ಅಂಬಾನಿ ಜೇಬಿನಿಂದ ಬಡವರಿಗೆ ಹಣ: ರಾಹುಲ್ ಗಾಂಧಿ

Public TV
3 Min Read
rahul

– ಮೋದಿ ಡೈಲಾಗ್ ಕೇಳಿ ಯುವಕರೆಲ್ಲಾ ಸುಸ್ತು
– ಬಡ ಕುಟುಂಬದ ಮಹಿಳೆಯರ ಖಾತೆಗೆ ಹಣ
– ಕಳ್ಳ ಯಾವತ್ತೂ ದೇಶ ಭಕ್ತನಾಗಲು ಸಾಧ್ಯವಿಲ್ಲ

ಕೋಲಾರ: ಲೋಕಸಭಾ ಚುನಾವಣೆಯ ಭಾಷಣಗಳಲ್ಲಿ ಪ್ರಧಾನಿ ಮೋದಿ ಎಲ್ಲಿಯೂ ಉದ್ಯೋಗ ಖಾತ್ರಿ, ರೈತರ ಬಗ್ಗೆ ಮಾತನಾಡಿಲ್ಲ. 2014ರಲ್ಲಿ 15 ಲಕ್ಷ ರೂ. ಖಾತೆಗೆ ಹಾಕ್ತೀನಿ ಎಂದು ಹೇಳಿದವ್ರು ಎಲ್ಲಿಯೂ ತಮ್ಮ ಭಾಷಣದಲ್ಲಿ ಪ್ರಧಾನಿಗಳು ಉಲ್ಲೇಖಿಸಿಲ್ಲ. ಚೌಕಿದಾರ ಎಂದು ಹೇಳುವ ಮೋದಿ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸುಮಾರು ಆರು ತಿಂಗಳ ಹಿಂದೆ ನಮ್ಮ ಪಕ್ಷದ ಆರ್ಥಿಕ ತಜ್ಞರನ್ನು ಒಳಗೊಂಡ ಸಮಿತಿಯ ಸಭೆ ನಡೆಸಲಾಗಿತ್ತು. ಮೋದಿ 15 ಲಕ್ಷ ನೀಡ್ತೀನಿ ಅಂತಾ ಸುಳ್ಳು ಹೇಳಿದ್ದಾರೆ. ನಿಖರವಾಗಿ ರೈತರ ಖಾತೆಗೆ ಎಷ್ಟು ಹಣ ಹಾಕಬಹುದು ಎಂಬುದರ ಅಂಕಿ-ಅಂಶ ನೀಡಬೇಕೆಂದು ಕೇಳಿಕೊಂಡಿದ್ದೆ. ನಿಖರ ಅಂಕಿ ಅಂಶಗಳ ಪ್ರಕಾರ ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರ, ವರ್ಷಕ್ಕೆ 72 ಸಾವಿರ ನೀಡಲು ಸಾಧ್ಯ ಎಂಬುವುದು ತಿಳಿದಿದೆ. ಅದೇ ಅಂಕಿ-ಅಂಶಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ಪ್ರತಿ ಬಡ ಕುಟುಂಬದ ಮಹಿಳಾ ಸದಸ್ಯರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ಹೇಳಿದರು.

ರಾಹುಲ್ ಭಾಷಣದ ಮುಖ್ಯಾಂಶಗಳು
ನಮ್ಮ ‘ನ್ಯಾಯ’ಯೋಜನೆಗೆ ಹಣ ಅಂಬಾನಿಯಿಂದ ಬರಲಿದೆ. ಮೋದಿಯವರ ಗೆಳೆಯ ಅನಿಲ್ ಅಂಬಾನಿ ಜೇಬಿನಿಂದ ಬಡವರಿಗೆ ಕಾಂಗ್ರೆಸ್ ಹಣ ನೀಡಲಿದೆ. ಚೌಕಿದಾರ ನೂರಕ್ಕೆ ನೂರು ಕಳ್ಳನಾಗಿದ್ದು, ತಮ್ಮದೇ ಆದ ತಂಡವನ್ನು ಹೊಂದಿದ್ದಾರೆ. ನಿಮ್ಮ ಜೇಬಿನಲ್ಲಿರುವ ಹಣ ತೆಗೆದು ನೀರವ್ ಮೋದಿಗೆ ನೀಡಿದ್ರು. ಚೋಕ್ಸಿ, ಲಲಿತ್ ಮೋದಿ, ಸೇರಿದಂತೆ ಎಲ್ಲ ಕಳ್ಳರು ನಿಮ್ಮ ಹಣ ತೆಗೆದುಕೊಂಡು ವಿದೇಶಕ್ಕೆ ಹೋದರು.

