ಚು ಸಮಾವೇಶಗಳನ್ನು ನಡೆಸುವುದಾಗಿ ತಿಳಿಸಿದರು.
ತೆಲಂಗಾಣ ವಿಧಾನಸಭೆಯಲ್ಲಿ 119 ಸ್ಥಾನಗಳಿದ್ದು, ಈ ಹಿಂದಿನ ಚುನಾವಣೆಯಲ್ಲಿ ಟಿಆರ್ ಎಸ್ ಪಕ್ಷ 63 ಸ್ಥಾನಗಳಿಸಿತ್ತು. ಕಾಂಗ್ರೆಸ್ 21, ಟಿಡಿಪಿ 15, ವೈಎಸ್‍ಆರ್ ಕಾಂಗ್ರೆಸ್ 3, ಬಿಜೆಪಿ 7, ಓವೈಸಿ ಅವರ ಎಐಎಂಐಎಂ ಪಕ್ಷ 5 ಸ್ಥಾನ ಪಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
105 అసెంబ్లీ స్థానాలకు అభ్యర్థులను ప్రకటించిన శ్రీ కేసీఆర్ – TRS chief sri KCR announces candidates for 105 assembly constituencies.#KCR #Telangana #TRS pic.twitter.com/0bVyFyl9Xi
— BRS Party (@BRSparty) September 6, 2018
CM Sri KCR Addressing the media from Telangana Bhavan. https://t.co/pOeAsaazWo
— BRS Party (@BRSparty) September 6, 2018