ಸತ್ಯ ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆ ತೆರಲು ಸಿದ್ಧ – ಸರ್ಕಾರಿ ಬಂಗಲೆ ತೊರೆದ ರಾಗಾ

Public TV
2 Min Read
RahulGandhi

ನವದೆಹಲಿ: ಸತ್ಯವನ್ನ ಮಾತನಾಡಿದ್ದಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ಧ ಎಂದು ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ತಿಳಿಸಿದ್ದಾರೆ.

ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಶನಿವಾರ ದೆಹಲಿಯಲ್ಲಿರುವ ಅಧಿಕೃತ ನಿವಾಸ ಖಾಲಿ ಮಾಡಿದರು. ಜನಪಥ್‌ನಲ್ಲಿರುವ ತಾಯಿ ಸೋನಿಯಾಗಾಂಧಿ ಅವರ ನಿವಾಸಕ್ಕೆ ತಮ್ಮ ವಸ್ತುಗಳನ್ನು ಸಾಗಿಸಿದರು. ರಾಹುಲ್‌ ಗಾಂಧಿ ಅವರು ಬಂಗಲೆಯಿಂದ ವಸ್ತುಗಳನ್ನ ಸಾಗಿಸಲು ಸಹೋದರಿ ಪ್ರಿಯಾಂಕಾ ಗಾಂಧಿ ಸಹಾಯ ಮಾಡಿದರು. ಮನೆ ಖಾಲಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ತಮ್ಮ ತಾಯಿಯೊಂದಿಗೆ ಉಳಿಯುವುದಾಗಿ ತಿಳಿಸಿದರು.

ಮುಂದುವರಿದು ಮಾತನಾಡಿ, ಹಿಂದೂಸ್ತಾನದ ಜನರು ನನಗೆ 19 ವರ್ಷಗಳ ಕಾಲ ಈ ಮನೆಯನ್ನ ನೀಡಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಸತ್ಯ ಮಾತನಾಡಿದ್ದಕ್ಕಾಗಿ ಕಟ್ಟಿದ ಬೆಲೆಯಾಗಿದೆ. ಸತ್ಯವನ್ನ ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆ ತೆರಲು ಸಿದ್ಧನಿದ್ದೇನೆ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.

ರಾಹುಲ್‌ ಗಾಂಧಿ ಅವರನ್ನು ಮನೆಯಿಂದ ಖಾಲಿ ಮಾಡಿಸಿರುವುದರ ಬಗ್ಗೆ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷದ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಇದು ಬಿಜೆಪಿ ಸರ್ಕಾರದ ರಾಜಕೀಯ ಸೇಡು ಹಾಗೂ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ ಎಂದು ಕಿಡಿ ಕಾರಿದ್ದಾರೆ. ಆದ್ರೆ ಬಿಜೆಪಿ ಇದು ನ್ಯಾಯಾಲಯದ ತೀರ್ಪು ಎಂದು ಸಮರ್ಥಿಸಿಕೊಂಡಿದೆ.

fotojet 16

ಏನಿದು ವಿವಾದ?
ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ದೋಷಿ ಎಂದು ಸೂರತ್ ಜಿಲ್ಲಾ ಕೋರ್ಟ್‌ (Surat Court) ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ (Kolara) ನಡೆದ ಕಾರ್ಯಕ್ರಮದಲ್ಲಿ ʻಪ್ರಧಾನಿ ಮೋದಿ ಓರ್ವ ಕಳ್ಳʼ ಎಂದು ಮೋದಿ ಉಪನಾಮ ಬಳಿಸಿ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ರಾಹುಲ್‌ ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣ ಪ್ರಕಟಿಸಿತ್ತು.

Rahul Gandhi 9

ಇದರಿಂದ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು. ಈ ಬೆನ್ನಲ್ಲೇ ಲೋಕಸಭಾ ವಸತಿ ಸಮಿತಿ ಸಂಸದರಿಗೆ ನೀಡಲಾಗುವ ವಸತಿ ಗೃಹದ ಸೌಲಭ್ಯ ಹಿಂಪಡೆಯಲು ನಿರ್ಧರಿಸಿ ದೆಹಲಿಯಲ್ಲಿರುವ ತುಘಲಕ್ ಲೇನ್‌ ಬಂಗಲೆ ತೊರೆಯುವಂತೆ ಆದೇಶಿಸಿತ್ತು.

Share This Article