ಮುಂಬೈ: ಭಾರತ್ ಜೋಡೋ ನ್ಯಾಯ್ ಯಾತ್ರೆಯ (Bharat Jodo Nyay Yatre) ಸಮಾರೋಪದಲ್ಲಿ ಎನ್ ಡಿಎ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ರಾಜಾ ಅವರ ಆತ್ಮ ಇವಿಎಂ, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳಲ್ಲಿ ನೆಲೆಸಿದೆ. ಈ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬೆದರಿಸಲಾಗುತ್ತಿದೆ. ಒಂದೋ ನಮ್ಮೊಂದಿಗೆ ಬನ್ನಿ ಇಲ್ಲವೇ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಗಾ ಕಿಡಿಕಾರಿದರು.
Advertisement
#WATCH | Mumbai, Maharashtra: At the conclusion ceremony of the Bharat Jodo Nyay Yatra, Congress leader Rahul Gandhi says, "There is a word 'Shakti' in Hinduism. We are fighting against a Shakti. The question is, what is that Shakti. The soul of the King is in the EVM. This… pic.twitter.com/lL9h9W0sRf
— ANI (@ANI) March 17, 2024
Advertisement
ಪ್ರಧಾನಿ ನರೇಂದ್ರ ಮೋದಿ (Narendra Modi) ಕೇವಲ ಮುಖವಾಡ. ಬಾಲಿವುಡ್ ನಟರಿಗೆ ಪಾತ್ರ ನೀಡಿ ಅದಕ್ಕೆ ತಕ್ಕಂತೆ ನಟಿಸಬೇಕು. ಅದೇ ರೀತಿ ಮೋದಿಗೆ ಪಾತ್ರ ಸಿಕ್ಕಿದೆ. ಪ್ರಧಾನಿ ಮೋದಿ 56 ಇಂಚಿನ ಎದೆಯ ವ್ಯಕ್ತಿಯಲ್ಲ, ಪೊಳ್ಳು ವ್ಯಕ್ತಿ. ಇಡಿ ಮತ್ತು ಇತರ ತನಿಖಾ ಸಂಸ್ಥೆಗಳ ಭಯದಿಂದ ಜನರು ಬಿಜೆಪಿಗೆ ಹೋಗುತ್ತಿದ್ದಾರೆ ಎಂದು ಗಾಂಧಿ ಹೇಳಿದರು.
Advertisement
ಕಾಂಗ್ರೆಸ್ ತೊರೆಯುವ ಮೊದಲು ಸೋನಿಯಾ ಗಾಂಧಿಗೆ (Sonia Gandhi) ಕರೆ ಮಾಡಿ, ಶಕ್ತಿಯ ವಿರುದ್ಧ ಹೋರಾಡಲು ನನಗೆ ಧೈರ್ಯವಿಲ್ಲ ಎಂದು ಅಳುತ್ತಾ ಹೇಳಿದರು. ನನಗೆ ಜೈಲಿಗೆ ಹೋಗಲು ಇಷ್ಟವಿಲ್ಲ ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಬೇರ್ಪಡುತ್ತಿದ್ದೇನೆ ಅಶೋಕ್ ಚವಾಣ್ ಹೆಸರು ಹೇಳದೇ ರಾಹುಲ್ ಉದಾಹರಣೆಯೊಂದನ್ನು ನೀಡಿದರು.
Advertisement
ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ಸೇರಿದಂತೆ ದೇಶದ ಸಂವಹನ ವ್ಯವಸ್ಥೆಯು ದೇಶದ ಕೈಯಲ್ಲಿಲ್ಲದ ಕಾರಣ ನಾವು ಈ ಯಾತ್ರೆಯನ್ನು ಕೈಗೊಳ್ಳಬೇಕಾಯಿತು. ನಿರುದ್ಯೋಗ, ಹಿಂಸಾಚಾರ, ಹಣದುಬ್ಬರ, ರೈತರ ಸಮಸ್ಯೆಗಳಂತಹ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳು ಅಲ್ಲ. ದೇಶದ ಗಮನ ಸೆಳೆಯಲು ನಾವು 4,000 ಕಿ.ಮೀ ನಡೆಯಬೇಕಿತ್ತು ಎಂದು ಗಾಂಧಿ ಹೇಳಿದರು.
ಈ ಮೆಗಾ ರ್ಯಾಲಿಯಲ್ಲಿ ಭಾರತ ಮೈತ್ರಿಕೂಟದ ಎಲ್ಲಾ ನಾಯಕರು ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ವೇಳೆ ಎನ್‌ಸಿಪಿ ನಾಯಕ ಶರದ್ ಪವಾರ್, ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಎಎಪಿ ನಾಯಕ ಸೌರಭ್ ಭಾರದ್ವಾಜ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.