ಕೆಸಿಆರ್‌ ರಿಮೋಟ್‌ ಕಂಟ್ರೋಲ್‌ ಮೋದಿ ಬಳಿಯಿದೆ: ರಾಹುಲ್‌ ಗಾಂಧಿ

Public TV
1 Min Read
rahul gandhi

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (K Chandrashekar Rao) ಅವರ ರಿಮೋಟ್‌ ಕಂಟ್ರೋಲ್‌ ನರೇಂದ್ರ ಮೋದಿ (Narendra Modi) ಅವರ ಬಳಿಯಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.

ಖಮ್ಮಂನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ (BJP) ಬಿ ಟೀಂ ಆಡಳಿತ ನಡೆಸುತ್ತಿದೆ, ಬಿಎಆರ್‌ಎಸ್‌ ಅಂದರೆ ಬಿಜೆಪಿ ರಿಷ್ಟೇದಾರ್ ಸಮಿತಿ ಹೇಳುವ ಮೂಲಕ ವ್ಯಂಗ್ಯವಾಡಿದರು. ಇದನ್ನೂ ಓದಿ: ವಿದ್ಯುತ್ ಬಿಲ್ ಹಿಂಬಾಕಿ ಇದ್ದರೂ ಸಿಗಲಿದೆ ಗೃಹಜ್ಯೋತಿ ಪ್ರಯೋಜನ

ಭ್ರಷ್ಟ ಮತ್ತು ಬಡವರ ವಿರೋಧಿ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಇತ್ತೀಚೆಗೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೋರಾಡಿ ಜಯಗಳಿಸಿದೆ. ತೆಲಂಗಾಣದಲ್ಲಿ ಒಂದು ಬದಿ ರಾಜ್ಯದ ಶ್ರೀಮಂತರು, ಶಕ್ತಿಯುತರು ಇದ್ದರೆ, ಇನ್ನೊಂದು ಬದಿಯಲ್ಲಿ ನಮ್ಮೊಂದಿಗೆ ಬಡವರು, ಬುಡಕಟ್ಟುಗಳು, ಅಲ್ಪಸಂಖ್ಯಾತರು, ರೈತರು ಮತ್ತು ಸಣ್ಣ ಅಂಗಡಿಯವರು ಇದ್ದಾರೆ. ಕರ್ನಾಟಕದ ಫಲಿತಾಂಶ, ತೆಲಂಗಾಣದಲ್ಲಿ ಪುನರಾವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿದರು.

 

ತೆಲಂಗಾಣದಲ್ಲಿ ಬಿಜೆಪಿ ಅಸ್ತಿತ್ವದಲ್ಲಿಲ್ಲ. ಅವರ ಎಲ್ಲಾ ನಾಲ್ಕು ಟಯರ್‌ಗಳು ಪಂಕ್ಚರ್ ಆಗಿವೆ. ಈಗ ಇದು ಕಾಂಗ್ರೆಸ್ ಮತ್ತು ಬಿಜೆಪಿಯ ಬಿ-ಟೀಮ್ ನಡುವೆ ನಡೆಯುವ ಜಗಳವಾಗಿದೆ. ಕಾಂಗ್ರೆಸ್ ಟಿಆರ್‌ಎಸ್‌ನೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಟಿಆರ್‌ಎಸ್ ಸಭೆಯಲ್ಲಿ ಭಾಗವಹಿಸದಂತೆ ನಾವು ಇತರ ಪಕ್ಷಗಳ ನಾಯಕರಿಗೆ ಹೇಳಿದ್ದೇವೆ ಎಂದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article