ವಾಷಿಂಗ್ಟನ್: ರಾಹುಲ್ ಗಾಂಧಿ (Rahul Gandhi) ಪಪ್ಪು ಅಲ್ಲ, ಯಾವುದೇ ವಿಷಯದ ಬಗ್ಗೆ ಆಳವಾದ ಚಿಂತನೆಯನ್ನು ಹೊಂದಿರುವ ದೂರದೃಷ್ಟಿ ವ್ಯಕ್ತಿ ಎಂದು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಬಣ್ಣಿಸಿದ್ದಾರೆ.
ಟೆಕ್ಸಾಸ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಿಜೆಪಿ ಪ್ರಚಾರ ಮಾಡುತ್ತಿರುವುದಕ್ಕೆ ವಿರುದ್ಧವಾದ ದೃಷ್ಟಿಯನ್ನು ಅವರು ಹೊಂದಿದ್ದಾರೆ. ಅವರು ಪಪ್ಪು (Pappu) ಅಲ್ಲ. ಅವರು ಹೆಚ್ಚು ವಿದ್ಯಾವಂತರು, ಚೆನ್ನಾಗಿ ಓದುತ್ತಾರೆ, ಯಾವುದೇ ವಿಷಯದ ಬಗ್ಗೆ ಆಳವಾದ ಚಿಂತನೆಯನ್ನು ಹೊಂದಿದ್ದಾರೆ. ಅವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಸುಲಭವಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಳಿ ಮೇಲಿದ್ದ ಸಿಲಿಂಡರ್‌ಗೆ ಗುದ್ದಿದ ರೈಲು – ಕಾನ್ಪುರದಲ್ಲಿ ರೈಲು ದುರಂತಕ್ಕೆ ಸಂಚು!
Advertisement
Chairman of Indian Overseas Congress, Sam Pitroda says in Texas, USA:
Rahul Gandhi is NOT a PAPPU. He is educated, intelligent and smart strategists… pic.twitter.com/duB9lbsVlb
— Megh Updates 🚨™ (@MeghUpdates) September 9, 2024
ರಾಹುಲ್ ಗಾಂಧಿ ಅವರು ಭಾನುವಾರ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ (Texas University) ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರ ಸಭೆಯನ್ನುದ್ದೇಶಿಸಿ ಮಾತನಾಡಿದರು.
Advertisement
ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಸೆ.8 ರಿಂದ ಅಮೆರಿಕ ಪ್ರವಾಸದಲ್ಲಿದ್ದಾರೆ.
Advertisement
ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಮೊದಲ ಬಾರಿಗೆ ಅಮೆರಿಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಈ ಹಿಂದೆ 2023ರ ಮೇ ತಿಂಗಳಿನಲ್ಲಿ ಅಮೆರಿಕ ರಾಹುಲ್ ತೆರಳಿದ್ದರು.
Advertisement