ದಲಿತರ ಮನೆಯಲ್ಲಿ ಅಡುಗೆ ಮಾಡಿ `ಪಾಕ ಪ್ರವೀಣ’ನಾದ ರಾಹುಲ್ ಗಾಂಧಿ

Public TV
2 Min Read
Rahul Gandhi with dalit family in kolhapur

ನವದೆಹಲಿ: ಕಾಂಗ್ರೆಸ್ ನಾಯಕ ಇತ್ತೀಚೆಗೆ ರಾಹುಲ್ ಗಾಂಧಿ (Rahul Gandhi) ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದಲಿತ ಕುಟುಂಬದವರೊಂದಿಗೆ ಸೇರಿ ಪಾಕಪದ್ಧತಿ ರುಚಿಯನ್ನು ಸವಿದರು. ಈ ವೀಡಿಯೋವನ್ನು ತಮ್ಮ ಎಕ್ಸ್ (X) ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ಅ.5 ರಂದು ಮಹಾರಾಷ್ಟ್ರದ (Maharashtra) ಕೊಲ್ಲಾಪುರದ (Kolhapur) ಉಂಚಾನ್ ಗ್ರಾಮದಲ್ಲಿ ದಲಿತ ರೈತ ಅಜಯ್ ತುಕಾರಾಂ ಸನಡೆ ಹಾಗೂ ಅಂಜನಾ ತುಕಾರಾಂ ಸನಡೆ ಎನ್ನುವವರ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರ ಪಾಕ ಪದ್ಧತಿ, ಅವರ ಊಟ ಹೇಗಿರುತ್ತದೆ ಎನ್ನುವ ಮಹತ್ವವನ್ನು ತಿಳಿದುಕೊಂಡರು.ಇದನ್ನೂ ಓದಿ:2026ರ ವೇಳೆಗೆ ಸಂಪೂರ್ಣ ನಕ್ಸಲಿಸಂ ಮಟ್ಟ ಹಾಕಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು: ಅಮಿತ್‌ ಶಾ

ಅವರ ಕುಟುಂಬದವರೊಂದಿಗೆ ಸೇರಿ ಮಸಾಲೆ ಭರಿತ ಊಟವನ್ನು ಮಾಡಿ, ತಾವೂ ವಿದರು. ಈ ವೇಳೆ ರಾಹುಲ್ ಗಾಂಧಿಯವರೊAದಿಗೆ `ದಲಿತ್ ಕಿಚನ್ಸ್ ಆಫ್ ಮರಾಠವಾಡ’ ಪುಸ್ತಕದ ಲೇಖಕ ಶಾಹು ಪಟೋಲೆ ಅವರು ಜೊತೆಗಿದ್ದರು.

ನಿಮ್ಮ ದೈನಂದಿನ ಊಟ ಏನು? ಅಡುಗೆ ಪದ್ಧತಿ ಹೇಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅದನ್ನು ತಿಳಿಯಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ ಎಂದರು. ದಲಿತರು ಸಮಾಜದಲ್ಲಿ ಎದುರಿಸುತ್ತಿರುವ ತಾರತಮ್ಯದ ಸಮಸ್ಯೆ ಹೀಗೆ ಬೇರೆ ವಿಷಯಗಳ ಕುರಿತು ಮಾತನಾಡಿದರು. ನಾನಿರುವ ಸ್ಥಾನವನ್ನು ಜನರು ಗೌರವಿಸುತ್ತಾರೆ. ಆದರೆ ನಾನು ಜಾತಿಯನ್ನು ಗೌರವಿಸುವುದಿಲ್ಲ ಎಂದರು.

ಈ ಕುರಿತು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂವಿಧಾನವು ಬಹುಜನರಿಗೆ ಪಾಲು ಮತ್ತು ಹಕ್ಕನ್ನು ನೀಡಿದೆ. ನಾವೆಲ್ಲರೂ ಸಹೋದರತ್ವ ಮನೋಭಾವದಿಂದ ಶ್ರಮಿಸಿದಾಗ ಸಮಾನತೆ ಸಾಧ್ಯ ಎಂದರು. ನಾವು `ಚಾನೆ ಕೆ ಸಾಗ್ ಕಿ ಸಬ್ಜಿ’,`ಹರಭಾರಿಯಾಚಿ ಭಾಜಿ’ ಹಾಗೂ ಬೆಗನ್ ದಾಲ್ ಅಡುಗೆ ಮಾಡಿರುವುದಾಗಿ ತಿಳಿಸಿದ್ದಾರೆ. ಹಂಚಿಕೊಂಡಿರುವ ವೀಡಿಯೋದಲ್ಲಿ ರಾಹುಲ್ ಗಾಂಧಿ ಅಡುಗೆ ಮಾಡಿ, ಅವರೊಟ್ಟಿಗೆ ಊಟ ಮಾಡಿರುವುದು ವೈರಲ್ ಆಗಿದೆ.ಇದನ್ನೂ ಓದಿ:ಕಾಂತರಾಜು ಸಮಿತಿ ವರದಿಗೆ ಆಗ್ರಹ – ಅ.18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

Share This Article