500 ಮತ್ತು 1 ಸಾವಿರ ರೂ. ನೋಟ್ ಅಮಾನ್ಯೀಕರಣಗೊಳಿಸಿ ಬಡವರು, ಸಣ್ಣ ವ್ಯಾಪಾರಸ್ಥರು ಬಿಸಿಲಿನಲ್ಲಿ ನಿಲ್ಲುವಂತೆ. ನರೇಂದ್ರ ಮೋದಿ ಕೇವಲ ಮನ್ ಕೀ ಬಾತ್ ಮಾಡುತ್ತಾರೆ. ನಮ್ಮದು ಕಾಮ್ ಕೀ ಬಾತ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಜಿಎಸ್‍ಟಿ ಸರಳೀಕರಣಗೊಳಿಸಲಾಗುವುದು. ಮೋದಿ ತಮ್ಮ ಎಲ್ಲ ಭಾಷಣಗಳಲ್ಲಿಯೂ ಹೊಸ ಹೊಸ ಭರವಸೆಗಳು ನೀಡುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ದೇಶದ ಯುವ ಜನತೆಗೆ ಏನು ಮಾಡಿದ್ದೀರಿ ಎಂಬುದನ್ನು ನೀವು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

klr cONGRES

ರೈತರು ಜೈಲಿಗೆ ಹೋಗಲ್ಲ:
ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ನೀವು ಏನು ಮಾಡಿದ್ದೀರಿ ಎಂಬುದನ್ನು ತಿಳಿಸಬೇಕು. ಅಂಬಾನಿಯನ್ನು ಆಲಿಂಗನ ಮಾಡಿಕೊಂಡು ಫೋಟೋ ತೆಗೆದುಕೊಳ್ಳುವ ನೀವು ರೈತರನ್ನು ಮಾತನಾಡಿಸಲ್ಲ ಯಾಕೆ? ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರೈತರಿಗಾಗಿ ಸಂಸತ್ ನಲ್ಲಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಲಾಗುವುದು. ಅಧಿಕಾರಕ್ಕೆ ಬಂದ ಕೂಡಲೇ ನಿಮ್ಮ ಕಾಂಗ್ರೆಸ್ ಸರ್ಕಾರ ಮೊದಲ ಬಜೆಟ್ ನಲ್ಲಿ ತಿಳಿಸಲು ಪ್ರಯತ್ನಿಸುತ್ತೆವೆ. ರೈತರನ್ನು ಭಯಮುಕ್ತರನ್ನಾಗಿ ಮಾಡಲು ನಾವು ಕೆಲಸ ಮಾಡಲಿದ್ದೇವೆ. ಅನಿಲ್ ಅಂಬಾನಿಯಂತಹ ಉದ್ಯಮಿ ಸಾಲ ಪಡೆದರೂ ಹಣ ಮರುಪಾವತಿ ಮಾಡಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಸಾಲ ಮರುಪಾವತಿ ಮಾಡದ ರೈತ ಜೈಲಿಗೆ ಹೋಗಲ್ಲ ಎಂದು ಕಾಂಗ್ರೆಸ್ ಭರವಸೆ ನೀಡುತ್ತಿದೆ.

ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಘೋಷಣೆಗಳನ್ನು ಕೇಳಿ ಯುವಕರು ಸುಸ್ತಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಖಾಲಿ ಇರುವ ಎಲ್ಲ ಕೇಂದ್ರ ಸರ್ಕಾರದ ಹುದ್ದೆಗಳನ್ನು ಭರ್ತಿ ಮಾಡುತ್ತವೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಸುಳ್ಳು ಹೇಳಿದ್ದರು. ಪ್ರತಿ ಬಡವರ ಖಾತೆಗೆ ಹಣ ಹಾಕಲು ನಾವು ಬದ್ಧವಾಗಿದ್ದೇವೆ. ಕಳ್ಳ ಯಾವತ್ತೂ ದೇಶ ಭಕ್ತನಾಗಲು ಸಾಧ್ಯವಿಲ್ಲ.

Share This Article
Leave a Comment

Leave a Reply

Your email address will not be published. Required fields are marked *