ನವದೆಹಲಿ: ಕೈಲಾಸ ಯಾತ್ರೆ, ಮಾನಸ ಸರೋವರಕ್ಕೆ ಹೋಗಲು ನಿಗದಿಗೊಳಿಸಿದ್ದ ಅವಧಿ ಮುಗಿದಿದ್ರೂ ವಿಶೇಷ ಅನುಮತಿ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿನಂತಿಸಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣಾ ವೇಳೆ ನಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕೊಂಚ ಏರುಪೇರಾಗಿತ್ತು. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದರೆ ಕೈಲಾಸ ಪರ್ವತಕ್ಕೆ ಬರುತ್ತೇನೆಂದು ಹರಕೆ ಹೊತ್ತುಕೊಂಡಿದ್ದೆ. ಆಗ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದರು. ಹಾಗಾಗಿ ನನಗೆ ಹರಕೆ ತೀರಿಸಲು ವಿಶೇಷ ಅನುಮತಿ ನೀಡಬೇಕೆಂದು ರಾಹುಲ್ ಗಾಂಧಿ ಕೇಳಿಕೊಂಡಿದ್ದಾರೆ. ಇದನ್ನು ಓದಿ: ವಿಮಾನ ಕುಸಿಯುತ್ತಿದ್ದಾಗ ಎಲ್ಲಾ ಮುಗೀತು ಅಂದ್ಕೊಂಡೆ – ಹುಬ್ಬಳ್ಳಿ ಘಟನೆ ಬಗ್ಗೆ ರಾಹುಲ್ ಮಾತು
Advertisement
ಕೈಲಾಸ ಪರ್ವತ ಯಾತ್ರೆಗೆ ನೊಂದಣಿ ಮಾಡಿಸಲು ಫೆಬ್ರವರಿ 20ಕ್ಕೆ ಪ್ರಾರಂಭವಾಗಿ ಮಾರ್ಚ್ 20ಕ್ಕೆ ಮುಕ್ತಾಯವಾಗಿದೆ. ಅಲ್ಲದೇ ಜೂನ್ 8ರಂದು ಯಾತ್ರೆ ಪ್ರಾರಂಭವಾಗಿ ಸೆಪ್ಟೆಂಬರ್ 8 ರವರೆಗೆ ನಡೆಯುತ್ತದೆ. ಅಲ್ಲದೇ ಮೌಂಟ್ ಅಬು ಪರ್ವತವನ್ನು ಹಿಂದೂ, ಮುಸ್ಲಿಂ, ಬೊನ್(ಟಿಬೆಟ್‍ನ ಧರ್ಮ) ಹಾಗೂ ಜೈನ್ ನಾಲ್ಕೂ ಧರ್ಮಗಳಲ್ಲಿ ಪವಿತ್ರ ಕ್ಷೇತ್ರ ಎಂದು ಹೇಳಲಾಗುತ್ತದೆ.
Advertisement
ಕರ್ನಾಟಕ ಚುನಾವಣೆ ಪ್ರಚಾರದ ವೇಳೆಯಲ್ಲಿ ರಾಹುಲ್ ಗಾಂಧಿ ತಾವು ಕೈಲಾಸ ಯಾತ್ರೆ ಕೈಗೊಳ್ಳುತ್ತೇನೆ ಅಂತಾ ಹೇಳಿದ್ದರು. ಅಂದು ಬಿಜೆಪಿ ನಾಯಕ ಚಂದ್ರಶೇಖರ್, ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ ಗಿಮಿಕ್ ಮಾಡ್ತಿದ್ದಾರೆ ಅಂತಾ ಟೀಕಿಸಿದ್ದರು.