-`ಕೈ’ ಐಟಿ ಸೆಲ್‍ನಲ್ಲಿದ್ದ ಕನ್ನಡಿಗರಿಗೆ ಅನ್ಯಾಯ
ಬೆಂಗಳೂರು: ಕಾಂಗ್ರೆಸ್ ಐಟಿ ಸೆಲ್‍ನಲ್ಲಿ ಸದಾ ಕುಟ್ಟುತ್ತಿದ್ದ ರಮ್ಯಾ ಎಲೆಕ್ಷನ್ ರಿಸಲ್ಟ್ ಬಂದ ಮೇಲೆ ಕಣ್ಣಿಗೆ ಕಾಣದಂತೆ ಮಾಯವಾಗಿದ್ದಾರೆ. ಜೊತೆಗೆ ಎಂಟು ಕೋಟಿ ಪಂಗನಾಮ ಹಾಕಿದ ಆರೋಪನೂ ಬಂದಿದ್ದು, ಈಗ ರಮ್ಯಾ ಮೇಲಿನ ಕೋಪಕ್ಕೆ ಕನ್ನಡಿಗರಿಗೆ ರಾಹುಲ್ ಗಾಂಧಿ ಕಹಿ ಕೊಟ್ಟಿದ್ದಾರೆ.
ಎಲ್ಲಾ ವಿಷಯಕ್ಕೂ ಥಟ್ ಎಂದು ಟ್ವೀಟ್ ಮಾಡುತ್ತಾ ಸುದ್ದಿಯಾಗಿದ್ದ ಕಾಂಗ್ರೆಸ್ ಐಟಿ ಸೆಲ್‍ನ ಮಾಜಿ ಮೇಡಂ ರಮ್ಯಾ ಈಗ ರಾಹುಲ್ ಗಾಂಧಿಗೆ ಪಂಗನಾಮ ಹಾಕಿದ್ದಾರಂತೆ. ಸಮೀಕ್ಷೆ ವಿಚಾರದಲ್ಲಿ ಮಂಕುಬೂದಿ ಎರಚಿ ಎಂಟು ಕೋಟಿ ನುಂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ರಮ್ಯಾ ಮೇಲೆ ರಾಹುಲ್ ಮುನಿಸಿಕೊಂಡಿದ್ದಾರೆ. ಇದೇ ಸಿಟ್ಟಿಗೆ ರಮ್ಯಾ ಜೊತೆ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ 15 ರಿಂದ 20 ಮಂದಿ ಕನ್ನಡಿಗರಿಗೆ ಗೇಟ್ ಪಾಸ್ ನೀಡಲಾಗಿದ್ದು, ರಮ್ಯಾ ಕಾಣೆಯಾದ ಬೆನ್ನಲ್ಲೇ ಐಟಿ ಸೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಅವರ ಆಪ್ತರು ರಾಜ್ಯಕ್ಕೆ ಹಿಂದಿರುಗಿದ್ದಾರೆ ಎನ್ನಲಾಗಿದೆ.
Advertisement
Advertisement
ಈ ಸುದ್ದಿಯನ್ನು ತಿಳಿಸಲು ಮಾಧ್ಯಮಗಳ ಮುಂದೆ ಬರಲು ಇಚ್ಛಿಸದ ದೆಹಲಿ ಐಟಿ ಸೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗರೊಬ್ಬರು ಕೆಲಸ ಬಿಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
Advertisement
ಸಿಬ್ಬಂದಿ ಹೇಳಿದ್ದೇನು?
“ನಾನು ಮೂರು ವರ್ಷದಿಂದ ದೆಹಲಿ ಐಟಿ ಸೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದೆ. ರಮ್ಯಾ ಅವರು ದೆಹಲಿ ಮಟ್ಟದಲ್ಲಿ ಐಟಿ ಸೆಲ್ ಮುಖ್ಯಸ್ಥೆಯಾಗಿದ್ದರಿಂದ ಕನ್ನಡಿಗರ ಬಗ್ಗೆ ಕೊಂಚ ಆಕೆಗೆ ಪ್ರೀತಿ ಹೆಚ್ಚಿತ್ತು. ಹಾಗಾಗಿ ಸುಮಾರು 30ರಷ್ಟು ಜನ ಕನ್ನಡಿಗರೇ ಅಲ್ಲಿ ಐಟಿ ಟೀಮ್‍ನಲ್ಲಿದ್ದೆವು. ಚುನಾವಣೆಯ ಸಮೀಕ್ಷೆ ಸೇರಿದಂತೆ ಪ್ರತಿ ಹಂತದಲ್ಲೂ ರಮ್ಯಾ ಜೊತೆ ಕೆಲಸ ಮಾಡಿದ್ದೇವೆ. ಚುನಾವಣೆ ಫಲಿತಾಂಶ ಬಳಿಕ ನಮ್ಮ ಕೆಲಸಕ್ಕೆ ತೊಂದರೆಯಾಗಿದೆ. ರಮ್ಯಾ ಕೂಡ ಈಗ ಐಟಿ ಟೀಮ್‍ನಲ್ಲಿ ಸಕ್ರಿಯವಾಗಿಲ್ಲ. ಪರಿಣಾಮ ನಾವು ಕನ್ನಡಿಗರು ಸುಮಾರು 15 ರಿಂದ 20 ಮಂದಿ ಈಗ ವೈಯಕ್ತಿಕ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದೇವೆ. ಅದಕ್ಕೆ ಕಾರಣವನ್ನು ನಾನು ಹೇಳಲಾರೆ. ಆದರೆ ಇದಕ್ಕೆ ರಮ್ಯಾ ಅವರನ್ನು ಹೊಣೆಯಾಗಿಸಲಾರೆ” ಎಂದು ತಿಳಿಸಿದ್ದಾರೆ.
Advertisement
ತಾವು ಕೆಲಸ ಕಳೆದುಕೊಂಡಿರುವುದಕ್ಕೆ ರಮ್ಯಾರನ್ನು ಹೊಣೆ ಮಾಡಲು ದೆಹಲಿ ಐಟಿ ಸೇಲ್‍ನಲ್ಲಿದ್ದ ಸಿಬ್ಬಂದಿಗೆ ಇಷ್ಟವಿಲ್ಲ. ಹೀಗಾಗಿ ಯಾರು ಕೂಡ ಮಾಧ್ಯಮಗಳ ಮುಂದೆ ಈ ಬಗ್ಗೆ ತಿಳಿಸಲು ಬಂದಿಲ್ಲ. ಆದರೆ ಮೂರು ವರ್ಷದಿಂದ ರಮ್ಯಾ ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಿಂದ ಟೀಮ್ ಕೆಲಸ ಮಾಡುತ್ತಿತ್ತು. ಕನ್ನಡಿಗರ ಜೊತೆ ತುಸು ಹೆಚ್ಚೇ ಬಾಂಧವ್ಯ ಇಟ್ಟುಕೊಂಡಿದ್ದ ರಮ್ಯಾ, ಕಾಂಗ್ರೆಸ್ ಐಟಿ ಟೀಮ್‍ನಲ್ಲೂ ಅವರನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದರು. ಈಗ ರಮ್ಯಾ-ರಾಹುಲ್ ಮುನಿಸಿನಿಂದ ಅವರೆಲ್ಲಾ ಕೆಲಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]